For Quick Alerts
  ALLOW NOTIFICATIONS  
  For Daily Alerts

  ರಣ್ಬೀರ್ ಯಾರನ್ನೇ ಮದುವೆಯಾದರೂ ನಮಗೇನೂ ಅಭ್ಯಂತರ ಇಲ್ಲ ಎಂದ ರಿಶಿ ಕಪೂರ್.!

  By Harshitha
  |

  ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿರುವ ಹೆಸರು 'ರಣ್ಬೀರ್ ಕಪೂರ್'. ಬಾಲಿವುಡ್ ನಟ ಸಂಜಯ್ ದತ್ ಆಗಿ 'ಸಂಜು' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ಮೇಲೆ, ರಣ್ಬೀರ್ ಕಪೂರ್ ಡಿಮ್ಯಾಂಡ್ ಡಬಲ್ ಆಗಿದೆ.

  'ಸಂಜು' ಚಿತ್ರದಿಂದಾಗಿ ರಣ್ಬೀರ್ ಕಪೂರ್ ವೃತ್ತಿ ಜೀವನಕ್ಕೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಂತಾಗಿದೆ. ಈ ನಡುವೆ ರಣ್ಬೀರ್ ಕಪೂರ್ ವೈಯುಕ್ತಿಕ ವಿಚಾರಗಳಿಂದಲೂ ಸದ್ದು ಮಾಡುತ್ತಿದ್ದಾರೆ.

  ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್ ರಿಂದ ದೂರವಾದ್ಮೇಲೆ, ಆಲಿಯಾ ಭಟ್ ಜೊತೆಗೆ ರಣ್ಬೀರ್ ಕಪೂರ್ ಹೆಸರು ತಳುಕು ಹಾಕಿಕೊಂಡಿದೆ. ಆಲಿಯಾ ಹಾಗೂ ರಣ್ಬೀರ್ ಮಧ್ಯೆ ಏನೋ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಸದ್ಯ ಗುಟ್ಟಾಗಿ ಉಳಿದಿಲ್ಲ.

  ರಣ್ಬೀರ್-ಆಲಿಯಾ ಲವ್ ಮ್ಯಾಟರ್ ಕಪೂರ್ ಕುಟುಂಬದ ಗಮನಕ್ಕೂ ಬಂದಿದೆ. ಹೀಗಾಗಿ, ''ಆದಷ್ಟು ಬೇಗ ರಣ್ಬೀರ್ ಕಪೂರ್ ಮದುವೆ ಆದರೆ ಸಾಕು'' ಅಂತ ತಂದೆ ರಿಶಿ ಕಪೂರ್ ಹೇಳಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ರಿಶಿ ಕಪೂರ್ ಏನಂತ ಹೇಳಿದ್ದಾರೆ ಅಂತ ನೀವೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....

  ಆದಷ್ಟು ಬೇಗ ಮದುವೆ ಆದರೆ ಸಾಕು

  ಆದಷ್ಟು ಬೇಗ ಮದುವೆ ಆದರೆ ಸಾಕು

  ''ಆದಷ್ಟು ಬೇಗ ರಣ್ಬೀರ್ ಕಪೂರ್ ಮದುವೆ ಆಗಬೇಕು. ನಾನು ಮದುವೆಯಾದಾಗ ನನಗೆ 27 ವರ್ಷ. ಆದ್ರೀಗ, ರಣ್ಬೀರ್ ವಯಸ್ಸು 35 ದಾಟಿದೆ. ಹೀಗಾಗಿ, ಆತ ಮದುವೆ ಬಗ್ಗೆ ಬೇಗ ನಿರ್ಧಾರ ಮಾಡಬೇಕು. ರಣ್ಬೀರ್ ತನ್ನ ಇಷ್ಟದ ಹುಡುಗಿಯನ್ನೇ ಮದುವೆ ಆಗಲಿ, ನಮಗೇನೂ ಅಭ್ಯಂತರ ಇಲ್ಲ. ನಾನು ಇಹಲೋಕ ತ್ಯಜಿಸುವ ಮುನ್ನ ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕು ಅನ್ನೋದು ನನ್ನ ಆಸೆ'' ಅಂತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ರಿಶಿ ಕಪೂರ್.

