For Quick Alerts
  ALLOW NOTIFICATIONS  
  For Daily Alerts

  800 ಕೋಟಿ ಮೌಲ್ಯದ ವೈಭವೊಪೇತ ಅರಮನೆ ಹೊಂದಿರುವ ಸೈಫ್ ಅಲಿ ಖಾನ್

  |

  ನಟ ಸೈಫ್ ಅಲಿ ಖಾನ್ ರಾಜವಂಶಸ್ತ, ಸೈಫ್ ಅಲಿ ಖಾನ್ ತಾತ ರಾಜರಾಗಿದ್ದವರು. ಅರಮನೆ, ಕೋಟೆ-ಕೊತ್ತಲೆಗಳನ್ನು ಹೊಂದಿದ್ದವರಾಗಿದ್ದರು.

  ನಟ ಸೈಫ್ ಅಲಿ ಖಾನ್ ಗೆ ಮುಂಬೈ ನಲ್ಲಿ ದೊಡ್ಡ ಮನೆಯೊಂದಿದೆ, ಆದರೆ ಇತ್ತೀಚಿಗೆ ಅವರು ತಮ್ಮ ಹೆಚ್ಚಿನ ಸಮಯವನ್ನು ಹರಿಯಾಣದಲ್ಲಿರುವ ತಮ್ಮ ಅರಮನೆಯಲ್ಲಿ ಕಳೆಯುತ್ತಿದ್ದಾರೆ. ಹತ್ತು ಎಕರೆ ವಿಸ್ತೀರ್ಣದಲ್ಲಿರುವ ಈ ಅರಮನೆ ದೇಶದ ವೈಭವೋಪೇತ ಅರಮನೆಗಳಲ್ಲಿ ಒಂದು.

  ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

  ಸೈಫ್ ಅವರ ಪೂರ್ವಜರ ಈ ಅರಮನೆಯನ್ನು ಸ್ವತಃ ಸೈಫ್ ಅವರು ಕೋಟ್ಯಂತರ ಹಣ ಕೊಟ್ಟು ಕೊಂಡುಕೊಳ್ಳಬೇಕಾಯಿತು. ಹೌದು, ತಮ್ಮದೇ ಅರಮನೆಯನ್ನು ತಾವೇ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು, ಈ ಬಗ್ಗೆ ಸಂದರ್ಶನವೊಂದರಲ್ಲಿ ಸೈಫ್ ಮಾತನಾಡಿದ್ದಾರೆ.

  ಹೋಟೆಲ್ ಒಂದಕ್ಕೆ ಅರಮನೆಯನ್ನು ಲೀಸ್ ನೀಡಿದ್ದರು

  ಹೋಟೆಲ್ ಒಂದಕ್ಕೆ ಅರಮನೆಯನ್ನು ಲೀಸ್ ನೀಡಿದ್ದರು

  ಸೈಫ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ನಿಧನವಾದಾಗ ಈ ಅರಮನೆಯನ್ನು ಪ್ರಸಿದ್ಧ ಹೋಟೆಲ್ ಒಂದಕ್ಕೆ ಲೀಸ್‌ ಗೆ ನೀಡಲಾಗಿತ್ತು. ಮೂರು ವರ್ಷಗಳ ಕಾಲ ಹೋಟೆಲ್ ಒಂದು ಅರಮನೆಯನ್ನು ವ್ಯಾಪಾರಕ್ಕೆ ಬಳಸಿಕೊಂಡಿತು, 2014 ರಲ್ಲಿ ಸೈಫ್ ಅಲಿ ಖಾನ್ ಅದನ್ನು ವಾಪಸ್ ಕೊಂಡುಕೊಳ್ಳಬೇಕಾಯಿತು.

  ದೊಡ್ಡ ಮೊತ್ತದ ಹಣ ಪಾವತಿಸಿದ ಸೈಫ್

  ದೊಡ್ಡ ಮೊತ್ತದ ಹಣ ಪಾವತಿಸಿದ ಸೈಫ್

  ತಮ್ಮ ಕುಟುಂಬದ ಹಲವು ನೆನಪುಗಳಿದ್ದ ಅರಮನೆಯನ್ನು ವಾಪಸ್ ಪಡೆದುಕೊಳ್ಳಲು ಮುಂದಾದಾಗ, ಹೋಟೆಲ್ ನವರು ಹಣಕ್ಕಾಗಿ ಬೇಡಿಕೆ ಇಟ್ಟರು, ಅವರು ಸಾಕಷ್ಟು ದೊಡ್ಡ ಮೊತ್ತದ ಹಣವನ್ನೇ ನನ್ನಿಂದ ನಿರೀಕ್ಷಿಸಿದರು, ಸಿನಿಮಾದಿಂದ ಸಂಪಾದಿಸಿದ ಹಣ ಕೊಟ್ಟು ಅರಮನೆಯನ್ನು ಮರಳಿ ಪಡೆದುಕೊಂಡೆ ಎಂದು ಹೇಳಿದ್ದಾರೆ ಸೈಫ್.

  ಅರಮನೆಯಲ್ಲಿ 150 ಕೋಣೆಗಳಿವೆ

  ಅರಮನೆಯಲ್ಲಿ 150 ಕೋಣೆಗಳಿವೆ

  ಹರಿಯಾಣದ ಗುರುಗಾವ್ ನಲ್ಲಿರುವ ಈ ಅರಮನೆ 10 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಅರಮನೆಯಲ್ಲಿ ಒಟ್ಟು 150 ಕೋಣೆಗಳಿವೆ. ಏಳು ಬಿಲಿಯರ್ಡ್ ರೂಮ್, ಡ್ರೆಸ್ಸಿಂಗ್ ರೂಮ್, ವಿಶಾಲವಾದ ಹಾಲ್‌ಗಳು, ವೈಭವೋಪೇತ ಪೀಠೋಪಕರಣಗಳು ಅರಮನೆಯಲ್ಲಿವೆ.

  ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ನಡೆದಿದೆ

  ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ನಡೆದಿದೆ

  ಈ ವೈಭವೊಪೇತ ಅರಮನೆಯಲ್ಲಿ ಹಲವು ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಮಂಗಲ್ ಪಾಂಡೆ, ಗಾಂಧಿ ಮೈ ಫಾದರ್, ವೀರ್-ಜಾರಾ, ಈಟ್ ಪ್ರೇ ಲವ್ ಸಿನಿಮಾಗಳನ್ನು ಇದೇ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ.

  English summary
  Actor Saif Ali Khan bought back his ancestor's palace. Saif's ancestor's palace worth 800 cr.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X