For Quick Alerts
  ALLOW NOTIFICATIONS  
  For Daily Alerts

  ಮಾಂಸಾಹಾರ, ಕಾಫಿ ತ್ಯಜಿಸಿದ ನಟ ರಿತೇಶ್ ದೇಶ್‌ಮುಖ್: ಕಾರಣವೇನು?

  |

  ಬಾಲಿವುಡ್‌ನ ಫಿಟ್ ನಟರಲ್ಲೊಬ್ಬರು ರಿತೇಶ್ ದೇಶ್‌ಮುಖ್. ಸಿಕ್ಸ್‌ ಪ್ಯಾಕ್‌ಗಳಿಲ್ಲದಿದ್ದರೂ ದೇಹತೂಕ ಹೆಚ್ಚಿಸಿಕೊಳ್ಳದೆ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡು ಬಂದಿದ್ದಾರೆ.

  ಅತಿಯಾದ ಡಯಟ್ ಮೊದಲಿನಿಂದಲೂ ಮಾಡದಿದ್ದ ರಿತೇಶ್, ಮಾಂಸಾಹಾರವನ್ನು ಬಯಸಿ-ಬಯಸಿ ತಿನ್ನುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಮಾಂಸಾಹಾರ ತ್ಯಜಿಸಿಬಿಟ್ಟಿದ್ದಾರೆ ರಿತೇಶ್.

  ಸುದೀಪ್ ಫಾಲೋ ಮಾಡುತ್ತಿರುವ 4 ಬಾಲಿವುಡ್ ಸ್ಟಾರ್ ಗಳು ಇವರೇಸುದೀಪ್ ಫಾಲೋ ಮಾಡುತ್ತಿರುವ 4 ಬಾಲಿವುಡ್ ಸ್ಟಾರ್ ಗಳು ಇವರೇ

  ಮಾಂಸಾಹಾರ, ಬ್ಲ್ಯಾಕ್ ಕಾಫಿ ಯನ್ನು ವರ್ಜಿಸಿದ್ದಾರೆ ನಟ ರಿತೇಶ್ ದೇಶ್‌ಮುಖ್. ಈ ನಿರ್ಣಯದ ಹಿಂದೆ ಉತ್ತಮವಾದ ಉದ್ದೇಶವಿದೆ. ರಿತೇಶ್ ಕೇವಲ ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಂಡಿಲ್ಲ.

  ತಮ್ಮ ಆರೋಗ್ಯಕ್ಕಾಗಿ ತ್ಯಾಗ ಮಾಡಿಲ್ಲ ರಿತೇಶ್

  ತಮ್ಮ ಆರೋಗ್ಯಕ್ಕಾಗಿ ತ್ಯಾಗ ಮಾಡಿಲ್ಲ ರಿತೇಶ್

  ಹೌದು, ರಿತೇಶ್ ಮಾಂಸಾಹಾರ, ಕಾಫಿ ಹಾಗೂ ಇತರೆ ಪೇಯಗಳನ್ನು ತ್ಯಜಿಸಿರುವುದು ತಮ್ಮ ಒಬ್ಬರ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ. ತಾವು ಬಿಟ್ಟು ಹೋಗುವ ದೇಹದ ಅಂಗಗಳು ಬಳಸುವ ಮತ್ತೂ ಕೆಲವು ವ್ಯಕ್ತಿಗಳ ಆರೋಗ್ಯದ ದೃಷ್ಟಿಯಿಂದ.

