Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇಸರಿ ಬಿಕಿನಿ ವಿವಾದ: ಅಕ್ಷಯ್ ಮಾಡಿದರೆ ತಪ್ಪಿಲ್ಲ, ಶಾರುಖ್ ಮಾಡಿದರೆ ತಪ್ಪು
ಬಾಲಿವುಡ್‌ನ ಮತ್ತೊಂದು ದೊಡ್ಡ ಸಿನಿಮಾ ಅದರಲ್ಲಿಯೂ ಕಿಂಗ್ ಖಾನ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದೇ ಸಮಯಕ್ಕೆ ಕಾದು ಕೂತಿದ್ದ 'ಬಾಯ್‌ಕಾಟ್ ಗ್ಯಾಂಗ್' ಸಹ ಬಿಲದಿಂದ ಹೊರಬಂದಿವೆ.
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಇತರೆ ಹಲವು ಬಾಲಿವುಡ್ ಹಾಡುಗಳ ಮಾದರಿಯಲ್ಲಿಯೇ ಹಾಡು ತುಸು ಹೆಚ್ಚೇ ಗ್ಲಾಮರಸ್ ಆಗಿದೆ. ದೀಪಿಕಾ ಪಡುಕೋಣೆ, ಬಿಕಿನಿ ತೊಟ್ಟು ಹಾಟ್ ಆಗಿ ಹಾಡಿಗೆ ನರ್ತಿಸಿದ್ದಾರೆ.
ಆದರೆ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆ ತೊಟ್ಟು ನರ್ತಿಸಿರುವುದನ್ನು ವಿರೋಧಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದು, 'ಪಠಾಣ್' ಸಿನಿಮಾವನ್ನು ಬಾಯ್‌ಕಾಟ್ ಮಾಡಿ ಎಂದು ಕರೆ ನೀಡುತ್ತಿದ್ದಾರೆ.

ಪಠಾಣ್ ಬಾಯ್‌ಕಾಟ್‌ಗೆ ಒತ್ತಾಯ
ಹಾಡಿನಲ್ಲಿ ಬಹುತೇಕ ಬಿಕಿನಿ ಅಥವಾ ಬಿಕಿನಿಯನ್ನೇ ಹೋಲುವ ಉಡುಗೆಗಳನ್ನು ತೊಟ್ಟು ದೀಪಿಕಾ ಪಡುಕೋಣೆ ನರ್ತಿಸಿದ್ದಾರೆ. ಹಾಡಿನ ಮಧ್ಯಭಾಗದಲ್ಲಿ ಕೇಸರಿ ಬಣ್ಣದ ಬಿಕಿನಿಯನ್ನೇ ಹೋಲುವ ಉಡುಗೆಯನ್ನು ತೊಟ್ಟು ಡ್ಯಾನ್ಸ್ ಮಾಡುತ್ತಾರೆ. ಆ ದೃಶ್ಯದಲ್ಲಿ ಶಾರುಖ್ ಖಾನ್ ಸಹ ದೀಪಿಕಾ ಜೊತೆ ಸೇರಿಕೊಳ್ಳುತ್ತಾರೆ. ಇಬ್ಬರೂ ತುಸು ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಇದು ಕೆಲವರ ವಿಶೇಷವಾಗಿ ಉಗ್ರ ಹಿಂದುತ್ವವಾದಿಗಳ, ಬಾಯ್‌ಕಾಟ್ ಗ್ಯಾಂಗ್‌ನ ಕೆಂಗಣ್ಣಿಗೆ ಕಾರಣವಾಗಿದೆ.

ಬೇಷರಮ್ ಹಾಡಿನ ಬಗ್ಗೆ ವಿವಾದ
ಕೇಸರಿ ಬಣ್ಣದ ಉಡುಪು ತೊಟ್ಟು ಗ್ಲಾಮರಸ್ ಆಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ ಹಾಗಾಗಿ 'ಪಠಾಣ್' ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ. ಮಧ್ಯ ಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಸೇರಿದಂತೆ ಹಲವು ಬಿಜೆಪಿ ಬೆಂಬಲಿಗರು, ಹಿಂದುಪರ ಸಂಘಟನೆಗಳವರು 'ಪಠಾಣ್' ಸಿನಿಮಾದ ಬೇಷರಮ್ ಹಾಡನ್ನು ವಿರೋಧಿಸಿದ್ದು, ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ.

