twitter
    For Quick Alerts
    ALLOW NOTIFICATIONS  
    For Daily Alerts

    ಆರ್‌ಆರ್‌ಆರ್ ಚಿತ್ರದ ಬಾಲಿವುಡ್ ಹಕ್ಕು ಖರೀದಿಸಿದ ಪೆನ್ ಸ್ಟುಡಿಯೋ

    |

    ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗಿರುವ ಆರ್ ಆರ್ ಆರ್ ಸಿನಿಮಾ ಇದೇ ವರ್ಷ ಅಕ್ಟೋಬರ್ 13 ರಂದು ಬಿಡುಗಡೆಯಾಗಲಿದೆ. ತೆಲುಗು, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

    ಬಾಹುಬಲಿ ಸರಣಿ ನಂತರ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಈ ಸಿನಿಮಾವನ್ನು ಹಿಂದಿಯಲ್ಲಿ ಹಾಗೂ ಉತ್ತರ ಭಾರತದಲ್ಲಿ ಯಾರು ರಿಲೀಸ್ ಮಾಡಲಿದ್ದಾರೆ ಎಂಬ ಕುತೂಹಲ ಕಾಡ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಭಾರಿ ಮೊತ್ತಕ್ಕೆ RRR ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದ ಖ್ಯಾತ ಸಂಸ್ಥೆ?ಭಾರಿ ಮೊತ್ತಕ್ಕೆ RRR ಚಿತ್ರದ ಕರ್ನಾಟಕ ವಿತರಣೆ ಹಕ್ಕು ಪಡೆದ ಖ್ಯಾತ ಸಂಸ್ಥೆ?

    ಉತ್ತರ ಭಾರತದಲ್ಲಿ ಆರ್ ಆರ್ ಆರ್ ಚಿತ್ರವನ್ನು ಪೆನ್ ಇಂಡಿಯಾ (ಪೆನ್ ಸ್ಟುಡಿಯೋ) ಬಿಡುಗಡೆ ಮಾಡುತ್ತಿದೆ. ಆರ್ ಆರ್ ಆರ್ ಚಿತ್ರದ ಡಿಜಿಟಲ್ ಹಕ್ಕು, ಸ್ಯಾಟ್‌ಲೈಟ್ ಹಕ್ಕು ಪೆನ್ ಸ್ಟುಡಿಯೋ ಪಾಲಾಗಿದೆ ಎಂದು ಸ್ವತಃ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮುಂದೆ ಓದಿ...

    ಪೆನ್ ಸ್ಟುಡಿಯೋ ವಿತರಿಸಿರುವ ಚಿತ್ರಗಳು

    ಪೆನ್ ಸ್ಟುಡಿಯೋ ವಿತರಿಸಿರುವ ಚಿತ್ರಗಳು

    ಪೆನ್ ಸ್ಟುಡಿಯೋ ಸಂಸ್ಥೆ ಈ ಮುಂಚೆ ಹಲವು ಚಿತ್ರಗಳನ್ನು ವಿತರಣೆ ಮಾಡಿದೆ. ತಮಿಳಿನ ರಜನಿ ಮುರುಗನ್, ಸಿಂಗಂ 3 ಹಿಂದಿ, ಜೀರೋ, ಬದ್ಲಾ, ಗೋಸ್ಟ್, ಲವ್ ಆಜ್ ಕಲ್, ಆಂಗ್ರೆಜಿ ಮೀಡಿಯಂ, ಕೂಲಿ ನಂ 1 ಅಂತಹ ಸಿನಿಮಾ ಬಿಡುಗಡೆ ಮಾಡಿದೆ. ಹಲವು ಸಿನಿಮಾಗಳ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

    ಮೊದಲ ಪ್ಯಾನ್ ಇಂಡಿಯಾ ಚಿತ್ರ

    ಮೊದಲ ಪ್ಯಾನ್ ಇಂಡಿಯಾ ಚಿತ್ರ

    ಹಾಗ್ನೋಡಿದ್ರೆ, ಪೆನ್ ಸ್ಟುಡಿಯೋ ಪಾಲಿಗೆ 'ಆರ್ ಆರ್ ಆರ್' ಮೊದಲ ಪ್ಯಾನ್ ಇಂಡಿಯಾ ಚಿತ್ರ ಆಗಿದೆ. ಈ ಹಿಂದಿನ ಚಿತ್ರಗಳಿಗೆ ಹೋಲಿಸಿಕೊಂಡರೆ ಬಹುದೊಡ್ಡ ಪ್ರಾಜೆಕ್ಟ್ ಇದು. ಬಾಹುಬಲಿ ನಿರ್ದೇಶಕರಿಂದ ತಯಾರಾಗಿರುವ ಚಿತ್ರ ಎಂಬ ಕಾರಣಕ್ಕೆ ಉತ್ತರ ಭಾರತದಲ್ಲೂ ಆರ್ ಆರ್ ಆರ್ ಸಿನಿಮಾಗೆ ಬೇಡಿಕೆ ಹೆಚ್ಚಿದೆ.

    ಆರ್‌ಆರ್‌ಆರ್‌ ಚಿತ್ರದ ವಿತರಣೆ ಹಕ್ಕು ಖರೀದಿಸಿದ ಲೈಕಾ ಪ್ರೊಡಕ್ಷನ್ಆರ್‌ಆರ್‌ಆರ್‌ ಚಿತ್ರದ ವಿತರಣೆ ಹಕ್ಕು ಖರೀದಿಸಿದ ಲೈಕಾ ಪ್ರೊಡಕ್ಷನ್

    ರಾಮ್ ಚರಣ್-ಜೂ ಎನ್‌ಟಿಆರ್

    ರಾಮ್ ಚರಣ್-ಜೂ ಎನ್‌ಟಿಆರ್

    ತೆಲುಗು ನಟ ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್ ಟಿ ಆರ್ ಈ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಹಾಗೂ ಜೂ ಎನ್‌ಟಿಆರ್ ಕೊಮ್ಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್, ಆಲಿಯಾ ಭಟ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    Recommended Video

    ಕೊರೊನಾ ಸೋಂಕಿಗೆ ಒಳಗಾದ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ | Filmibeat Kannada
    400 ಕೋಟಿ ಬಜೆಟ್?

    400 ಕೋಟಿ ಬಜೆಟ್?

    ಆರ್ ಆರ್ ಆರ್ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹಾಕಿದ್ದಾರೆ. ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ಸುಮಾರು 350-400 ಕೋಟಿಗೂ ಅಧಿಕ ಖರ್ಚು ಆಗಿದೆ ಎಂದು ವರದಿಯಾಗಿದೆ. ರಿಲೀಸ್‌ಗೂ ಮುಂಚೆಯೇ ವಿತರಣೆ, ಡಿಜಿಟಲ್, ಸ್ಯಾಟ್‌ಲೈಟ್ ಹಕ್ಕುಗಳಿಂದ ದೊಡ್ಡ ಮೊತ್ತ ಗಳಿಕೆ ಕಂಡಿದೆ ಎಂದು ಹೇಳಲಾಗಿದೆ.

    English summary
    RRR Movie distribution rights in North India, along with the digital, electronic and satellite rights acquired by Pen studio.
    Thursday, April 1, 2021, 15:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X