  ಅಂಗಾಂಗ ದಾನ ಮಾಡಿರುವ ರಿತೇಶ್ ದೇಶ್‌ಮುಖ್

  ಅಂಗಾಂಗ ದಾನ ಮಾಡಿರುವ ರಿತೇಶ್ ದೇಶ್‌ಮುಖ್

  ನಟ ರಿತೇಶ್ ದೇಶ್‌ಮುಖ್ ತಮ್ಮ ದೇಹದ ಅಂಗಗಳನ್ನು ದಾನ ಮಾಡಿದ್ದಾರೆ. ತಾವು ಬಿಟ್ಟು ಹೋಗುವ ಅಂಗಾಗಳನ್ನು ಉಪಯೋಗಿಸುವ ವ್ಯಕ್ತಿಯ ಆರೋಗ್ಯವೂ ಚೆನ್ನಾಗಿರಬೇಕು ಹಾಗಾಗಿ ನಾನು ನನ್ನ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದಿದ್ದಾರೆ ರಿತೇಶ್.

  ಜೆನಿಲಿಯಾ ದಂಪತಿಯ ಮಹತ್ವಾಕಾಂಕ್ಷೆ ಸಿನಿಮಾ ಸೆಟ್ಟೇರಿದೆಜೆನಿಲಿಯಾ ದಂಪತಿಯ ಮಹತ್ವಾಕಾಂಕ್ಷೆ ಸಿನಿಮಾ ಸೆಟ್ಟೇರಿದೆ

  ನಾಲ್ಕು ಜನ ಸಂತಸ ಪಟ್ಟು ಹೊಗಳಬೇಕು: ರಿತೇಶ್

  ನಾಲ್ಕು ಜನ ಸಂತಸ ಪಟ್ಟು ಹೊಗಳಬೇಕು: ರಿತೇಶ್

  'ನಾನು ಮಾಂಸಾಹಾರ, ಬ್ಲ್ಯಾಕ್ ಕಾಫಿ, ಇತರೆ ಹಾನಿಕಾರಕ ಪೇಯಗಳನ್ನು ಕುಡಿಯುವುದು ಬಿಟ್ಟಿದ್ದೇನೆ. ನಾನು ನನ್ನ ದೇಹದ ಅಂಗಾಂಗಗಳನ್ನು ದಾನ ಮಾಡಿದಾಗ, ಆ ವ್ಯಕ್ತಿ ಆರೋಗ್ಯಕರ ಅಂಗಗಳನ್ನು ದಾನ ಮಾಡಿ ಹೋಗಿದ್ದಾನೆ ಎಂದು ಜನರು ಹೇಳಿಕೊಳ್ಳಬೇಕು, ಇದೇ ನನ್ನ ಆಸೆ' ಎಂದಿದ್ದಾರೆ ರಿತೇಶ್.

  ಕಿಚ್ಚನ 'ದಿ ವಿಲನ್' ಖದರ್ ಗೆ ಮನಸೋತ ಬಾಲಿವುಡ್ ನಟಕಿಚ್ಚನ 'ದಿ ವಿಲನ್' ಖದರ್ ಗೆ ಮನಸೋತ ಬಾಲಿವುಡ್ ನಟ

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada
  ರಿತೇಶ್ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

  ರಿತೇಶ್ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

  ರಿತೇಶ್ ಅವರ ಈ ನಿರ್ಣಯಕ್ಕೆ ಸಾಕಷ್ಟು ಮಂದಿ ಶಹಭಾಸ್ ಹೇಳಿದ್ದಾರೆ. ಕೊರೊನಾ ಲಾಕ್‌ಡೌನ್ ನಿಂದ ಸಿನಿಮಾ ಚಿತ್ರೀಕರಣ ತಪ್ಪಿಸಿಕೊಂಡಿದ್ದ ರಿತೇಶ್ ಇತ್ತೀಚೆಗಷ್ಟೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಸಿನಿಮಾದಿಂದ ದೂರ ಉಳಿದಿದ್ದ ಅವರ ಪತ್ನಿ ಜೆನಿಲಿಯಾ ಸಹ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಾಗಿ ಇತ್ತೀಚೆಗಷ್ಟೆ ಹೇಳಿಕೊಂಡಿದ್ದಾರೆ.

  English summary
  Actor Riteish Deshmukh gives up meat and black coffee not only because of his health, for those who are going to use his body organs in future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X