  ಅರೇ.. ಆಲಿಯಾ ಹೀಗ್ ಮಾಡಿದ್ಯಾಕೆ? ರಣ್ಬೀರ್ ಸಿಟ್ಟು ಮಾಡ್ಕೊಂಡಿದ್ದಾರಾ?ಅರೇ.. ಆಲಿಯಾ ಹೀಗ್ ಮಾಡಿದ್ಯಾಕೆ? ರಣ್ಬೀರ್ ಸಿಟ್ಟು ಮಾಡ್ಕೊಂಡಿದ್ದಾರಾ?

  ಮಾತು ಮರೆಸುವ ರಣ್ಬೀರ್

  ಮಾತು ಮರೆಸುವ ರಣ್ಬೀರ್

  ''ರಣ್ಬೀರ್ ಮುಂದೆ ನನ್ನ ಪತ್ನಿ ಮದುವೆ ಮಾತುಕತೆ ಮಾಡುತ್ತಲೇ ಇರುತ್ತಾಳೆ. ಆದ್ರೆ, ಮದುವೆ ಬಗ್ಗೆ ಮಾತು ಶುರು ಮಾಡಿದ ತಕ್ಷಣ ರಣ್ಬೀರ್ ಮಾತು ಮರೆಸುತ್ತಾನೆ. ಮದುವೆಗೆ ಆತ ಸಿದ್ಧನಾದರೆ ನಮಗೆ ಖುಷಿ. ಎಷ್ಟೇ ಆಗಲಿ, ಅವನು (ರಣ್ಬೀರ್) ಖುಷಿಯಾಗಿದ್ದರೆ, ನಾವೂ ಖುಷಿ ಆಗಿರುತ್ತೇವೆ'' ಅಂತಾರೆ ರಿಶಿ ಕಪೂರ್

  'ಸಂಜು' ಸಿನಿಮಾ ನೋಡಿದ್ಮೇಲೆ ಆಲಿಯಾ ಭಟ್ ಹೇಳಿದ್ದೇನು.?'ಸಂಜು' ಸಿನಿಮಾ ನೋಡಿದ್ಮೇಲೆ ಆಲಿಯಾ ಭಟ್ ಹೇಳಿದ್ದೇನು.?

  ಬುದ್ಧಿವಂತಿಕೆಯ ಉತ್ತರ ಕೊಟ್ಟ ರಿಶಿ

  ಬುದ್ಧಿವಂತಿಕೆಯ ಉತ್ತರ ಕೊಟ್ಟ ರಿಶಿ

  ''ರಣ್ಬೀರ್ ಡೇಟ್ ಮಾಡುತ್ತಿರುವುದು ಆಲಿಯಾ ಭಟ್ ರನ್ನೇ ಅಲ್ಲವೇ.?'' ಎಂದು ಪ್ರಶ್ನಿಸಿದ್ದಕ್ಕೆ, ''ಯಾರಿದ್ದಾರೋ, ಅವರೇ ಇದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ'' ಎಂದು ಬುದ್ಧಿವಂತಿಕೆಯ ಉತ್ತರ ಕೊಟ್ಟರು ರಿಶಿ ಕಪೂರ್.

  ಇನ್ನೆರಡು ವರ್ಷಗಳಲ್ಲಿ ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ.?ಇನ್ನೆರಡು ವರ್ಷಗಳಲ್ಲಿ ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ.?

  ರಣ್ಬೀರ್-ಆಲಿಯಾ 'ಬ್ರಹ್ಮಾಸ್ತ್ರ'

  ರಣ್ಬೀರ್-ಆಲಿಯಾ 'ಬ್ರಹ್ಮಾಸ್ತ್ರ'

  ಸದ್ಯ ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ 'ಬ್ರಹ್ಮಾಸ್ತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಬಲ್ಗೇರಿಯಾಗೆ ತೆರಳಿದ್ದಾರೆ. 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಾಗಾರ್ಜುನ, ಅಮಿತಾಬ್ ಬಚ್ಚನ್ ರಂತಹ ದಿಗ್ಗಜರೂ ಅಭಿನಯಿಸುತ್ತಿದ್ದಾರೆ. 'ಸಂಜು' ಸಕ್ಸಸ್ ಬಳಿಕ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವ ರಣ್ಬೀರ್ ಕಪೂರ್ ಮದುವೆಗೆ ಯಾವಾಗ ಗ್ರೀನ್ ಸಿಗ್ನಲ್ ಕೊಡ್ತಾರೋ.?!

  English summary
  Rishi Kapoor wants Ranbir Kapoor to marry as soon as possible.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X