Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್‌ನಲ್ಲಿ ಸೋತ ರಿತೇಶ್-ಜೆನಿಲಿಯಾಗೆ ಮರಾಠಿಯಲ್ಲಿ ಭಾರಿ ಗೆಲುವು!
ಬಾಲಿವುಡ್‌ನಲ್ಲಿ ಕೆಲವು ನಾಯಕ ನಟರಿದ್ದಾರೆ ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಆದರೆ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದೇ ಇಲ್ಲ. ವರ್ಷಗಳಿಂದಲೂ ಇವರು ಆರಕ್ಕೇರುತ್ತಿಲ್ಲ ಮೂರಕ್ಕಿಳಿಯುತ್ತಿಲ್ಲ.
ವಿವೇಕ್ ಒಬೆರಾಯ್, ರಿತೇಶ್ ದೇಶ್‌ಮುಖ್, ಅರ್ಷದ್ ವಾರ್ಸಿ, ಅಕ್ಷಯ್ ಖನ್ನಾ, ತುಶಾರ್ ಕಪೂರ್, ಅಫ್ತಾಬ್ ಶಿವದಾಸನಿ ಇವರಲ್ಲಿ ಪ್ರಮುಖರು. ತುಶಾರ್ ಕಪೂರ್ ಅಂತೂ ಬಾಲಿವುಡ್‌ನಿಂದ ದೂರವೇ ಆಗಿದ್ದಾರೆ. ವಿವೇಕ್ ಒಬೆರಾಯ್ ದಕ್ಷಿಣದ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅರ್ಷದ್ ವಾರ್ಸಿ ಪೋಷಕ ಪಾತ್ರಗಳಿಗೆ ಸೆಟಲ್ ಆಗಿದ್ದಾರೆ. ಅಫ್ತಾದ್ ಸಹ ದಕ್ಷಿಣದತ್ತ ಮುಖ ಮಾಡಿದ್ದಾರೆ. ಇನ್ನುಳಿದ ರಿತೇಶ್ ದೇಶ್‌ಮುಖ್ ಮರಾಠಿ ಸಿನಿಮಾಗಳತ್ತ ಮುಖ ಮಾಡಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಪುತ್ರ ಆಗಿರುವ ರಿತೇಶ್ ದೇಶ್‌ಮುಖ್ ಬಾಲಿವುಡ್ ಸಿನಿಮಾಗಳಲ್ಲಿ ಸೋತು ಸುಣ್ಣವಾಗಿದ್ದರು. ಟಿವಿ ಶೋ ಸಹ ಪ್ರಾರಂಭಿಸಿ ಅಲ್ಲಿಯೂ ದೊಡ್ಡ ಹೆಸರು ಮಾಡಲು ವಿಫಲರಾಗಿ ಕೊನೆಗೆ ಇತ್ತೀಚೆಗೆ ಮರಾಠಿ ಸಿನಿಮಾ ಒಂದರಲ್ಲಿ ನಟಿಸಿದ್ದು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು ಮಾತ್ರವಲ್ಲ, ಮರಾಠಿ ಚಿತ್ರರಂಗದಲ್ಲಿ ದಾಖಲೆಗಳನ್ನೇ ಬರೆಯುತ್ತಿದೆ.
ರಿತೇಶ್ ದೇಶ್‌ಮುಖ್ ಹಾಗೂ ಅವರ ಪತ್ನಿ ಜೆನಿಲಿಯಾ ಒಟ್ಟಿಗೆ ಸೇರಿ 'ವೇದ್' ಹೆಸರಿನ ಮರಾಠಿ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಅದ್ಯಾವ ಮಟ್ಟಿಗೆ ದೊಡ್ಡ ಕಲೆಕ್ಷನ್ ಅನ್ನನು ಈ ಸಿನಿಮಾ ಮಾಡುತ್ತಿದೆಯೆಂದರೆ ಮರಾಠಿ ಚಿತ್ರರಂಗದಲ್ಲಿ ಈ ವರೆಗಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿ ಮುಂದೆ ಸಾಗುತ್ತಿದೆ.