ಅಕ್ಷಯ್ ಕುಮಾರ್ ಮಾಡಿದರೆ ತಪ್ಪಲ್ಲ, ಶಾರುಖ್ ಮಾಡಿದರೆ ತಪ್ಪೆ?
ಬ್ಯಾನ್‌ಗಾಗಿ ಒತ್ತಾಯ ಮಾಡುತ್ತಿರುವವರಿಗೆ ವಿರುದ್ಧವಾಗಿ ಕೆಲವರು ಶಾರುಖ್ ಖಾನ್ ಹಾಗೂ 'ಪಠಾಣ್' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿ ಗ್ಲಾಮರಸ್ ಆಗಿ ನರ್ತಿಸಿರುವುದಕ್ಕೆ ವಿರೋಧಿಸುತ್ತಿರುವವರಿಗೆ, ಅಕ್ಷಯ್ ಕುಮಾರ್ ನಟನೆಯ ಒಂದು ಹಾಡು ತೋರಿಸಿ ಇದು ತಪ್ಪಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ನಟಿಸಿರುವ ಒಂದು ಹಾಟ್ ಹಾಡಿನಲ್ಲಿ ಕತ್ರಿನಾ ಸಹ ಗ್ಲಾಮರಸ್ ಆಗಿರುವ ಕೇಸರಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಹಾಡಿನಲ್ಲಿ ಅಕ್ಷಯ್ ಕುಮಾರ್, ಕತ್ರಿನಾರನ್ನು ರೊಮ್ಯಾಂಟಿಕ್ ಆಗಿ ಮುದ್ದಿಸುತ್ತಿದ್ದಾರೆ. ಅಕ್ಷಯ್ ಮಾಡಿದರೆ ತಪ್ಪಲ್ಲ, ಶಾರುಖ್ ಖಾನ್ ಮಾಡಿದರೆ ತಪ್ಪೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಪ್ರಕಾಶ್ ರೈ ಟ್ವೀಟ್ ತಿರುಗೇಟು
ಕೇಸರಿ ಬಣ್ಣದ ಬಿಕಿನಿ ಎಂಬ ಕಾರಣಕ್ಕೆ ಸಿನಿಮಾವನ್ನು ಬ್ಯಾನ್ ಮಾಡಲು ಒತ್ತಾಯಿಸುತ್ತಿರುವುದನ್ನು ಹಲವರು ವಿರೋಧಿಸಿದ್ದು ನಟ ಪ್ರಕಾಶ್ ರೈ ಸಹ ಈ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದು, ''ಕೇಸರಿ ಬಣ್ಣದ ಬಟ್ಟೆ ಹಾಕಿ ಸಣ್ಣ ಮಕ್ಕಳನ್ನು ರೇಪ್ ಮಾಡುತ್ತಿರುವ ಸ್ವಾಮೀಜಿಗಳಿಗೆ ಏನೂ ಅನ್ನದವರಿಗೆ, ಕೇಸರಿ ಶಾಲು ಹೊದ್ದು ರೌಡಿಸಂ ಮಾಡುವವರು, ಕೇಸರಿ ಟೋಪಿ ಹಾಕಿ ಎಂಎಲ್‌ಎ ಖರೀದಿಸುವವರಿಗೆ ಏನೂ ಇಲ್ಲ, ಆದರೆ ಸಿನಿಮಾದಲ್ಲಿ ಕೇಸರಿ ಬಟ್ಟೆ ಹಾಕಿದ್ದಕ್ಕೆ ವಿರೋಧವೇ? ಇನ್ನೂ ಎಷ್ಟು ದಿನ ಇದನ್ನೆಲ್ಲ ಸಹಿಸಿಕೊಳ್ಳಬೇಕು ಎಂದಿದ್ದಾರೆ ನಟ ಪ್ರಕಾಶ್ ರೈ.