For Quick Alerts
  ALLOW NOTIFICATIONS  
  For Daily Alerts

  ಭಾರತದ ಮೊದಲ ಕ್ರಿಪ್ಟೊ ಲಾಂಚ್ ಮಾಡಿದ ಸಲ್ಮಾನ್ ಖಾನ್

  |

  ಈಗ ಎಲ್ಲಿ ನೋಡಿದರೂ ಕ್ರಿಪ್ಟೋ ಕರೆನ್ಸಿಯದ್ದೇ ಮಾತು. ಕೆಲವೇ ವರ್ಷಗಳಲ್ಲಿ ಕ್ರಿಪ್ಟೊ ಕರೆನ್ಸಿಗಳು ಏರಿದ ಎತ್ತರ ಅಸಾಮಾನ್ಯ. ಬಿಟ್‌ಕಾಯಿನ್ ಅಂತೂ ಒಮ್ಮೆಲೆ ಆಕಾಶಕ್ಕೆ ಚಿಮ್ಮಿ ಕೋಟ್ಯಂತರ ಜನರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿಬಿಟ್ಟಿದೆ.

  ಭಾರತದಲ್ಲಿ ಕ್ರಿಪ್ಟೊ ಕರೆನ್ಸಿ ಕುರಿತಾದ ಯಾವುದೇ ಅಧಿಕೃತ ನಿಯಮವಾಳಿಗಳು ಇಲ್ಲವಾದರೂ ಕೋಟ್ಯಂತರ ಭಾರತೀಯರು ಕ್ರಿಪ್ಟೋ ಕರೆನ್ಸಿಗಳಲ್ಲಿ ಬಂಡವಾಳ ತೊಡಗಿಸಿದ್ದಾರೆ. ಆದರೆ ಈವರೆಗೆ ಭಾರತದ ಸ್ವಂತ ಕ್ರಿಪ್ಟೊ ಇರಲಿಲ್ಲ. ಆ ಕೊರತೆಯನ್ನು 'ಗರಿ' ನೀಗಿಸಿದೆ.

  ಭಾರತದ ಮೊದಲ ಕ್ರಿಪ್ಟೊ ಟೋಕನ್ ಅನ್ನನು ಸಲ್ಮಾನ್ ಖಾನ್ ನಿನ್ನೆಯಷ್ಟೆ ಲಾಂಚ್ ಮಾಡಿದ್ದಾರೆ. ಕಿರು ವಿಡಿಯೋ ಅಪ್ಲಿಕೇಶನ್ ಆಗಿರುವ ಚಿಂಗಾರಿ ಮೊದಲ ಬಾರಿಗೆ ಕ್ರಿಪ್ಟೊ ಟೋಕನ್ ಲಾಂಚ್ ಮಾಡಿದೆ. ಇದಕ್ಕೆ ಗರಿ ಎಂದು ಹೆಸರಿಡಲಾಗಿದೆ.

  ಚಿಂಗಾರಿ ಅಪ್ಲಿಕೇಶನ್ ಬಳಕೆದಾರರು ಪ್ರಸ್ತುತ ಗರಿ ಟೋಕನ್ ಮೂಲಕ ವ್ಯವಹಾರ ನಡೆಸಬಹುದಾಗಿದೆ. ಚಿಂಗಾರಿಯಲ್ಲಿ ಅಪ್‌ಲೋಡ್ ಮಾಡಲಾಗುವ ವಿಡಿಯೋಗಳಿಗೆ ಗರಿ ಮೂಲಕವೇ ಪೇಮೆಂಟ್ ಆಗಲಿದೆ. ಬಳಕೆದಾರರು ಚಿಂಗಾರಿಯ ಇತರೆ ಸೇವೆಗಳನ್ನು ಬಳಸಿಕೊಳ್ಳಲು ಗರಿ ಟೋಕನ್ ಅನ್ನೇ ವಿನಿಮಯ ಮಾಡಬಹುದಾಗಿದೆ. ಚಿಂಗಾರಿಯಲ್ಲಿ ಕಂಟೆಂಟ್ ವೀಕ್ಷಿಸಲು, ಜಾಹೀರಾತು ನೀಡಲು ಇತರೆ ಕಾರಣಗಳಿಗೆ ಗರಿ ಅನ್ನು ಬಳಸಬಹುದಾಗಿದೆ.

  ಗರಿ ಟೋಕನ್ ಅನ್ನು ಹೆಚ್ಚು ಪ್ರಚಲಿತಗೊಳಿಸಲು ಹೀಗೆ ಮಾಡಲಾಗುತ್ತಿದೆ. ಚಿಂಗಾರಿಯ ಕಂಟೆಂಟ್ ಕ್ರಿಯೇಟರ್‌ಗಳ ಪ್ರತಿದಿನದ ವಹಿವಾಟಿನ ಭಾಗವಾಗಿ ಗರಿಯನ್ನು ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಚಿಂಗಾರಿ ಹೇಳಿಕೆ ಬಿಡುಗಡೆ ಮಾಡಿದೆ.

  ಕ್ರಿಪ್ಟೊ ಕರೆನ್ಸಿಗೆ ಅದರಲ್ಲೇ ಆದ ಬ್ಲಾಕ್‌ಚೈನ್‌ಗಳಿರುತ್ತವೆ ಆದರೆ ಕ್ರಿಪ್ಟೋ ಟೋಕನ್ ಈಗಾಗಲೇ ಅಸ್ಥಿತ್ವದಲ್ಲಿರುವ ಬ್ಲಾಕ್‌ ಚೈನ್‌ನಲ್ಲಿ ಮಾತ್ರವೇ ಕೆಲಸ ಮಾಡುತ್ತದೆ. ಈಗ ಲಾಂಚ್ ಆಗಿರುವ ಗರಿ ಕ್ರಿಪ್ಟೊ ಟೋಕನ್ ಆಗಿದ್ದು, ಅದನ್ನು ಚಿಂಗಾರಿ ಅಪ್ಲಿಕೇಶನ್‌ನಲ್ಲಿ ಮಾತ್ರವೇ ಬಳಸಬೇಕಾಗಿದೆ. ಅದರ ಹೊರಗೆ ಗರಿ ಕ್ರಿಪ್ಟೊಗೆ ಯಾವುದೇ ಮೌಲ್ಯ ಇಲ್ಲ. ಮುಂದೆ ಗರಿ ಸಹ ದೊಡ್ಡ ