Don't Miss!
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದುಬೈ ಮಾಲ್ ನಲ್ಲಿ ಸಲ್ಮಾನ್ ಖಾನ್ ನ 'ಕ್ಯಾರೇ' ಅನ್ನೋರೇ ಇರಲಿಲ್ಲ.!
Recommended Video

ಸೆಲೆಬ್ರಿಟಿಗಳನ್ನ ಭೇಟಿ ಮಾಡಬೇಕು, ಅವರ ಜೊತೆಗೆ ಒಂದು ಫೋಟೋ ಕ್ಲಿಕ್ ಮಾಡಿಕೊಳ್ಳಬೇಕು ಎಂಬ ಆಸೆ ಯಾರಿಗ್ತಾನೆ ಇರಲ್ಲ ಹೇಳಿ.? ಅದರಲ್ಲೂ ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಅಂದ್ರೆ ಸುಮ್ನೆನಾ.?
ಸಲ್ಮಾನ್ ಖಾನ್ ಗೆ ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದಾರೆ. ವಿದೇಶಗಳಲ್ಲೂ ಸಲ್ಲು ಭಾಯ್ ಗೆ ಫ್ಯಾನ್ಸ್ ಇದ್ದಾರೆ. ಹೀಗಿದ್ದರೂ, ದುಬೈನ ಪ್ರತಿಷ್ಟಿತ ಮಾಲ್ ಒಂದರಲ್ಲಿ ಸಲ್ಮಾನ್ ಖಾನ್ ಗೆ 'ಕ್ಯಾರೇ' ಅನ್ನೋರೇ ಇರಲಿಲ್ಲ ಅಂದ್ರೆ ನೀವು ನಂಬ್ತೀರಾ.?
ನಂಬಲೇಬೇಕು ಸ್ವಾಮಿ. ನಂಬಲ್ಲ ಅಂದ್ರೆ ಮೊದಲು ಈ ವಿಡಿಯೋನ ನೋಡಿಕೊಂಡು ಬನ್ನಿ...
ದುಬೈ ಮಾಲ್ ನಲ್ಲಿ ಸಲ್ಮಾನ್ ಖಾನ್ ಓಡಾಡುತ್ತಿದ್ದ ವಿಡಿಯೋನ ಇನ್ಸ್ಟಾಗ್ರಾಮ್ ಮೂಲಕ 'ಸ್ಪಾಟ್ ಬಾಯ್' ಜಗಜ್ಜಾಹೀರು ಮಾಡಿದೆ. ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಮುಖ ಸ್ಪಷ್ಟವಾಗಿ ಕಾಣಲ್ಲ. ಆದ್ರೆ, ಅಕ್ಕ-ಪಕ್ಕ ಬೌನ್ಸರ್ ಗಳನ್ನ ಇಟ್ಟುಕೊಂಡು, ಮಾಲ್ ನಲ್ಲಿ ಓಡಾಡಿ, ಫೋನ್ ನಲ್ಲಿ ಬಿಜಿಯಾಗಿರುವವರು ಸಲ್ಮಾನ್ ಖಾನ್ ಎಂದೇ ಹೇಳಲಾಗಿದೆ.
'ದಬ್ಬಂಗ್-3'
ಬೇಡವೇ
ಬೇಡ:
ಟ್ವಿಟ್ಟರ್
ನಲ್ಲಿ
ಸಲ್ಮಾನ್
ಅಭಿಮಾನಿಗಳ
ಆಗ್ರಹ.!
ಹಾಗ್ನೋಡಿದ್ರೆ, ದುಬೈನಲ್ಲೂ ಸಲ್ಮಾನ್ ಖಾನ್ ಗೆ ಫ್ಯಾನ್ಸ್ ಇದ್ದಾರೆ. ದುಬೈನಲ್ಲೂ ಬಾಲಿವುಡ್ ಚಿತ್ರಗಳಿಗೆ ದೊಡ್ಡ ಓಪನ್ನಿಂಗ್ ಸಿಗುತ್ತೆ. ಹೀಗಿದ್ದರೂ, ಮಾಲ್ ನಲ್ಲಿ ಸಲ್ಮಾನ್ ಖಾನ್ ನ ಯಾರೂ ಗುರುತು ಹಿಡಿಯಲಿಲ್ಲ ಅಂದ್ರೆ ಆಶ್ಚರ್ಯಕರ.!
ಅಥವಾ ಅವರು ಸಲ್ಮಾನ್ ಖಾನ್ ಅಂತ ಗೊತ್ತಿದ್ದರೂ, ಅವರ ಪ್ರೈವಸಿಗೆ ಧಕ್ಕೆ ತರಬಾರದು ಎಂಬ ಕಾರಣಕ್ಕೆ ಮಾಲ್ ನಲ್ಲಿದ್ದ ಜನ ಸಲ್ಮಾನ್ ಖಾನ್ ಹತ್ತಿರಕ್ಕೆ ಬರ್ಲಿಲ್ವಾ.? ನಮಗಂತೂ ಗೊತ್ತಿಲ್ಲ.
'ರೇಸ್-3'
ಬಕ್ವಾಸ್
ಸಿನಿಮಾ:
ಆಡಿಕೊಂಡು
ನಗುತ್ತಿದ್ದಾರೆ
ಜನ.!
ಆದ್ರೆ, ಎಲ್ಲೇ ಹೋದರೂ ಸೆಲೆಬ್ರಿಟಿಗಳ ಮೇಲೆ ಜನ ಮುಗಿಬೀಳ್ತಿದ್ರೆ ಮಾತ್ರ ಬೆಲೆ. ಇಲ್ಲಾಂದ್ರೆ, ಅವರಿಗೆ ಮಾರ್ಕೆಟ್ ಇಲ್ಲ ಅಂತಲೇ ಜನ ಮಾತನಾಡಿಕೊಳ್ತಾರೆ. ಸದ್ಯ ಸಲ್ಮಾನ್ ಖಾನ್ ಬಗ್ಗೆ ಜನ ಮಾತನಾಡಿಕೊಳ್ತಿರೋದು ಹೀಗೆಯೇ.!
ಅಂದ್ಹಾಗೆ, ನಟ ಸಲ್ಮಾನ್ ಖಾನ್ ದುಬೈಗೆ ಹೋಗಿದ್ದು 'ದಬ್ಬಂಗ್ ಟೂರ್' ಪ್ರಯುಕ್ತ. 'ರೇಸ್-3' ಬಿಡುಗಡೆ ಆದ ಬಳಿಕ ಸಲ್ಮಾನ್ ಖಾನ್, ಕತ್ರಿನಾ ಕೈಫ್, ಜಾಕ್ಲಿನ್ ಫರ್ನಾಂಡಿಸ್ ಹಾಗೂ ಡೈಸಿ ಶಾ 'ದಬ್ಬಂಗ್ ಟೂರ್'ನಲ್ಲಿ ಪಾಲ್ಗೊಂಡಿದ್ದಾರೆ.
'ದಬ್ಬಂಗ್ ಟೂರ್' ಮುಗಿದ ಬಳಿಕ 'ಭಾರತ್' ಚಿತ್ರಕ್ಕೆ ಸಲ್ಮಾನ್ ಖಾನ್ ಚಾಲನೆ ಕೊಡಲಿದ್ದಾರೆ. 'ಭಾರತ್' ಸಿನಿಮಾದಲ್ಲಿ ಸಲ್ಮಾನ್ ಜೊತೆಗೆ ಪ್ರಿಯಾಂಕಾ ಛೋಪ್ರಾ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. 'ಭಾರತ್' ಅಲ್ಲದೇ 'ದಬ್ಬಂಗ್-3', 'ಶೇರ್ ಖಾನ್', 'ಟೈಗರ್ ಝಿಂದಾ ಹೈ 3' ಪ್ರಾಜೆಕ್ಟ್ ಗಳು ಸಲ್ಮಾನ್ ಖಾನ್ ಕೈಯಲ್ಲಿವೆ.