»   » ಬ್ಯಾಡ್ ಬಾಯ್ ಸಲ್ಲೂಗೆ 3 ವರ್ಷ ಕಾರಾಗೃಹ ಶಿಕ್ಷೆ?

ಬ್ಯಾಡ್ ಬಾಯ್ ಸಲ್ಲೂಗೆ 3 ವರ್ಷ ಕಾರಾಗೃಹ ಶಿಕ್ಷೆ?

Posted By:
Subscribe to Filmibeat Kannada
ಬಾಲಿವುಡ್ ಬ್ಯಾಡ್ ಬಾಯ್ ಕುಖ್ಯಾತಿ ಹೊಂದಿರುವ ನಟ ಸಲ್ಮಾನ್ ಖಾನ್ ಅವರಿಗೆ ದುರಾದೃಷ್ಟ ಕೂಡಿಬಂದಿದೆಯೇ? ಹೀಗೊಂದು ಪ್ರಶ್ನೆಗೆ ಕಾರಣವಾಗಿದೆ ರಾಜಸ್ಥಾನದ ಹೈಕೋರ್ಟ್ ಇತ್ತೀಚಿನ ನಡೆ. 14 ವರ್ಷಗಳ ಹಿಂದೆ (1998ರಲ್ಲಿ) ಸಲ್ಮಾನ್ ಖಾನ್ ಹಾಗೂ ಸಂಗಡಿಗರ ಮೇಲೆ ದಾಖಲಾಗಿದ್ದ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ರಾಜಸ್ಥಾನ ಹೈಕೋರ್ಟ್ ಮತ್ತೆ ಚಾಲನೆ ನೀಡಿದೆ.

ಸೆಕ್ಷನ್ ನಂ 51- ವೈಲ್ಡ್ ಲೈಫ್ ಆಕ್ಟ್ ಹಾಗೂ ಸೆಕ್ಷನ್ ನಂ 149- ಐಪಿಸಿ ಪ್ರಕಾರ ರಾಜಸ್ಥಾನದ ಹೈಕೋರ್ಟ್ ಎತ್ತಿ ಹಿಡಿದಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾಲ್ ಖಾನ್ ಅವರಿಗೆ 3 ವರ್ಷ ಕಾರಾಗೃಹ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. 14 ವರ್ಷಗಳ ಹಿಂದಿನ ಈ ಕೇಸ್ ಸಂಬಂಧ, ಮತ್ತೆ ಸಲ್ಮಾನ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ.

ಸೆಶನ್ ಕೋರ್ಟ, ಸಲ್ಲೂ ಮೇಲಿರುವ ಅಪರಾಧಗಳನ್ನು ಮನ್ನಿಸುವಂತೆ ಸೆಶನ್ ಕೋಟರ್ ಮಾಡಿದ ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಇತ್ತೀಚಿಗೆ ಹಳೆಯದನ್ನೆಲ್ಲಾ ಮರೆತು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಮೇಲಕ್ಕೇರಿದ್ದ ಸಲ್ಲೂಗೆ ಅದೃಷ್ಟ ಮತ್ತೆ ಕೈಕೊಡುವಂತಿದೆ. ತಮ್ಮ ಬ್ಯಾಡ್ ಇಮೇಜಿನಿಂದ ಸಾಕಷ್ಟು ದೂರವಾಗಿದ್ದ ಸಲ್ಮಾನ್, ಮತ್ತೆ ಮೊದಲಿನ ಬ್ಯಾಡ್ ಇಮೇಜ್ ಪಡೆಯುವ ಸಂಭವ ಹೆಚ್ಚಾಗಿದೆ.

1998ರಲ್ಲಿ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ ಮತ್ತು ಸೊನಾಲಿ ಬೇಂದ್ರೆ ಜೊತೆಗೂಡಿ ಕೃಷ್ಣ ಮೃಗವನ್ನು ಬೇಟೆಯಾಡಿದ ಆರೋಪಕ್ಕೆ (ಸೆಕ್ಷನ್ ನಂ 51, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ) ಒಳಗಾಗಿದ್ದರು. ಅವರ ಜೊತೆಗಾರರೂ ಕೂಡ ಸೆಕ್ಷನ್ ನಂ-52, ಅದಕ್ಕೆ ಸಹಕರಿಸಿದ ಆರೋಪಿಗಳು ಎನಿಸಿಕೊಂಡಿದ್ದರು. ಈಗ ಮತ್ತೆ ಈ ಪ್ರಕರಣ ಮರುಹುಟ್ಟು ಪಡೆದಿದ್ದು ಸಲ್ಮಾನ್ ಜ್ವರಕ್ಕೆ ಕಾರಣವಾಗಬಹುದು. (ಏಜೆನ್ಸೀಸ್)

English summary
Salman Khan may get jailed and arrested for 14-year-old black buck killing case as the Rajasthan High Court revised the charges against Salman and colleagues.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada