For Quick Alerts
  ALLOW NOTIFICATIONS  
  For Daily Alerts

  'ಎಂಎಸ್ ಧೋನಿ' ನಾಯಕಿ ಕಿಯಾರಾಗೆ ಹೆಸರು ಬದಲಿಸಿದ್ದು ಯಾರು?

  |

  ಕಿಯಾರಾ ಅಡ್ವಾಣಿ 29ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ 12ಕ್ಕೆ ಕಿಯಾರಾ ಅಭಿನಯದ ಹೊಸ ಸಿನಿಮಾ 'ಶೇರ್ ಶಾ' ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಿಯರಾ ಅಡ್ವಾಣಿ ಸ್ಟಾರ್ ನಟ ಲಕ್ಕಿ ಎನಿಸಿಕೊಳ್ಳುತ್ತಿದ್ದಾರೆ. ಹಾಟ್ ಅಂಡ್ ಬೋಲ್ಡ್ ಪಾತ್ರಗಳಲ್ಲಿ ಯಾವುದೇ ಅಂಜಿಕೆ ಇಲ್ಲದೇ ನಟಿಸುತ್ತಿರುವ ಕಿಯಾರಾ ನಿರ್ದೇಶಕರ ಮೊದಲ ಆಯ್ಕೆಯೂ ಆಗಿದ್ದಾರೆ.

  ಉದ್ಯಮಿ ಜಗದೀಪ್ ಅಡ್ವಾಣಿ ಮತ್ತು ಜಿನೀವೀವ್ ಜಾಫ್ರಿ ದಂಪತಿಯ ಮಗಳು ಕಿಯಾರಾಗೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ನಂಟಿದೆ. ಕಿಯರಾ ಬಿಗ್ ಇಂಡಸ್ಟ್ರಿಯಲ್ಲಿ ಈ ಮಟ್ಟಕ್ಕೆ ಬೆಳೆಯಲು ಪರೋಕ್ಷವಾಗಿ ಬಡಾ ಭಾಯ್ ಕಾರಣ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕಿಯಾರಾ ಅವರ ಪೋಷಕರಿಗೆ ಮತ್ತು ಸಲ್ಮಾನ್ ಖಾನ್‌ಗೆ ಯಾವುದೇ ಪರಿಚಯ ಇಲ್ಲ. ಆದರೆ, ಕಿಯಾರಾ ಚಿಕ್ಕಮ್ಮನ ಶಾಹೀನ್ ಜಾಫ್ರಿ ಸಹಾಯ ಹಾಗೂ ಸಲ್ಮಾನ್ ಖಾನ್ ನೆರವಿನಿಂದ ಕಿಯಾರಾ ಇಂಡಸ್ಟ್ರಿ ಎಂಟ್ರಿಯಾಗಲು ಸಾಧ್ಯವಾಯಿತು. ಶಾಹೀನ್ ಜಾಫ್ರಿ, ಸಲ್ಲು ಮಾಜಿ ಗೆಳತಿ. ಮುಂದೆ ಓದಿ...

  ಸಲ್ಮಾನ್‌ ಖಾನ್‌ಗೆ ನಿರ್ದೇಶನ ಮಾಡಲು ನಿರಾಕರಿಸಿದ್ದೇಕೆ ರಾಜಮೌಳಿ? ಸಲ್ಮಾನ್‌ ಖಾನ್‌ಗೆ ನಿರ್ದೇಶನ ಮಾಡಲು ನಿರಾಕರಿಸಿದ್ದೇಕೆ ರಾಜಮೌಳಿ?

  ಸಲ್ಮಾನ್ ಖಾನ್ ಶಕ್ತಿಯಿಂದ ಇಂಡಸ್ಟ್ರಿಗೆ ಎಂಟ್ರಿ

  ಸಲ್ಮಾನ್ ಖಾನ್ ಶಕ್ತಿಯಿಂದ ಇಂಡಸ್ಟ್ರಿಗೆ ಎಂಟ್ರಿ

  ಕಿಯಾರಾ ಅಡ್ವಾಣಿ ಚಿತ್ರರಂಗಕ್ಕೆ ಬರುವ ಸಮಯದಲ್ಲಿ ಅವರ ತಂದೆ ಜಗದೀಪ್ ಅಡ್ವಾಣಿ, ಸಲ್ಮಾನ್ ಖಾನ್ ಬಳಿ ಹೇಳಿದ ಮಾತನ್ನು ಕಿಯಾರಾ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. 'ನೀವು ಉದ್ಯಮದಲ್ಲಿದ್ದೀರಾ ಅಂದ್ರೆ ನನ್ನ ಮಗಳು ಚಿತ್ರರಂಗಕ್ಕೆ ಬರುವುದರಲ್ಲಿ ನನಗೆ ಯಾವುದೇ ಅಭ್ಯಂತರ ಇಲ್ಲ. ಅವಳ ಪ್ರಯತ್ನ ಸಾಗಲಿ, ಅದು ಎಲ್ಲಿಗೆ ಕರೆದೊಯ್ಯತ್ತದೆ ನೋಡೋಣ'' ಎಂದಿದ್ದರು. ಇದೇ ಸಂದರ್ಶನದಲ್ಲಿ ''ಸಲ್ಮಾನ್ ಖಾನ್ ನನ್ನ ಆರಂಭಿಕ ದಿನಗಳಲ್ಲಿ ಬಹಳ ಪ್ರೋತ್ಸಾಹ ಕೊಟ್ಟರು'' ಎಂದು ಹೇಳಿಕೊಂಡಿದ್ದಾರೆ.

  ಹೆಸರು ಬದಲಿಸಲು ಕಾರಣ ಸಲ್ಮಾನ್

  ಹೆಸರು ಬದಲಿಸಲು ಕಾರಣ ಸಲ್ಮಾನ್

  ಕಿಯಾರಾ ಅಡ್ವಾಣಿಯ ಮೂಲ ಹೆಸರು ಆಲಿಯಾ ಅಡ್ವಾಣಿ. ಈ ಹೆಸರನ್ನು ಬದಲಿಸಲು ಸಲಹೆ ಕೊಟ್ಟಿದ್ದು ಸಲ್ಮಾನ್ ಖಾನ್. ಆಲಿಯಾ ಬದಲು ಕಿಯಾರಾ ಎಂದು ನಾಮಕರಣ ಮಾಡಿದ್ದು ಸಲ್ಲು. ಅದಾಗಲೇ ಆಲಿಯಾ ಭಟ್ ಇಂಡಸ್ಟ್ರಿಯಲ್ಲಿದ್ದ ಕಾರಣ ಮತ್ತೆ ಅದೇ ಹೆಸರಿನಲ್ಲಿ ಮುಂದುವರಿಯುವುದು ಬೇಡ ಎಂಬ ಕಾರಣಕ್ಕಾಗಿ ಆಲಿಯಾ ಬದಲು ಕಿಯಾರಾ ಮಾಡಲಾಯಿತು. ಅಂದ್ಹಾಗೆ, ಈ ಹೆಸರು ಪ್ರಿಯಾಂಕಾ ಚೋಪ್ರಾ ಅವರ 'ಅಂಜಾನ ಅಂಜಾನಿ' ಚಿತ್ರದಿಂದ ಸ್ಫೂರ್ತಿ ಪಡೆದಿದ್ದು ಎಂದು ಕಿಯಾರಾ ಹೇಳಿದ್ದರು.

  ಎಂಎಸ್ ಧೋನಿ ಚಿತ್ರದಿಂದ ಬ್ರೇಕ್

  ಎಂಎಸ್ ಧೋನಿ ಚಿತ್ರದಿಂದ ಬ್ರೇಕ್

  2014ರಲ್ಲಿ ಫಂಗ್ಲಿ ಚಿತ್ರದಲ್ಲಿ ಮೊದಲ ಸಲ ಕಿಯಾರಾ ನಟಿಸಿದರು. ಆದರೆ, 2016ರಲ್ಲಿ ತೆರೆಕಂಡ 'ಎಂಎಸ್ ಧೋನಿ' ಚಿತ್ರ ದೊಡ್ಡ ಬ್ರೇಕ್ ಕೊಡ್ತು. ಈ ಚಿತ್ರದಲ್ಲಿ ಸಾಕ್ಷಿ ಸಿಂಗ್ ಪಾತ್ರದಲ್ಲಿ ಕಿಯರಾ ಅಭಿನಯಿಸಿದ್ದರು. ಕಿಯಾರಾ ಅವರನ್ನು ಈಗಲು ಬಹಳಷ್ಟು ಜನರು ಧೋನಿ ಸಿನಿಮಾದ ನಾಯಕಿ ಎಂದೇ ಗುರುತಿಸುತ್ತಾರೆ.

