For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಖ್ಯಾತ ನಟ ನಸಿರುದ್ದೀನ್ ಷಾ ಅನಾರೋಗ್ಯದ ವದಂತಿ: ನಟ ಹೇಳಿದ್ದನು?

  |

  ಬಾಲಿವುಡ್ ನ ಖ್ಯಾತ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ನಿಧನದ ಬೆನ್ನಲ್ಲೆ ಮತ್ತೊಬ್ಬ ಸ್ಟಾರ್ ನಟ ಆನಾರೋಗ್ಯದ ಸುದ್ದಿ ವೈರಲ್ ಆಗಿದೆ. ಬಾಲಿವುಡ್ ಖ್ಯಾತ ನಟ ನಸಿರುದ್ದೀನ್ ಷಾ ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ಬಾಲಿವುಡ್ ಮಂದಿಗೆ ಮತ್ತೊಂದು ಆಘಾತವುಂಟುಮಾಡಿದೆ.

  ಅಲ್ಲದೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ನಸಿರುದ್ದೀನ್ ಷಾ ಪುತ್ರ ವಿವಾನ್ ಷಾ ತಂದೆಯ ಅನಾರೋಗ್ಯದ ವದಂತಿ ಬಗ್ಗೆ ಸ್ಪಷ್ಟನೆ ನೀಡಿದರು. ಅಲ್ಲದೆ ನಟ ನಸಿರುದ್ದೀನ್ ಅನಾರೋಗ್ಯದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಮುಂದೆ ಓದಿ..

  ಪುತ್ರ ಹೇಳಿದ್ದೇನು?

  ಪುತ್ರ ಹೇಳಿದ್ದೇನು?

  ತಂದೆಯ ಅನಾರೋಗ್ಯದ ವದಂತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿವಾನ್ ಷಾ "ಎಲ್ಲರೂ ಚೆನ್ನಾಗಿದ್ದಾರೆ. ಬಾಬಾ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಎದ್ದಿರುವ ಸುದ್ದಿ ಸುಳ್ಳು. ಇರ್ಫಾನ್ ಭಾಯ್ ಮತ್ತು ಚಿಂಟು ಜೀಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ. ಇದು ನಮ್ಮೆಲ್ಲರಿಗೂ ತುಂಬ ದೊಡ್ಡ ನಷ್ಟ" ಎಂದು ಬರೆದುಕೊಂಡಿದ್ದಾರೆ.

  ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಸಿರುದ್ದೀನ್ ಷಾ

  ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಸಿರುದ್ದೀನ್ ಷಾ

  ಸ್ವತಃ ನಟ ನಸಿರುದ್ದೀನ್ ಷಾ ಅವರೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅನಾರೋಗ್ಯದ ಬಗ್ಗೆ ಎದ್ದಿರುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಅಲ್ಲದೆ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

  ನಸಿರುದ್ದೀನ್ ಷಾ ಹೇಳಿದ್ದೇನು?

  ನಸಿರುದ್ದೀನ್ ಷಾ ಹೇಳಿದ್ದೇನು?

  ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಾನು ಚೆನ್ನಾಗಿದ್ದೇನೆ. ನಾನು ಮನೆಯಲ್ಲಿಯೇ ಇದ್ದೀನಿ. ಲಾಕ್ ಡೌನ್ ಅನ್ನು ಗಮನಿಸುತ್ತಿದ್ದೀನಿ. ದಯವಿಟ್ಟು ಯಾವುದೇ ವದಂತಿಗಳನ್ನು ನಂಬಬೇಡಿ" ಎಂದು ಬರೆದುಕೊಂಡಿದ್ದಾರೆ.

  ಲಾಕ್ ಡೌನ್ ನಲ್ಲಿ ಏನ್ಮಾಡ್ತಿದ್ದಾರೆ ನಸಿರುದ್ದೀನ್?

  ಲಾಕ್ ಡೌನ್ ನಲ್ಲಿ ಏನ್ಮಾಡ್ತಿದ್ದಾರೆ ನಸಿರುದ್ದೀನ್?

  ಖ್ಯಾತ ನಟ ನಸಿರುದ್ದೀನ್ ಷಾ ಲಾಕ್ ಡೌನಲ್ಲಿ ವಿಲಿಯಂ ಷೇಕ್ಸ್ ಪಿಯರ್ ಅವರ ನಾಟಗಳನ್ನು ಓದುತ್ತಿದ್ದಾರಂತೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಸಿರುದ್ದೀನ್ ಷಾ ಅವರಿಗೆ ಇಬ್ಬರು ವಿವಾನ್ ಮತ್ತು ಇಮಾದ್ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಸಹ 2017ರಲ್ಲಿ ಬೊರ್ನಾಲಿ ಚಟರ್ಜಿ ನಿರ್ದೇಶನದ ದಿ ಹಂಗ್ರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Rumors going spread in Bollywood famous Actor Naseeruddin Shah Hospitalised. Naseeruddin Shah clarified about his health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X