Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸಲ್ಮಾನ್ ಖಾನ್ ಒಬ್ಬ ಮಹಿಳಾ ಪೀಡಕ': ಮಾಜಿ ಗೆಳತಿ ಆರೋಪ
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಪ್ರೀತಿಸೋ ಮಂದಿಗೇನು ಕಮ್ಮಿಯಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಸಲ್ಮಾನ್ ಖಾನ್‌ಗೆ ಫ್ಯಾನ್ಸ್ ಇದ್ದಾರೆ. ಅವರ ಸಿನಿಮಾಗಳಿಗಾಗಿ ಕಾದು ಕೂರುವ ಜನರಿದ್ದಾರೆ. ಹೀಗಿದ್ದರೂ ಬಾಲಿವುಡ್ ಟೈಗರ್ ಅನ್ನು ವಿರೋಧಿಸೋ ಜನರೇನು ಕಮ್ಮಿಯಿಲ್ಲ.
ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ ಮತ್ತೆ ಆರೋಪಗಳ ಸುರಿಮಳೆಯನ್ನೇ ಸುರಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸೋಮಿ ಅಲಿ ಒಂದು ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಶಾರುಖ್ಗಿಂತ
2
ವರ್ಷ
ಮುನ್ನವೇ
ದೀಪಿಕಾಗೆ
ಆಫರ್
ಕೊಟ್ಟಿದ್ದ
ಸಲ್ಮಾನ್:
ಡಿಪ್ಪಿ
ಒಪ್ಪಿಲಿಲ್ಲ
ಯಾಕೆ?
ಈ ಪೋಸ್ಟ್‌ನಲ್ಲಿ ಸೋಮಿ ಅಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮೇಲೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸೋಮಿ ಅಲಿ 90ರ ದಶಕದಲ್ಲಿ ಸಲ್ಮಾನ್ ಖಾನ್‌ರನ್ನು ಡೇಟ್ ಮಾಡಿದ್ದರು. ಅಂದು ಸಲ್ಮಾನ್ ಖಾನ್ ಆಕೆಯೊಂದಿಗೆ ಹೇಗೆ ನಡೆದುಕೊಂಡಿದ್ದರು ಅನ್ನೋದನ್ನು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಆ ಪೋಸ್ಟ್ ಈಗ ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಏನಿದೆ? ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಲ್ಮಾನ್ ಖಾನ್ ವಿರುದ್ಧ ಮಾಜಿ ಗೆಳತಿ ಆರೋಪ
ಬಾಲಿವುಡ್‌ನ ಮಾಜಿ ನಟಿ ಸೋಮಿ ಅಲಿ ನಟ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಈ ಪೋಸ್‌ನಲ್ಲಿ ಆರೋಪ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಿದ್ದರೂ, ತಕ್ಷಣವೇ ಅದನ್ನು ಡಿಲೀಟ್ ಮಾಡಿದ್ದರು. ಅಷ್ಟರೊಳಗೆ ಸೋಮಿ ಅಲಿ ಪೋಸ್ಟ್ ಎಲ್ಲಾ ಕಡೆಗಳಲ್ಲೂ ವೈರಲ್ ಆಗಿದೆ. ಮಾಜಿ ಗೆಳತಿ ಸೋಮಿ ಅಲಿಯ ಪೋಸ್ಟ್ ಬಗ್ಗೆ ಎಲ್ಲಾ ಕಡೆಗಳಲ್ಲೂ ಚರ್ಚೆಯಾಗುತ್ತಿದೆ.

ಸೋಮಿ ಅಲಿ ಆರೋಪಗಳೇನು?
ಸೋಮಿ ಅಲಿ ಫೋಟೊ ಒಂದನ್ನು ಶೇರ್ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದುಕೊಂಡಿದ್ದಾರೆ. " ಇನ್ನೂ ಹೊರಬರುತ್ತೆ. ಭಾರತದಲ್ಲಿ ನನ್ನ ಶೋಗಳನ್ನು ಬ್ಯಾನ್ ಮಾಡಲಾಗುತ್ತೆ. ದೂರು ದಾಖಲಿಸಿ ಬೆದರಿಸಲಾಗುತ್ತೆ. ನಿಮ್ಮ ವಕೀಲರನ್ನು ನೋಡಿಕೊಳ್ಳುತ್ತೇನೆ. ಹಲವು ವರ್ಷಗಳ ಹಿಂದೆ ನೀನು ಸಿಗರೇಟಿನಿಂದ ಸುಟ್ಟಿದ್ದನ್ನು, ದೈಹಿಕ ಹಾಗೂ ಲೈಂಗಿಕ ಹಿಂಸೆ ನೀಡಿದ್ದರಿಂದ ನನ್ನನ್ನು ರಕ್ಷಿಸಲು ಸುಮಾರು 50 ಮಂದಿ ವಕೀಲರಿದ್ದಾರೆ. ನೀನೊಬ್ಬ ಮಹಿಳಾ ಪೀಡಕ." ಎಂದು ಸೋಮಿ ಅಲಿ ಗಂಭೀರ ಆರೋಪ ಮಾಡಿದ್ದಾರೆ.

ಸಲ್ಮಾನ್ ಬೆಂಬಲಿಸಿದ ಎಲ್ಲಾ ನಟಿಯರಿಗೆ ನಾಚಿಕೆ ಆಗ್ಬೇಕು
ಸಲ್ಮಾನ್ ಖಾನ್ ಮಾಜಿ ಗೆಳತಿ ಇಷ್ಟಕ್ಕೆ ಸುಮ್ಮನಿರಲಿಲ್ಲ. ಸಲ್ಮಾನ್ ಖಾನ್‌ರನ್ನು ಬೆಂಬಲಿಸಿದ ಎಲ್ಲಾ ನಟಿಯರನ್ನೂ ಬಿಟ್ಟಿಲ್ಲ. " ಅದೆಷ್ಟೋ ಮಹಿಳೆಯರನ್ನು ಪೀಡಿಸಿದ ಇಂತಹ ವ್ಯಕ್ತಿಯನ್ನು ಬೆಂಬಲಿಸಿದ ನಾಯಕಿಯರಿಗೆ ನಾಚಿಕೆ ಆಗಬೇಕು. ಇದು ಯುದ್ಧಕ್ಕೆ ಹೋಗುವ ಸಮಯ." ಎಂದು ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕಿಡಿಕಾರಿದ್ದರು. ಇದೇ ವರ್ಷ ಮಾರ್ಚ್ ತಿಂಗಳಲ್ಲೂ ಸೋಮಿ ಅಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಒಂದು ದಿನ ಎಲ್ಲವೂ ಬೆಳಕಿಗೆ ಬರುತ್ತೆ
" ಮುಂದೊಂದು ದಿನ ಎಲ್ಲವೂ ಎಕ್ಸ್‌ಪೋಸ್ ಆಗುತ್ತೆ. ನೀನು ಹಿಂಸೆ ಕೊಟ್ಟ ಮಹಿಳೆ ಒಂದು ದಿನ ಹೊರಬಂದು ಸತ್ಯವನ್ನೆಲ್ಲಾ ಹೇಳುತ್ತಾರೆ. ಐಶ್ವರ್ಯ ರೈ ಬಚ್ಚನ್‌ರಂತೆ." ಎಂದು ಫೋಸ್ಟ್ ಮಾಡಿದ್ದರು. ಆ ಪೋಸ್ಟ್ ಕೂಡ ಡಿಲೀಟ್ ಆಗಿದೆ. ವಿಶೇಷ ಅಂದರೆ, ಈ ಪೋಸ್ಟ್‌ನಲ್ಲಿ ಸಲ್ಮಾನ್ ಖಾನ್ ನಟಿಸಿದ 'ಮೈನೇ ಪ್ಯಾರ್ ಕಿಯಾ' ಸಿನಿಮಾದ 'ಆತೆ ಜಾತೆ ಹಸ್ತೆ ಜಾತೆ' ಹಾಡನ್ನು ಹಾಕಿದ್ದರು. ಈ ಪೋಸ್ಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.