»   » ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.?

ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.?

Posted By:
Subscribe to Filmibeat Kannada
ಅತ್ತಿಗೆ ಮಾಜಿ ಪ್ರಿಯತಮನ ಮೇಲೆ ಸಲ್ಲು ಗರಂ | FIlmibeat Kannada

ನಿರ್ಮಾಪಕ ಬೋನಿ ಕಪೂರ್ ಮೊದಲ ಪತ್ನಿಯ ಪುತ್ರ, ಬಾಲಿವುಡ್ ನಟ ಅರ್ಜುನ್ ಕಪೂರ್ ಕಂಡ್ರೆ 'ಬಾಲಿವುಡ್ ಟೈಗರ್' ಸಲ್ಮಾನ್ ಖಾನ್ ಗೆ ಕೆಂಡದಷ್ಟು ಕೋಪ. ಯಾಕೆ ಅಂದ್ರೆ, ಒಂದು ಗಾಸಿಪ್ ಕಹಾನಿಯೇ ಬಿಟೌನ್ ಗಲ್ಲಿಗಳಲ್ಲಿ ಕೇಳಿಬರುತ್ತೆ.

ಎಲ್ಲರಿಗೂ ಗೊತ್ತಿರುವ ಹಾಗೆ, ಸಲ್ಮಾನ್ ಖಾನ್ ಸಹೋದರ ಅರ್ಬಾಝ್ ಖಾನ್ ಹಾಗೂ ಪತ್ನಿ ಮಲೈಕಾ ಅರೋರ ವಿಚ್ಛೇದನ ಪಡೆದು ಒಂದು ವರ್ಷ ಉರುಳಿದೆ. ಅರ್ಬಾಝ್ ಖಾನ್ ಸಂಸಾರ ಮುರಿದು ಬೀಳುವುದಕ್ಕೆ ಅರ್ಜುನ್ ಕಪೂರ್ ಕಾರಣ. ಹೀಗಾಗಿ, ಅರ್ಜುನ್ ಕಪೂರ್ ಕಂಡ್ರೆ ಸಲ್ಮಾನ್ ಖಾನ್ ಗೆ ಆಗಲ್ಲ ಎಂಬ ಗುಸುಗುಸು ಹರಿದಾಡಿತ್ತು.

ಹದಿನೆಂಟು ವರ್ಷಗಳ ಕಾಲ ಸಂಸಾರ ಮಾಡಿದ ಅರ್ಬಾಝ್ ಖಾನ್ ಹಾಗೂ ಮಲೈಕಾ ಅರೋರ ಕಳೆದ ವರ್ಷ ವಿಚ್ಛೇದನ ಪಡೆದರು. ವಿಚ್ಛೇದನಕ್ಕೆ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ನಡುವಿನ ಎಕ್ಸ್ ಟ್ರಾ ಸ್ಪೆಷಲ್ ಸ್ನೇಹವೇ ಕಾರಣ ಎಂಬ ಅಂತೆ-ಕಂತೆಯೂ ಶುರುವಾಗಿತ್ತು. ಅದಕ್ಕೆ ತಕ್ಕ ಹಾಗೆ ಅರ್ಜುನ್ ಹಾಗೂ ಮಲೈಕಾ ಹೋಟೆಲ್, ಪಾರ್ಟಿ, ಡಿನ್ನರ್ ಅಂತ ಎಲ್ಲೆಡೆ ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದರು. ಇದನ್ನೆಲ್ಲ ಗಮನಿಸಿದ ಸಲ್ಮಾನ್ ಗೆ ಈಗ ಅರ್ಜುನ್ ಕಪೂರ್ ಅಂದ್ರೆ ಅಷ್ಟಕಷ್ಟೆ. ಮುಂದೆ ಓದಿರಿ...

ಬೋನಿ ಕಪೂರ್ ಸಲಹೆ ಸ್ವೀಕರಿಸಲಿಲ್ಲ.!

ನಿರ್ಮಾಪಕ ಬೋನಿ ಕಪೂರ್ ಆರ್ಥಿಕ ಸಂಕಷ್ಟದಲ್ಲಿದ್ದಾಗ, 'ನೋ ಎಂಟ್ರಿ' ಚಿತ್ರದಲ್ಲಿ ಫ್ರೀಯಾಗಿ ಸಲ್ಮಾನ್ ಖಾನ್ ಅಭಿನಯಿಸಿದ್ದರು. ಸಲ್ಮಾನ್ ಮಾಡಿದ ಈ ಉಪಕಾರದಿಂದಾಗಿ, ಮಲೈಕಾ ರಿಂದ ದೂರ ಉಳಿಯಲು ತಮ್ಮ ಪುತ್ರ ಅರ್ಜುನ್ ಗೆ ಬೋನಿ ಕಪೂರ್ ಸಲಹೆ ಕೊಟ್ಟಿದ್ದರು. ಆದ್ರೆ, ಅದನ್ನ ಅರ್ಜುನ್ ಸೀರಿಯಸ್ ಆಗಿ ಪರಿಗಣಿಸಿರಲಿಲ್ಲ.

ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಗೊಳಿಸಿದ ಬಾಲಿವುಡ್ ತಾರೆಯರು

ಅರ್ಜುನ್ ಕಪೂರ್ ಗೆ ಯಾರೂ ಆಫರ್ ಕೊಡುತ್ತಿಲ್ಲ.?

ತಮ್ಮ ಸಹೋದರನ ಸಂಸಾರ ಮುರಿದು ಬಿದ್ಮೇಲೆ, ಸಲ್ಮಾನ್ ಖಾನ್ ಅಪ್ಸೆಟ್ ಆಗಿದ್ದಾರೆ. ಅರ್ಜುನ್ ಕಪೂರ್ ಮೇಲೆ ಸಲ್ಲು ಮುನಿಸಿಕೊಂಡಿದ್ದಾರೆ. ಹೀಗಾಗಿ, ಸಲ್ಮಾನ್ ಖಾನ್ ಗೆ ಆಪ್ತವಾಗಿರುವ ಹಲವು ಫಿಲ್ಮ್ ಮೇಕರ್ ಗಳು ಅರ್ಜುನ್ ಕಪೂರ್ ಗೆ ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡುತ್ತಿಲ್ವಂತೆ.

ಅರ್ಜುನ್ ಕಪೂರ್ ಪ್ರಯತ್ನ ಸಫಲ ಆಗಿಲ್ಲ.!

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಬಂಧನಕ್ಕೊಳಗಾಗಿದ್ದಾಗ, ಸಲ್ಮಾನ್ ಖಾನ್ ಸಹೋದರಿ ಜೊತೆ ಅರ್ಜುನ್ ಕಪೂರ್ ಮಾತನಾಡಿದ್ದರಂತೆ. ಅರ್ಜುನ್ ಕಪೂರ್ ತೋರಿಸುತ್ತಿರುವ ಕಾಳಜಿ ಬಗ್ಗೆ ಸಲ್ಮಾನ್ ಅರಿವಿದ್ದರೂ, ಅರ್ಜುನ್ ರನ್ನ ಸಲ್ಮಾನ್ ಖಾನ್ ಅವಾಯ್ಡ್ ಮಾಡುತ್ತಿದ್ದಾರೆ.

ಏನಿಲ್ಲ, ಏನೇನೂ ಇಲ್ಲ.!

ಇಷ್ಟೆಲ್ಲ ಅಂತೆ-ಕಂತೆ ಪುರಾಣ ಕೇಳಿ ಬಂದರೂ, ''ನಮ್ಮಿಬರ ನಡುವೆ ಏನಿಲ್ಲ. ಎಲ್ಲವೂ ಸುಳ್ಳು ಸುದ್ದಿ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೇ'' ಅಂತ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಸ್ಪಷ್ಟ ಪಡಿಸಿದ್ದಾರೆ. ಆದ್ರೆ, ನಿನ್ನೆಯಷ್ಟೇ ಸೋನಂ ಕಪೂರ್ ಆರತಕ್ಷತೆಯಲ್ಲಿ ಸಲ್ಮಾನ್ ಖಾನ್ ನಡವಳಿಕೆ ನೋಡಿದ್ಮೇಲೆ, ಬೆಂಕಿ ಇಲ್ಲದೆ ಹೊಗೆ ಬರಲ್ಲ, ಏನೂ ಇಲ್ಲದೆ ಗಾಸಿಪ್ ಹುಟ್ಟಲ್ಲ ಅಂತ ಬಿಟೌನ್ ಮಂದಿ ಮಾತನಾಡಿಕೊಳ್ತಿದ್ದಾರೆ.

ಅಷ್ಟಕ್ಕೂ, ನಿನ್ನೆ ಆಗಿದ್ದೇನು.?

ನಿನ್ನೆ ಬೆಳಗ್ಗೆ ವಿವಾಹ ಮಹೋತ್ಸವ ಮುಗಿದ ಬಳಿಕ ಸಂಜೆ ಮುಂಬೈನ ಹೋಟೆಲ್ ಒಂದರಲ್ಲಿ ಸೋನಂ ಕಪೂರ್-ಆನಂದ್ ಅಹುಜಾ ರವರ ರಿಸೆಪ್ಷನ್ ಪಾರ್ಟಿ ನಡೆಯಿತು. ಇದಕ್ಕೆ ಸಲ್ಮಾನ್ ಖಾನ್ ಕೊಂಚ ತಡವಾಗಿ ಆಗಮಿಸಿದರು. ರಿಸೆಪ್ಷನ್ ಪಾರ್ಟಿಗೆ ಸಲ್ಮಾನ್ ಆಗಮಿಸಿದಾಗ, ಜಾಹ್ನವಿ ಕಪೂರ್, ಖುಷಿ ಕಪೂರ್ ಹಾಗೂ ಅನ್ಷುಲಾ ಕಪೂರ್ ಕ್ಯಾಮರಾಗೆ ಪೋಸ್ ಕೊಡುತ್ತಿದ್ದರು. ಸ್ವಲ್ಪ ಮುಂದೆ ಕತ್ರಿನಾ ಕೈಫ್ ನಿಂತಿದ್ದರು. ಸೀದಾ ಹೋಗಿ ಕತ್ರಿನಾ ರನ್ನ ಅಪ್ಪಿ ಸಲ್ಮಾನ್ ಮುತ್ತು ಕೊಟ್ಟರು. ಆದ್ರೆ, ಪಕ್ಕದಲ್ಲೇ ನಿಂತಿದ್ದ ಅರ್ಜುನ್ ಕಪೂರ್ ಕಡೆ ಸಲ್ಮಾನ್ ತಿರುಗಿಯೂ ನೋಡಲಿಲ್ಲ.

ಧೈರ್ಯ ಮಾಡದ ಅರ್ಜುನ್

ಸಲ್ಮಾನ್ ಖಾನ್ ರನ್ನ ಮಾತನಾಡಿಸುವ ಧೈರ್ಯವನ್ನೂ ಅರ್ಜುನ್ ಕಪೂರ್ ಮಾಡಲಿಲ್ಲ. ಬೇಕಾದ್ರೆ ನೀವೇ ಈ ವಿಡಿಯೋ ನೋಡಿ...

ಬೋನಿ ಕಪೂರ್ ಮಕ್ಕಳು.!

ಶ್ರೀದೇವಿ ಮೃತಪಟ್ಟ ನಂತರ ಬೋನಿ ಕಪೂರ್ ಮಕ್ಕಳೆಲ್ಲ ಒಂದಾಗಿದ್ದಾರೆ. ಅದಕ್ಕೆ ಸಾಕ್ಷಿ ಈ ಫೋಟೋ.

ಮಕ್ಕಳೊಂದಿಗೆ ಖುಷಿಯಾಗಿರುವ ಬೋನಿ.!

ಸೋನಂ-ಆನಂದ್ ರವರ ರಿಸೆಪ್ಷನ್ ಪಾರ್ಟಿಗೆ ಸಲ್ಮಾನ್ ಖಾನ್ ಎಂಟ್ರಿಕೊಡುವ ಮುನ್ನ ಕ್ಲಿಕ್ ಆಗಿರುವ ಫೋಟೋ ಇದು.

ಸಲ್ಮಾನ್ ಖಾನ್ ಎಂಟ್ರಿ.!

ಖುಷಿ ಖುಷಿಯಾಗಿಯೇ ರಿಸೆಪ್ಷನ್ ಪಾರ್ಟಿಗೆ ಬಂದ ಸಲ್ಮಾನ್ ಎದುರಿಗೆ ಅರ್ಜುನ್ ಕಪೂರ್ ನಿಂತಿದ್ದರು. ಇದರಿಂದ ಅಪ್ಸೆಟ್ ಆಗದ ಸಲ್ಮಾನ್, ಕಂಪ್ಲೀಟ್ ಆಗಿ ಅರ್ಜುನ್ ಕಪೂರ್ ರನ್ನ ಅವಾಯ್ಡ್ ಮಾಡಿದರು.

ಮತ್ತೆ ಗುಸುಗುಸು ಶುರು

ಅರ್ಜುನ್ ಕಪೂರ್ ಕುರಿತು ಸಲ್ಮಾನ್ ತೋರಿದ ವರ್ತನೆಯಿಂದಾಗಿ ಮತ್ತೆ ಇದೇ ಮ್ಯಾಟರ್ ಬಾಲಿವುಡ್ ತುಂಬಾ ಸುದ್ದಿಯಾಗುತ್ತಿದೆ.

English summary
Bollywood Actor Salman Khan ignores Arjun Kapoor at Sonam's Reception. Watch video.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X