twitter
    For Quick Alerts
    ALLOW NOTIFICATIONS  
    For Daily Alerts

    ನಾನೂ ಸ್ವಜನಪಕ್ಷಪಾತದ ಬಲಿಪಶು ಎಂದ ಸೈಫ್ ಅಲಿ ಖಾನ್

    |

    ಸುಶಾಂತ್ ಸಿಂಗ್ ರಜಪೂತ್ ಸಾವು ಅವರ ಅಭಿಮಾನಿಗಳಲ್ಲಿ ದುಃಖ ಮತ್ತು ಆಕ್ರೋಶ ಸೃಷ್ಟಿಸಿದೆ. ಅದರ ಜತೆಯಲ್ಲಿ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ, ಲಾಬಿ, ಹೊರಗಿನಿಂದ ಬಂದವರ ಶೋಷಣೆ, ಕೆಲವು ಕುಟುಂಬಗಳ ನಿಯಂತ್ರಣ ಮುಂತಾದವುಗಳ ಕುರಿತು ಚರ್ಚೆ ಹುಟ್ಟುಹಾಕಿದೆ. ಈ ಹರಿವಿನಲ್ಲಿ ಅನೇಕ ನಟ-ನಟಿಯರು ಮಾತನಾಡುವ ಧೈರ್ಯ ತೋರಿಸುತ್ತಿದ್ದಾರೆ.

    ಜನರ ಕೋಪ ವ್ಯಕ್ತವಾಗುತ್ತಿರುವುದು ಸ್ಟಾರ್ ನಟರು ಮತ್ತು ಅವರ ಮಕ್ಕಳ ವಿರುದ್ಧ. ಕರಣ್ ಜೋಹರ್, ಆಲಿಯಾ ಭಟ್, ಸೋನಮ್ ಕಪೂರ್, ಸೋನಾಕ್ಷಿ ಸಿನ್ಹಾ, ಸಲ್ಮಾನ್ ಖಾನ್ ಮುಂತಾದವರು ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸತತ ಸೋಲು ಅನುಭವಿಸಿದರೂ ಸ್ಟಾರ್ ನಟರ ಮಕ್ಕಳಿಗೆ ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ. ದೊಡ್ಡ ಮೊತ್ತದ ಸಂಭಾವನೆ ದೊರಕುತ್ತಿದೆ. ಆದರೆ ಹೊರಗಿನಿಂದ ಬಂದ ಪ್ರತಿಭಾವಂತರು ಹಿಟ್ ಸಿನಿಮಾ ನೀಡಿದರೂ ಅವಕಾಶಕ್ಕಾಗಿ ಪರದಾಡಬೇಕಾಗುತ್ತದೆ ಎಂದು ಆರೋಪಿಸುತ್ತಿದ್ದಾರೆ.

    ಪ್ರತಿಭಾವಂತ ನಟರಿಗೆ ಅವಕಾಶ ಸಿಗದೆ ಇರುವುದು ಸಾಮಾನ್ಯ: ಒಪ್ಪಿಕೊಂಡ ಸೈಫ್ ಅಲಿ ಖಾನ್ಪ್ರತಿಭಾವಂತ ನಟರಿಗೆ ಅವಕಾಶ ಸಿಗದೆ ಇರುವುದು ಸಾಮಾನ್ಯ: ಒಪ್ಪಿಕೊಂಡ ಸೈಫ್ ಅಲಿ ಖಾನ್

    ಈ ನಡುವೆ ಬಾಲಿವುಡ್‌ನ ಸ್ಟಾರ್ ಕುಟುಂಬದಿಂದಲೇ ಬಂದ 'ಪಟೌಡಿ' ಸೈಫ್ ಅಲಿ ಖಾನ್ ಕೂಡ ತಾವೂ ಸ್ವಜನಪಕ್ಷಪಾತದ ಬಲಿಪಶು ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ...

    ನಾನೂ ಅನುಭವಿಸಿದ್ದೇನೆ

    ನಾನೂ ಅನುಭವಿಸಿದ್ದೇನೆ

    ಇತ್ತೀಚೆಗೆ ವೆಬಿನಾರ್ ಮೂಲಕ ಮಾತುಕತೆ ನಡೆಸಿದ್ದ ಸೈಫ್ ಅಲಿ ಖಾನ್, ಚಿತ್ರೋದ್ಯಮದಲ್ಲಿ ಅನೇಕ ಹಂತದ ಸ್ವಜನಪಕ್ಷಪಾತ ನಡೆಯುತ್ತದೆ. ಅದು ಪಕ್ಷಪಾತ ಅಥವಾ ಗುಂಪುಗಾರಿಕೆ ಆಗಿರಬಹುದು, ಅಂತಹ ಪರಿಸ್ಥಿತಿಯನ್ನು ತಾವೂ ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ಈ ವ್ಯವಹಾರ ನಡೆಯುವುದೇ ಹೀಗೆ...

    ಈ ವ್ಯವಹಾರ ನಡೆಯುವುದೇ ಹೀಗೆ...

    'ನೆಪೋಟಿಸಂ ಎನ್ನುವುದು ಒಂದು ಶುದ್ಧ ವ್ಯವಸ್ಥೆ, ಹೇಗೆಂದರೆ ನಾನೂ ಅದರ ಬಲಿಪಶು. ಆದರೆ ಅದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ವ್ಯವಹಾರದ ಕೆಲಸವೇ ಹಾಗೆ. ನಾನು ಇಲ್ಲಿ ಹೆಸರುಗಳನ್ನು ಹೇಳುವುದಿಲ್ಲ. ಆದರೆ ವ್ಯಕ್ತಿಯೊಬ್ಬರ ತಂದೆ ಅವರನ್ನು ತೆಗೆದುಕೊಳ್ಳಬೇಡಿ, ಇವರನ್ನು ಸಿನಿಮಾದಲ್ಲಿ ಹಾಕಿ ಎಂದು ಹೇಳುವುದನ್ನು ನೋಡಿದ್ದೇನೆ. ಆ ರೀತಿ ನಡೆಯುತ್ತದೆ ಮತ್ತು ಅದು ನನಗೂ ಆಗಿದೆ' ಎಂದಿದ್ದಾರೆ.

    ಕರಣ್ ಜೋಹರ್ ಬೆಂಬಲಕ್ಕೆ ಬಂದ ಶತ್ರುಘ್ನ ಸಿನ್ಹಾ, ಸ್ವರ ಭಾಸ್ಕರ್: ನೆಟ್ಟಿಗರ ಛೀಮಾರಿಕರಣ್ ಜೋಹರ್ ಬೆಂಬಲಕ್ಕೆ ಬಂದ ಶತ್ರುಘ್ನ ಸಿನ್ಹಾ, ಸ್ವರ ಭಾಸ್ಕರ್: ನೆಟ್ಟಿಗರ ಛೀಮಾರಿ

    ಅಭಿನಯ ಸಂಸ್ಥೆಗಳಿಂದ ಬರುತ್ತಿದ್ದಾರೆ

    ಅಭಿನಯ ಸಂಸ್ಥೆಗಳಿಂದ ಬರುತ್ತಿದ್ದಾರೆ

    ವಿವಿಧ ನಟನಾ ಸಂಸ್ಥೆಗಳಿಂದ ಬರುತ್ತಿರುವ ಜನರು ಮನೆಮಾತಾಗುತ್ತಿರುವುದು ಸಂತಸದ ಸಂಗತಿ ಎಂದಿದ್ದಾರೆ. 'ಎಲ್ಲದಕ್ಕಿಂತಲೂ ಹೆಚ್ಚಾಗಿ ಅಭಿನಯ ಸಂಸ್ಥೆಗಳಿಂದ ಕಲಿತು ಬರುತ್ತಿರುವ ಮಕ್ಕಳು ಮುನ್ನೆಲೆ ಬರುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ನವಾಜುದ್ದೀನ್ ಸಿದ್ದಿಕಿ, ಪಂಕಜ್ ತ್ರಿಪಾಠಿ ಮುಂತಾದ ಕಲಾವಿದರು ಮನೆ ಮಾತಾಗಿದ್ದಾರೆ' ಎಂದು ಸೈಫ್ ಹೇಳಿದ್ದಾರೆ.

    ಸೈಫ್ ಕಾಲೆಳೆದ ನೆಟ್ಟಿಗರು

    ಸೈಫ್ ಕಾಲೆಳೆದ ನೆಟ್ಟಿಗರು

    ತಾವೂ ನೆಪೋಟಿಸಂನ ಬಲಿಪಶು ಎಂದು ಹೇಳಿಕೊಂಡಿರುವ ಸೈಫ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಲಾಗುತ್ತಿದೆ. ಇದು ಆಕಾಶ್ ಅಂಬಾನಿ ತಾನು ಸಂಪತ್ತಿನ ಬಲಿಪಶು ಎಂದು ಹೇಳಿದಂತೆ ಇದೆ ಎಂದು ಕೆಲವರು ಟೀಕಿಸಿದ್ದಾರೆ. ತಮಗೆ ರಾಜಕೀಯದಲ್ಲಿ ಅವಕಾಶವೇ ಸಿಗುತ್ತಿಲ್ಲ ಎಂದು ರಾಹುಲ್ ಗಾಂಧಿ ದೂರು ನೀಡಿದರೆ ಹೇಗಾಗುತ್ತದೆಯೋ ಹಾಗೆಯೇ ಸೈಫ್ ಹೇಳಿಕೆ ಇದೆ ಎಂದಿದ್ದಾರೆ.

    ನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪ

    ತೈಮೂರ್ ಕೂಡ ನೆಪೋಟಿಸಂ ಬಲಿಪಶು!

    ತೈಮೂರ್ ಕೂಡ ನೆಪೋಟಿಸಂ ಬಲಿಪಶು!

    ಸೈಫ್ ಅಲಿ ಖಾನ್ ಮಾತ್ರವಲ್ಲ ಅವರ ಮಗ ತೈಮೂರ್ ಕೂಡ ನೆಪೋಟಿಸಂನ ಬಲಿಪಶು ಎಂದು ಕೆಲವರು ಕಾಲೆಳೆದಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ತೀರ್ಪುಗಾರರ ತಂಡದಲ್ಲಿ ಪ್ರಭಾವಿ ಸ್ಥಾನದಲ್ಲಿ ಸೈಫ್ ತಾಯಿ ಶರ್ಮಿಳಾ ಟ್ಯಾಗೋರ್ ಇದ್ದರು. ನೆಪೋಟಿಸಂ ಕಾರಣದಿಂದ ಸೈಫ್ ಅಲಿ ಖಾನ್ 'ಹಮ್ ತುಮ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು ಎಂದು ವ್ಯಂಗ್ಯವಾಡಿದ್ದಾರೆ.

    ನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿನೆಪೋಟಿಸಂ ವಿರುದ್ಧ ಹೋರಾಡಿ, ಆದರೆ ಸುಶಾಂತ್ ಹೆಸರು ಬಳಕೆ ಬೇಡ: ಇರ್ಫಾನ್ ಖಾನ್ ಮಗನ ಮನವಿ

    English summary
    Bollywood actor Saif Ali Khan said that even he had been a victim of nepotism, businesses work like that.
    Thursday, July 2, 2020, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X