For Quick Alerts
  ALLOW NOTIFICATIONS  
  For Daily Alerts

  ನಾನು ಎಡಪಂಥೀಯ ಮತ್ತು ಪ್ರಗತಿಪರ: ಸೈಫ್ ಅಲಿ ಖಾನ್

  |

  ತಾವೊಬ್ಬ ಎಡಪಂಥೀಯ, ಪ್ರಗತಿಪರ ವಿಚಾರಗಳಲ್ಲಿ ನಂಬಿಕೆ ಉಳ್ಳವನು ಎಂದು ಹೇಳಿಕೊಳ್ಳುವುದು ಸಾಮಾನ್ಯ ವ್ಯಕ್ತಿಗೂ ಕಷ್ಟವಾಗಿರುವ ಸಮಯದಲ್ಲಿ ನಟ ಸೈಫ್ ಅಲಿ ಖಾನ್ ಧೈರ್ಯವಾಗಿ ತಾವೊಬ್ಬ ಎಡಪಂಥೀಯರೆಂದು, ಪ್ರಗತಿಪರ ವಿಚಾರಧಾರೆಯಲ್ಲಿ ನಂಬಿಕೆ ಉಳ್ಳವರೆಂದು ಹೇಳಿಕೊಂಡಿದ್ದಾರೆ.

  ಬದಲಾದ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ಕೆಲವು ಆದರ್ಶಗಳನ್ನು, ವಿಚಾರಗಳನ್ನು, ನಿಲವನ್ನು, ನಂಬಿಕೆಗಳನ್ನು ಹೊಂದಿರುವವರನ್ನು ವಿರುದ್ಧ ನಿಲವಿನ ಜನ ಸಾಮಾಜಿಕ ಜಾಲತಾಣದ ಮೂಲಕ ಹಾಗೂ ಕೆಲವು ಸಂದರ್ಭಗಳಲ್ಲಿ ದೈಹಿಕವಾಗಿಯೂ ಗುದ್ದಿ ಕೆಡವಲಾಗುತ್ತಿದೆ. ಹೀಗಿರುವಾಗ ಸಿನಿಮಾ ನಟರುಗಳಂತೂ ರಾಜಕೀಯ ಕುರಿತ ಹೇಳಿಕೆಗಳಿರಲಿ, ತೀರಾ ಸಾಮಾನ್ಯ ಸಂಗತಿಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಬಿಟ್ಟಿದ್ದಾರೆ. ಅಥವಾ 'ಪಾಪ್ಯುಲರ್ ಅಭಿಪ್ರಾಯ'ಯದ ಪರ ಅನಿವಾರ್ಯವಾಗಿ ನಿಂತಿದ್ದಾರೆ.

  ಹೀಗಿರುವಾಗ ಬಹುಸಂಖ್ಯೆಯ (?!) ನಿಲವಿನ ಜನರ ವಿರುದ್ಧವಾದ ನಿಲವು ಹೊಂದಿರುವವನು ನಾನು ಎಂದು ಧೈರ್ಯವಾಗಿ ನಟ ಸೈಫ್ ಅಲಿ ಖಾನ್ ಹೇಳಿಕೊಂಡಿದ್ದಾರೆ.

  ಸಂದರ್ಶನವೊಂದರಲ್ಲಿ, ಸೆಪ್ಟೆಂಬರ್ 30ರಂದು ಬಿಡುಗಡೆ ಆಗಲಿರುವ ತಮ್ಮ ಸಿನಿಮಾ 'ವಿಕ್ರಂ-ವೇದ' ಕುರಿತಾಗಿ ಮಾತನಾಡುತ್ತಾ, 'ವಿಕ್ರಂ ವೇದ' ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೂ ತಮ್ಮ ವ್ಯಕ್ತಿತ್ವಕ್ಕೂ ಬಹಳ ಅಂತರವಿದೆ, ''ನಾನು ತುಸು ಎಡಪಂಥದ ಕಡೆ ವಾಲಿದವನು. ತುಸು ಪ್ರಗತಿಪರವಾದ ನಿಲವು ಹೊಂದಿದವನು, ಹಾಗೂ ಯಾವುದನ್ನೂ ಹೆಚ್ಚು ಮನಸ್ಸಿಗೆ ಹಚ್ಚಿಕೊಳ್ಳದ 'ಈಸಿಗೋ' ಮನುಷ್ಯ. ಈ ವಿಷಯಗಳನ್ನು ಹೇಳಲು ಸಹ ಇದು ಸೂಕ್ತ ಸಮಯವಲ್ಲ. ಆದರೂ ಹೇಳುತ್ತೇನೆ, ಯಾರದ್ದೇ ಬಗ್ಗೆ ತೀರ್ಪು ನೀಡುವ ಮುಂದೆ ಸೂಕ್ತವಾದ ವಿಚಾರಣೆ ನಡೆಯಲೇ ಬೇಕು ಎಂಬ ಬಗ್ಗೆ ನಂಬಿಕೆ ಉಳ್ಳವನು. ಆದರೆ ನಾನು ನಿರ್ವಹಿಸಿರುವ ಪಾತ್ರ ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾಗಿದೆ'' ಎಂದಿದ್ದಾರೆ ಸೈಫ್ ಅಲಿ ಖಾನ್.

  ''ಅಪರಾಧಿಗಳಿಗೆ ವಿಚಾರಣೆಯ ಅವಕಾಶವೂ ನೀಡದೆ ಕೊಲ್ಲುವ ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಆರೋಪಿಯನ್ನು ನೇರವಾಗಿ ಕೊಂದೇ ಬಿಡುವುದು ಅವನ ಸ್ಟೈಲ್. ಇದು ಸರಿಯಲ್ಲ, ಸಿನಿಮ್ಯಾಟಿಕ್ ಆಗಿಯೂ ಸಹ ಇದು ತುಸು ಅಸಹನೀಯ ಎನ್ನಿಸುತ್ತದೆ. ಆದರೆ ನಾನು ನಿರ್ವಹಿಸಿದ ಪಾತ್ರ ಅದು ಸರಿ ಎಂದು ಭಾವಿಸಿದೆ'' ಎಂದಿದ್ದಾರೆ ಸೈಫ್ ಅಲಿ ಖಾನ್.

  ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ನಟಿಸಿರುವ 'ವಿಕ್ರಂ-ವೇದ' ಸಿನಿಮಾವು ಇದೇ ಸೆಪ್ಟೆಂಬರ್ 30 ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಹೃತಿಕ್ ರೋಷನ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ತಮಿಳಿನ 'ವಿಕ್ರಂ ವೇದ' ಸಿನಿಮಾದ ರೀಮೇಕ್ ಆಗಿದೆ. ಮೂಲ ಸಿನಿಮಾದಲ್ಲಿ ವಿಜಯ್ ಸೇತುಪತಿ ಗ್ಯಾಂಗ್‌ಸ್ಟರ್ ಆಗಿಯೂ ಆರ್.ಮಾಧವನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Actor Saif Ali Khan said he is bit left wing and Liberal. He talked about his upcoming movie Vikram Vedha which is releasing on September 30.
  Tuesday, September 27, 2022, 20:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X