»   » ಸಲ್ಮಾನ್ ಖಾನಿಗೆ ಜೈಲಾದರೆ, ಲಾಭ ನಷ್ಟ ಯಾರಿಗೆ?

ಸಲ್ಮಾನ್ ಖಾನಿಗೆ ಜೈಲಾದರೆ, ಲಾಭ ನಷ್ಟ ಯಾರಿಗೆ?

Posted By:
Subscribe to Filmibeat Kannada

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ 2002ರ ಹಿಟ್ ಅಂಡ್ ರನ್ ಕೇಸಿನ ವಿಚಾರಣೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.

ಹನ್ನೆರಡು ವರ್ಷದ ಹಿಂದೆ ನಡೆದ ಘಟನೆಯ ಬಗ್ಗೆ ಇಬ್ಬರು ಸಾಕ್ಷಿಗಳು ಸಲ್ಮಾನ್ ಅವರನ್ನು ಗುರುತಿಸಿದ್ದು, ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವುದರಿಂದ ಕೋರ್ಟ್ ಕುಣಿಕೆ ಸಲ್ಮಾನಿಗೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ.

ಅಂದು ರಾತ್ರಿ ಹನ್ನೊಂದು ಗಂಟೆಗೆ ಸುಮಾರಿಗೆ ಸಲ್ಮಾನ್ ತನ್ನ ಎಂಟು ಜನ ಗೆಳೆಯರೊಂದಿಗೆ ಬಾರಿಗೆ ಬಂದಿದ್ದರು. ಸಲ್ಮಾನ್ ಬಾರಿಗೆ ಬಂದಾಗ ಜನರಿಂದ ತುಂಬಿತ್ತು. ಸ್ವಲ್ಪ ಹೊತ್ತು ಕಾದ ನಂತರ ಸಲ್ಮಾನ್ ಮತ್ತು ಅವರ ಗೆಳೆಯರು ಮದ್ಯ ಸೇವಿಸಿ, ಊಟ ಮಾಡಿ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಬಾರಿನಿಂದ ತೆರಳಿದ್ದರು.

ಆದರೆ ಅಂದು ಸಲ್ಮಾನ್ ಗೆಳೆಯರ ಜೊತೆ ಮದ್ಯ ಸೇವಿಸಿದ್ದರೇ ಇಲ್ಲವೇ ಎನ್ನವ ಬಗ್ಗೆ ನನಗೆ ನೆನಪಾಗುತ್ತಿಲ್ಲ ಎಂದು ಬಾರಿನ ಪರಿಚಾರಕ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದಾನೆ. ಸೆಪ್ಟಂಬರ್ 28, 2002ರಲ್ಲಿ ಸಲ್ಮಾನ್ ಫುಟ್ ಪಾತಿನ ಮೇಲೆ ಕಾರು ಚಲಾಯಿಸಿ, ಬೇಕರಿಯೊಂದಕ್ಕೆ ಢಿಕ್ಕಿ ಹೊಡೆದಿದ್ದರು. ಆ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ ಇತರ ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.

ಒಂದು ವೇಳೆ, ನ್ಯಾಯಾಲಯ ಸಲ್ಮಾನ್ ಖಾನಿಗೆ ಜೈಲು ಶಿಕ್ಷೆ ವಿಧಿಸಿದರೆ ಬಾಲಿವುಡ್ ನಲ್ಲಿ ಯಾರಿಗೆ ಲಾಭ, ನಷ್ಟವಾಗಲಿದೆ?

ರಣಬೀರ್ ಮತ್ತು ಶಹೀದ್ ಕಪೂರ್

ತ್ರಿವಳಿ ಖಾನ್ ಗಳಲ್ಲಿ ಒಬ್ಬರು ಬಾಲಿವುಡ್ ನಿಂದ ದೂರ ಸರಿಯ ಬೇಕಾದ ಅನಿವಾರ್ಯತೆಗೆ ಬಂದಾಗ ಇದರ ಲಾಭವಾಗುವುದು ಕಪೂರ್ ಕುಟುಂಬಕ್ಕೆ. ಸಲ್ಮಾನ್ ಖಾನಿಗೆ ಜೈಲು ಶಿಕ್ಷೆಯಾದರೆ ಅದರ ನೇರ ಲಾಭವಾಗುವುದು ರಣಬೀರ್ ಮತ್ತು ಶಹೀದ್ ಕಪೂರಿಗೆ ಅನ್ನುತ್ತೆ ಬಾಲಿವುಡ್ ಜಗಲಿ.

