»   » ಅಬ್ಬಬ್ಬಾ ಸೈಫ್ ಅಲಿ ಖಾನ್ ಆಸ್ತಿ ಬೆಲೆ 750 ಕೋಟಿ

ಅಬ್ಬಬ್ಬಾ ಸೈಫ್ ಅಲಿ ಖಾನ್ ಆಸ್ತಿ ಬೆಲೆ 750 ಕೋಟಿ

Posted By:
Subscribe to Filmibeat Kannada

ಬಾಲಿವುಡ್ ಸುರಸುಂದರಿ ಕರೀನಾ ಕಪೂರ್ ಕಠಾರಿವೀರ ಸೈಫ್ ಅಲಿ ಖಾನ್ ಅವರನ್ನು ಯಾಕೆ ವರಿಸಿದರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ! ಮೂಲಗಳ ಪ್ರಕಾರ ಪಟೌಡಿ ವಾರಸ್ದಾರ ಸೈಫ್ ಅಲಿ ಖಾನ್ ಆಸ್ತಿಪಾಸ್ತಿ ಬೆಲೆ ಅಂದಾಜು ರು.750 ಕೋಟಿ ಎನ್ನಲಾಗಿದೆ.

ಪಟೌಡಿ ಕುಟುಂಬದ ವಾರಸ್ದಾರನಾದ ನವಾಬ ಸೈಫ್ ಹೆಸರಿಗೆ ಪಿತ್ರಾರ್ಜಿತ ಆಸ್ತಿಯಾಗಿ ಅರಮನೆ ಇತರೆ ಆಸ್ತಿಪಾಸ್ತಿ ಸೇರಿದರೆ ಸುಮಾರು ರು.750 ಕೋಟಿ ಬೆಲೆ ಬಾಳುತ್ತದಂತೆ. ಮನ್ಸೂರ್ ಅಲಿ ಖಾನ್ ಪಟೌಡಿ ಅವರು ತಮ್ಮ ಬಹುತೇಕ ಆಸ್ತಿಯನ್ನು ಸೈಫ್ ಹೆಸರಿಗೆ ಬರೆದಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ.

ಪಟೌಡಿ ಕುಟುಂಬದ ಉಳಿದ ಆಸ್ತಿಪಾಸ್ತಿ ಸೈಫ್ ಸಹೋದರಿಯರಾದ ಸಬಾ ಮತ್ತು ಸೋಹಾ ಅವರ ಹೆಸರಿನಲ್ಲಿದೆಯಂತೆ. ಈ ಬಗ್ಗೆ ಮಾತನಾಡಿರುವ ಸೈಫ್, "ನನ್ನ ಬಳಿ ಇರುವ ಆಸ್ತಿ ಇಷ್ಟೊಂದು ಬೆಲೆ ಬಾಳುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ. ಖಚಿತವಾಗಿ ಇಷ್ಟೇ ಇದೆ ಎಂದು ಹೇಳಲಾಗದು. ಆದರೆ ಖಂಡಿತ ಬೆಲೆಬಾಳುತ್ತದೆ" ಎಂದಿದ್ದಾರೆ.

ಪಿತ್ರಾರ್ಜಿತ ಆಸ್ತಿಗೆ ಬೆಲೆ ಕಟ್ಟಲು ಸಾಧ್ಯವೆ? ಎಂದಿರುವ ಸೈಫ್, ಈಗ ಮದುವೆಯಾದ ಬಳಿಕ ತಮ್ಮ ಆಸ್ತಿಯ ಸಮಸ್ಯೆಯನ್ನು ಬಗೆಹರಿಕೊಳ್ಳಲು ಮುಂದಾಗಿದ್ದಾರೆ. ಸೈಫ್ ಅವರ ತಾಯಿ ಶರ್ಮಿಳಾ ಠಾಗೋರ್ ಹಾಗೂ ಮನ್ಸೂರ್ ಅಲಿ ಖಾನ್ ಅವರ ಇಬ್ಬರು ತಂಗಿಯರು ಈಗಾಗಲೆ ಆಸ್ತಿ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ ಎಂಬ ಸುದ್ದಿಯೂ ಇದೆ. (ಏಜೆನ್ಸೀಸ್)

English summary
Sources says that Bollywood actor Saif Ali Khan's ancestral property costs worth Rs 750 cr. Mansoor Ali Khan Pataudi has left the lion’s share of his assets to his only son Saif.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada