For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಮ್ ನಲ್ಲಿ ಕತ್ರೀನಾ ಕೈಫ್ ಅವರನ್ನು ಬ್ಲಾಕ್ ಮಾಡಿದ ಸ್ಟಾರ್ ನಿರ್ದೇಶಕ

  |

  ಬಾಲಿವುಡ್ ಖ್ಯಾತ ನಟಿ ಕತ್ರೀನಾ ಕೈಫ್ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಬಾಲಿವುಡ್ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿರುವ ಮಾತು ಕತ್ರೀನಾ ಅಭಿಮಾನಿಗಳನ್ನು ಕೆರಳಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ "ಶೇಮ್ ಆನ್ ಯೂ ರೋಹಿತ್ ಶೆಟ್ಟಿ" ಎಂದು ಟ್ರೆಂಡ್ ಮಾಡಲಾಗಿತ್ತು.

  ಈ ಘಟನೆ ನಂತರ ಈಗ ರೋಹಿತ್ ಶೆಟ್ಟಿ, ಬಾಲಿವುಡ್ ಖ್ಯಾತ ನಟಿ ಕತ್ರೀನಾ ಕೈಫ್ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇತ್ತೀಚಿಗೆ ರೋಹಿತ್ ಬಗ್ಗೆ ಮಾತನಾಡಿದ್ದ ಕತ್ರೀನಾ ನಾವಿಬ್ಬರು ಉತ್ತಮ ಸ್ನೇಹಿತರು. ಅವರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದರು. ಆದರೆ ಈಗ ಇನ್ಸ್ಟಾಗ್ರಾಮ್ ನಲ್ಲಿ ಬ್ಲಾಕ್ ಮಾಡಿರುವುದನ್ನು ನೋಡಿ ಇಬ್ಬರ ನಡುವಿನ ಸ್ನೇಹ ಹಳಸಿದೆ ಎಂದು ಹೇಳಲಾಗುತ್ತಿದೆ.

  ರೋಹಿತ್ ಶೆಟ್ಟಿಗೆ ನಾಚಿಕೆಯಾಗಬೇಕು ಎಂದ ಫ್ಯಾನ್ಸ್‌ಗೆ ಕತ್ರಿನಾ ಕೈಫ್ ಹೇಳಿದ್ದೇನು?ರೋಹಿತ್ ಶೆಟ್ಟಿಗೆ ನಾಚಿಕೆಯಾಗಬೇಕು ಎಂದ ಫ್ಯಾನ್ಸ್‌ಗೆ ಕತ್ರಿನಾ ಕೈಫ್ ಹೇಳಿದ್ದೇನು?

  ಅಷ್ಟಕ್ಕು ಇಬ್ಬರ ಮುನಿಸಿಗೆ ಕಾರಣವಾಗಿದ್ದು, ರೋಹಿತ್ ಶೆಟ್ಟಿ ಆಡಿರುವ ಮಾತುಗಳು.

  ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾದಲ್ಲಿ ಕತ್ರೀನಾ ಮತ್ತು ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ವೇಳೆ ಬಾಂಬ್ ಬ್ಲಾಸ್ಟ್ ಆಗುವ ದೃಶ್ಯದಲ್ಲಿ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ಅವರ ಜತೆಗೆ ಕತ್ರಿನಾ ನಡೆದುಕೊಂಡು ಬರುವಾಗ ಹಿನ್ನೆಲೆಯಲ್ಲಿ ಭಾರಿ ಸ್ಫೋಟವಾಗುತ್ತದೆ.

  ಈ ದೃಶ್ಯದ ಚಿತ್ರೀಕರಣದ ವೇಳೆ ಕತ್ರಿನಾ ಕಣ್ಣುಗಳನ್ನು ಮಿಟುಕಿಸಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ಅದು ಕಾಣುತ್ತಿತ್ತು ಎಂದು ರೋಹಿತ್ ತಿಳಿಸಿದ್ದರು. ಹಾಗಾಗಿ ಮತ್ತೊಂದು ಟೇಕ್ ತೆಗೆದುಕೊಳ್ಳೋಣ ಎಂದು ಕತ್ರೀನಾ ಹೇಳುತ್ತಾರಂತೆ. ಇದಕ್ಕೆ ರೋಹಿತ್

  ಕತ್ರಿನಾ, ನಾನು ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ, ನಿಮ್ಮ ಕಡೆಗೆ ಯಾರೂ ನೋಡುವುದಿಲ್ಲ' ಎಂದು ಪ್ರತಿಕ್ರಿಯಿಸಿದರಂತೆ. ಇದರಿಂದ ಕೋಪಗೊಂಡ ಕತ್ರಿನಾ, 'ನೀವು ಇದನ್ನು ನನಗೆ ಹೇಗೆ ಹೇಳುತ್ತೀರಿ?' ಎಂದು ಪ್ರಶ್ನಿಸಿದ್ದರಂತೆ.

  ಕತ್ರಿಕಾ ಅವರನ್ನು ಕಡೆಗಣಿಸುವಂತೆ ರೋಹಿತ್ ಶೆಟ್ಟಿ ನೀಡಿದ್ದ ಹೇಳಿಕೆಗೆ ಕತ್ರಿನಾ ಅಭಿಮಾನಿಗಳು ಮಾತ್ರವಲ್ಲ, ಅವರ ವಿರೋಧಿಗಳೂ ರೋಹಿತ್ ವಿರುದ್ಧ ಕೆರಳಿದ್ದರು. ಪುರುಷ ಪ್ರಧಾನ ಸಿನಿಮಾ ಜಗತ್ತಿನಲ್ಲಿ ನಟಿಯರಿಗೆ ಇರುವ ಮಹತ್ವ ಕಡಿಮೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

  English summary
  Sooryavanshi Director Rohit Shetty blocked Actress Katrina Kaif on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X