For Quick Alerts
  ALLOW NOTIFICATIONS  
  For Daily Alerts

  ಆಕೆ ಪ್ರತಿಭಾವಂತೆ, ಮತ್ತೆ ಪುಟಿದೇಳುತ್ತಾಳೆ: ರಿಯಾ ಚಕ್ರವರ್ತಿ ಬಗ್ಗೆ 'ಚೆಹ್ರೆ' ನಿರ್ದೇಶಕ ರೂಮಿ ಮಾತು

  |

  ಬಾಲಿವುಡ್ ನಟಿ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಜೊತೆಗೆ ರಿಯಾ ಅಭಿನಯದ ಚೆಹ್ರೆ ಸಿನಿಮಾ ಈ ವರ್ಷ ತೆರೆಗೆ ಬರಲು ಸಜ್ಜಾಗಿದೆ.

  2020ರಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ ನಟಿ ರಿಯಾ ಚಕ್ರವರ್ತಿಗೆ ಅತ್ಯಂತ ಕೆಟ್ಟವರ್ಷವಾಗಿತ್ತು. ಪ್ರಿಯತಮ ಸುಶಾಂತ್ ಸಿಂಗ್ ಆತ್ಮಹತ್ಯೆ, ಡ್ರಗ್ಸ್ ಜಾಲದ ನಂಟು, ಜೈಲುವಾಸ ಹೀಗೆ ಅನೇಕ ಕಾರಣಗಳಿಗೆ ರಿಯಾ ಚಕ್ರವರ್ತಿ ಸುದ್ದಿಯಲ್ಲಿದ್ದರು. ರಿಯಾ ಚಕ್ರವರ್ತಿ ಜೈಲಿನಿಂದ ಹೊರಬಂದು ಕೆಲವು ದಿನಗಳಾಗಿದೆ. ರಿಯಾ ಚಕ್ರವರ್ತಿ ಮತ್ತೆ ಸಿನಿಮಾರಂಗಕ್ಕೆ ಬರ್ತಾರೆ, ಬಣ್ಣ ಹಚ್ಚುತ್ತಾರೆ ಎನ್ನುವ ಮತುಗಳು ಕೇಳಿಬರುತ್ತಿದೆ.

  ಮತ್ತೊಮ್ಮೆ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ರಿಯಾ ಚಕ್ರವರ್ತಿ ಮತ್ತು ಸಹೋದರ

  ರಿಯಾ ನಟನೆಯ ಚೆಹ್ರೆ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

  ರಿಯಾ ನಟನೆಯ ಚೆಹ್ರೆ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ

  ಇದೀಗ ರಿಯಾ ಚಕ್ರವರ್ತಿ ಬಗ್ಗೆ ನಿರ್ದೇಶಕ ರೂಮಿ ಜಾಫೇರಿ ಮಾತನಾಡಿದ್ದಾರೆ. ರಿಯಾ ಚಕ್ರವರ್ತಿ ಮತ್ತೆ ಪುಟಿದೇಳುತ್ತಾರೆ ಎಂದು ಹೇಳಿದ್ದಾರೆ. ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ ಮತ್ತು ರಿಯಾ ಚಕ್ರವರ್ತಿ ನಟನೆಯ ಚೆಹ್ರೆ ಸಿನಿಮಾಗೆ ರೂಮಿ ಜಾಫೇರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಿಯಾ ಚಕ್ರವರ್ತಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಚೆಹ್ರೆ ರಿಲೀಸ್ ಯಾವಾಗ

  ಚೆಹ್ರೆ ರಿಲೀಸ್ ಯಾವಾಗ

  ಚೆಹ್ರೆ ಸಿನಿಮಾದ ರಿಲೀಸ್ ನ ತಯಾರಿಯಲ್ಲಿರುವ ನಿರ್ದೇಶಕ ರೂಮಿ, ಇತ್ತೀಚಿಗೆ 'ಮಿಡ್ ಡೇ' ಪೋರ್ಟಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿ, ಈ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಧರಿಸಿದ್ದೇವೆ, ಆದರೆ ಬಿಡುಗಡೆ ದಿನಾಂಕ ಇನ್ನು ಫೈನಲ್ ಆಗಿಲ್ಲ ಎಂದಿದ್ದಾರೆ.

  'ಪ್ಲೀಸ್ ನನ್ನ ಹಿಂಬಾಲಿಸಬೇಡಿ': ಜೈಲಿನಿಂದ ಬಂದ ನಂತರ ಹೊರಗೆ ಕಾಣಿಸಿಕೊಂಡ ರಿಯಾ

  ರಿಯಾ ಮತ್ತೆ ಪುಟಿದೇಳುತ್ತಾರೆ

  ರಿಯಾ ಮತ್ತೆ ಪುಟಿದೇಳುತ್ತಾರೆ

  ಇದೇ ಸಮಯದಲ್ಲಿ ರಿಯಾ ಬಗ್ಗೆ ಮಾತನಾಡಿದ ರೂಮಿ, 'ಅವರು ಈ ಒಂದು ಕಷ್ಟದ ಹಂತದಿಂದ ಹೊರಬರುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಪ್ರತಿಯೊಬ್ಬರು ಧೈರ್ಯ ಹೇಳುತ್ತಿದ್ದಾರೆ. ಆದರೆ ಎಷ್ಟು ಕಷ್ಟ ಎನ್ನುವುದು ಗೊತ್ತಿದೆ. ಆದರೆ ಸಮಯ ಎನ್ನುವುದು ಎಲ್ಲವನ್ನು ಮರೆಸುತ್ತೆ. ಅವಳು ಚೆನ್ನಾಗಿರುತ್ತಾಳೆ. ಪ್ರತಿಭಾವಂತ ಕಲಾವಿದೆ ಮತ್ತೆ ಪುಟಿದೇಳುತ್ತಾರೆ' ಎಂದು ಹೇಳಿದ್ದಾರೆ.

  ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ರಿಯಾ

  ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ರಿಯಾ

  ಕಷ್ಟದ ಸಮಯದಲ್ಲಿ ಅವರೊಂದಿಗೆ ನಿಂತ ಎಲ್ಲರ ಬಗ್ಗೆಯೂ ಅವರಿಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ. ಜೈಲಿನಿಂದ ಹೊರಬಂದ ರಿಯಾ ಚಕ್ರವರ್ತಿ, ಇತ್ತೀಚಿಗೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಸಹೋದರ ಶೋವಿಕ್ ಜೊತೆ ಮುಂಬೈ ರಸ್ತೆಯಲ್ಲಿ ಓಡಾಡುತ್ತಿದ್ದ ರಿಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಎನ್ ಸಿ ಬಿ ಕಚೇರಿಗೆ ಭೇಟಿಯಾದ ಫೋಟೋ ಸಹ ಎಲ್ಲಾ ಕಡೆ ಹರಿದಾಡುತ್ತಿದೆ.

  English summary
  Director Rumi Jaffery speak about Rhea Chakraborty, she will ready to bounce back.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X