ಸಂಜು ಮತ್ತು ಸಲ್ಲು

ಸಂಜಯ್ ದತ್ ಅವರ ವೈಯಕ್ತಿಕ ಬದುಕಿನ ಕಷ್ಟದ ದಿನದಲ್ಲಿ ಅವರ ಪರವಾಗಿ ಇದ್ದದ್ದು ಸಲ್ಮಾನ್ ಖಾನ್. ಈಗ ಸಲ್ಮಾನ್ ಜೈಲು ಸೇರಿದರೆ ಇಬ್ಬರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.

ಸಲ್ಮಾನ್ ಮೇಲೆ ಐನೂರು ಕೋಟಿ

ಸಲ್ಮಾನ್ ಖಾನ್ ಮೇಲೆ ವಿವಿಧ ರೂಪದಲ್ಲಿ ಐನೂರು ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಇದರಲ್ಲಿ 400 ಕೋಟಿ ಚಿತ್ರದ ಮೇಲಾದರೆ ಇನ್ನು 100 ಕೋಟಿ ಜಾಹೀರಾತಿನ ಮೇಲೆ. ಸಂಭಾವ್ಯ ಜೈಲು ಶಿಕ್ಷೆಯ ಮುನ್ಸೂಚನೆಯಲ್ಲಿರುವ ಸಲ್ಮಾನ್ ಒಪ್ಪಿಕೊಂಡಿರುವ ಎಲ್ಲಾ ಪ್ರಾಜೆಕ್ಟುಗಳನ್ನು ಶೀಘ್ರವಾಗಿ ಮುಗಿಸುತ್ತಿರುವುದರಿಂದ ನಿರ್ಮಾಪಕರು ಸೇಫ್.

ಸಲ್ಮಾನ್ ಮದುವೆ

ಈ ವರ್ಷಾಂತ್ಯದೊಳಗೆ ನನ್ನ ಬ್ರಹ್ಮಚಾರಿ ಜೀವನ ಕೊನೆಗೊಳ್ಳಲಿದೆ ಎಂದು ಸಲ್ಮಾನ್ ಹಲವು ಬಾರಿ ಹೇಳಿದ್ದರು. ಸಲ್ಮಾನ್ ಖಾನಿಗೆ ಜೈಲು ಶಿಕ್ಷೆಯಾದರೆ, ಅವರ ಮದುವೆ ರದ್ದಾಗಬಹುದು. ಇದರಿಂದ ಸಲ್ಲು ಪ್ರೇಯಸಿಗೆ ವಿರಹ ವೇದನೆ ನಿರಂತರ.

ಬ್ಲಾಕ್ ಬಸ್ಟರ್ ಚಿತ್ರದ ಸರದಾರ

ಸಲ್ಮಾನ್ ಖಾನ್ ಬಾಕ್ಸ್ ಆಫೀಸಿನ ಸರದಾರ. ಸಲ್ಲುಗೆ ಜೈಲಾದಾರೆ, ಶಾರೂಖ್, ಅಮೀರ್, ರಣಬೀರ್, ಶಹೀದ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್ ಮುಂತಾದವರ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಬರಬಹುದು.

ಸಹೋದರಿಯ ಮದುವೆ

ಸಲ್ಮಾನ್ ಬಹಳವಾಗಿ ಪ್ರೀತಿಸುವ ಆತನ ಸಹೋದರಿಯ ಮದುವೆ ಮುಂದಕ್ಕೆ ಹೋಗಬಹುದು. ಸಹೋದರನಿಗೆ ಜೈಲಾದರೆ ತಾನು ಪ್ರೀತಿಸಿರುವ ದೆಹಲಿ ಮೂಲದ ತನ್ನ ಗೆಳೆಯ ಆಯುಶ್ ಶರ್ಮಾ ಜೊತೆಗಿನ ಮದುವೆ ಮುಂದಕ್ಕೆ ಹೋಗಬಹುದು.

ಸೂರಜ್ ಪಂಚೋಲಿ

ಆದಿತ್ಯ ಪಂಚೋಲಿ ಮಗ ಸೂರಜ್ ಪಂಚೋಲಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾನೆ. ಈತನಿಗೆ ಮಾರ್ಗದರ್ಶಕ, ಗುರು ಎಲ್ಲಾ ಸಲ್ಮಾನ್. ಸೂರಜ್ ಚೊಚ್ಚಲ ಚಿತ್ರ ಸೆಟ್ಟೇರಲು ಸಜ್ಜಾಗುತ್ತಿದೆ. ಆದರೆ ಗುರುವೇ ಇಲ್ಲದಿದ್ದರೆ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಬಹುದು.

English summary
If Salman Khan gets jailed what impact on Bollywood industry.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada