»   » ಏಕ್ ಥಾ ಟೈಗರ್ ಚಿತ್ರಕ್ಕೆ ಸಲ್ಲು ಪಡೆದದ್ದು 50 ಕೋಟಿ

ಏಕ್ ಥಾ ಟೈಗರ್ ಚಿತ್ರಕ್ಕೆ ಸಲ್ಲು ಪಡೆದದ್ದು 50 ಕೋಟಿ

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಧಿಕ ಸಂಬಳ ಎಣಿಸುವ ಸ್ಟಾರ್ ಗಳಲ್ಲಿ ನಟ ಸಲ್ಮಾನ್ ಖಾನ್ ಕೂಡ ಒಬ್ಬರು. 'ಏಕ್ ಥಾ ಟೈಗರ್' ಚಿತ್ರಕ್ಕಾಗಿ ಸಲ್ಲು ಮಿಯಾ ಬರೋಬ್ಬರಿ ರು.50 ಕೋಟಿ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು. ಸಲ್ಲು ಚಿತ್ರಗಳು ಬಾಕ್ಸಾಫೀಸಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದೇ ಇದಕ್ಕೆ ಕಾರಣ.

ಏಕ್ ಥಾ ಟೈಗರ್ ಚಿತ್ರ ಬಿಡುಗಡೆಯಾದ ಐದೇ ದಿನಕ್ಕೆ ರು. 100 ಕೋಟಿ ಕಲೆಕ್ಷನ್ ಮಾಡಿದೆ. ಇದುವರೆಗೂ ಈ ಚಿತ್ರ ರು.137 ಕೋಟಿ ಬಾಚಿದ್ದು ಶೀಘ್ರದಲ್ಲೇ 200ರ ಗಡಿ ದಾಟುವುದು ಗ್ಯಾರಂಟಿ ಎನ್ನಲಾಗಿದೆ. ಆಕ್ಷನ್, ರೊಮ್ಯಾನ್ಸ್, ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಈ ಚಿತ್ರ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ.

ಯಶ್ ರಾಜ್ ಫಿಲಂಸ್ ಸಂಸ್ಥೆ ಸಲ್ಲುಗೆ ಈ ಪಾಟಿ ಸಂಭಾವನೆ ನೀಡಿದರೆ ಇನ್ನು ಚಿತ್ರದ ನಾಯಕಿ ಕತ್ರಿನಾ ಕೈಫ್ ಗೆ ಎಷ್ಟು ಸಂದಾಯವಾಗಿದೆಯೋ. ಇನ್ನು ಈ ಚಿತ್ರದ ರು.75 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಭಿನಯಿಸಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಗೂಢಚಾರಿ ಪಾತ್ರದಲ್ಲಿ ಅಭಿನಯಿಸಿದ್ದು ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಕತೆ ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ಈ ಚಿತ್ರಕ್ಕೆ ಪಾಕಿಸ್ತಾನ ನಿಷೇಧ ಹೇರಿದ್ದು ಒಂದಷ್ಟು ಲಾಸ್ ಆಗಿದೆ. ಭಾರತದಲ್ಲಿ ಚಿತ್ರ ಬಿಡುಗಡೆಯಾದ ದಿನವೇ ಸರಿಸುಮಾರು ರು.33 ಕೋಟಿ ಬಾಚಿತ್ತು.

ಅರುವತ್ತಾರನೇ ಸ್ವಾತಂತ್ರ್ಯೋತ್ಸವ ದಿನ ಬಿಡುಗಡೆಯಾದ ಈ ಚಿತ್ರ ಇನ್ನೂ ಬಾಕ್ಸಾಫೀಸಲ್ಲಿ ಮುನ್ನುಗ್ಗುತ್ತಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕತ್ರಿನಾ ಹಾಗೂ ಸಲ್ಮಾನ್ ಜೊತೆಯಾಗಿ ಅಭಿನಯಿಸಿರುವ ಚಿತ್ರವಿದು. 2008ರಲ್ಲಿ ತೆರೆಕಂಡ ಯುವರಾಜ್ ಚಿತ್ರ ಇವರಿಬ್ಬರೂ ಜೊತೆಯಾಗಿ ಅಭಿನಯಿಸಿದ ಚಿತ್ರ. ಅದಾದ ಬಳಿಕ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದರು. (ಏಜೆನ್ಸೀಸ್)

English summary
Salman Khan is one of the most bankable stars of Bollywood today. The actor has a record of giving back to back hits. Not only this, his latest film Ek Tha Tiger has become the fastest film to cross the 100 crore mark (in just 5 days). Rumour has it that Salman Khan has charged 50 crore to do Ek Tha Tiger with Yash Raj camp.
Please Wait while comments are loading...