  ದಕ್ಷಿಣಕ್ಕೆ ಎಂಟ್ರಿ ಕೊಟ್ಟ ಕಿಯಾರಾ

  ದಕ್ಷಿಣಕ್ಕೆ ಎಂಟ್ರಿ ಕೊಟ್ಟ ಕಿಯಾರಾ

  'ಎಂಎಸ್ ಧೋನಿ' ಚಿತ್ರದ ಮೂಲಕ ಗಮನ ಸೆಳೆದ ಕಿಯಾರಾ, ತೆಲುಗಿನಲ್ಲಿ ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಪಡೆದುಕೊಂಡರು. 'ಭರತ್ ಅನೇ ನೇನು' ಚಿತ್ರದಲ್ಲಿ ನಾಯಕಿಯಾದರು. ಈ ಸಿನಿಮಾ ಕಿಯಾರಾ ಸೌತ್‌ನಲ್ಲಿ ಬೇಡಿಕೆ ಹೆಚ್ಚಿಸಿತು. ಈ ಸಿನಿಮಾ ಮುಗಿಯುತ್ತಿದ್ದಂತೆ ರಾಮ್ ಚರಣ್ ಜೊತೆ 'ವಿನಯ ವಿಧೇಯ ರಾಮ' ಚಿತ್ರದಲ್ಲಿ ಕಾಣಿಸಿಕೊಂಡರು.

  ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್ಸದ್ಯದಲ್ಲೇ ಕತ್ರಿನಾ ಮದುವೆ: ಸುಳಿವು ನೀಡಿದ ಸಲ್ಮಾನ್ ಖಾನ್ ಡಿಸೈನರ್

  ಕಬೀರ್ ಸಿಂಗ್ ಬೋಲ್ಡ್ ನಟನೆ

  ಕಬೀರ್ ಸಿಂಗ್ ಬೋಲ್ಡ್ ನಟನೆ

  'ಅರ್ಜುನ್ ರೆಡ್ಡಿ' ಹಿಂದಿ ರಿಮೇಕ್‌ನಲ್ಲಿ ಕಿಯಾರಾ ಕಾಣಿಸಿಕೊಂಡರು. ಶಾಹೀದ್ ಕಪೂರ್ ಜೊತೆ 'ಕಬೀರ್ ಸಿಂಗ್' ಸಿನಿಮಾ ಮಾಡಿದ ನಟಿ, ಸಖತ್ ಬೋಲ್ಡ್ ಆಗಿ ಅಭಿನಯಿಸಿದರು. ಇಲ್ಲಿಂದ ಹಾಟ್ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಕಿಯಾರಾ ರಾಯಭಾರಿ ಆದರು.

  ಶಂಕರ್ ಜೊತೆ ಹೊಸ ಸಿನಿಮಾ

  ಶಂಕರ್ ಜೊತೆ ಹೊಸ ಸಿನಿಮಾ

  ದಕ್ಷಿಣದ ಖ್ಯಾತ ನಿರ್ದೇಶಕ ಶಂಕರ್ ಮತ್ತು ತೆಲುಗು ನಟ ರಾಮ್ ಚರಣ್ ತೇಜ ಕಾಂಬಿನೇಷನ್‌ನಲ್ಲಿ ಶುರುವಾಗುತ್ತಿರುವ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸುದ್ದಿಯನ್ನು ಹುಟ್ಟುಹಬ್ಬದ ವಿಶೇಷವಾಗಿ ಶಂಕರ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

  ಕಿಯಾರಾ ಮುಂದಿನ ಚಿತ್ರಗಳು

  ಕಿಯಾರಾ ಮುಂದಿನ ಚಿತ್ರಗಳು

  ಕಿಯಾರಾ ಅಡ್ವಾಣಿ ಸದ್ಯ ಹಿಂದಿ ಮತ್ತು ತೆಲುಗಿನಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ. 'ಶೇರ್‌ಶಾ' ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. 'ಭೂಲ್ ಭುಲೈಯಾ 2' ತೆರೆಗೆ ಬರಲು ಸಜ್ಜಾಗಿದೆ. 'ಜಗ್ ಜಗ್ ಜೀಯೋ' ಸಿನಿಮಾದಲ್ಲಿ ಕಿಯಾರಾ ಅಭಿನಯಿಸಿದ್ದಾರೆ.

  English summary
  Salman Khan is the reason behind Kiara Advani's debut in Bollywood; Changed her original name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X