'ವೇದ್' ಮರಾಠಿ ಸಿನಿಮಾ ಕೇವಲ ಎರಡು ವಾರಕ್ಕೆ 40 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ಮರಾಠಿಯಲ್ಲಿ ಈ ವರೆಗೆ ಅತಿ ಹೆಚ್ಚು ಹಣ ಗಳಿಸಿರುವ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ 'ವೇದ್' ಏರಿದ್ದು ಕೆಲವೇ ದಿನಗಳಲ್ಲಿ ಮೊದಲ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ.
ಅಂದಹಾಗೆ ಅತಿ ಹೆಚ್ಚು ಹಣ ಗಳಿಸಿದ ಮರಾಠಿ ಸಿನಿಮಾ ಎಂಬ ಖ್ಯಾತಿ 2016 ರಲ್ಲಿ ಬಿಡುಗಡೆ ಆಗಿರುವ 'ಸೈರಾಟ್' ಸಿನಿಮಾದ್ದಾಗಿದೆ. ಈ ಸಿನಿಮಾದ ದಾಖಲೆಯನ್ನು ಇನ್ನು ಕೆಲವೇ ದಿನಗಳಲ್ಲಿ ರಿತೇಶ್‌ರ 'ವೇದ್' ಮುರಿಯಲಿದೆ ಎನ್ನಲಾಗುತ್ತಿದೆ.
ಅಂದಹಾಗೆ 'ವೇದ್' ಸಿನಿಮಾವು ತೆಲುಗಿನ 'ಜೆರ್ಸಿ' ಸಿನಿಮಾದ ರೀಮೇಕ್ ಆಗಿದೆ. ಮೂಲ ಸಿನಿಮಾದಲ್ಲಿಯೂ ನಿಜ ಜೀವನದಲ್ಲಿ ಪತಿ ಪತ್ನಿಯಾಗಿದ್ದ ನಾಗ್ ಚೈತನ್ಯ ಹಾಗೂ ಸಮಂತಾ ನಟಿಸಿದ್ದರು. ಇದರ ಮರಾಠಿ ರೀಮೇಕ್ 'ವೇದ್'ನಲ್ಲಿಯೂ ಪತಿ ಪತ್ನಿಯಾಗಿರುವ ರಿತೇಶ್ ದೇಶ್‌ಮುಖ್ ಹಾಗೂ ಜೆನಿಲಿಯಾ ನಟಿಸಿದ್ದಾರೆ.
ರಿತೇಶ್ ದೇಶ್‌ಮುಖ್‌ಗೆ 'ವೇದ್' ಮೊದಲ ಮರಾಠಿ ಸಿನಿಮಾ ಏನಲ್ಲ. ಈ ಮೊದಲು 'ಲೇ ಬಾಹ್ರಿ' ಹಾಗೂ 'ಮೌಳಿ' ಹೆಸರಿನ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದರು ಹಾಗೂ ಒಂದು ಮರಾಠಿ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದರು.
ಇದೀಗ ನಟಿಸಿರುವ 'ವೇದ್' ಸಿನಿಮಾವನ್ನು ಸ್ವತಃ ರಿತೇಶ್ ದೇಶ್‌ಮುಖ್ ಅವರೇ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ರಿತೇಶ್‌ರ ಪತ್ನಿ ಜೆನಿಲಿಯಾ. ಅವರು ನಾಯಕಿಯೂ ಹೌದು. ಈ ಸಿನಿಮಾದ ಹಿಟ್ ಬಳಿಕ ರಿತೇಶ್ ದೇಶ್‌ಮುಖ್ ಮರಾಠಿ ಚಿತ್ರರಂಗದಲ್ಲಿಯೇ ನೆಲೆಗೊಳ್ಳುವ ಸಾಧ್ಯತೆಯೂ ಇದೆ.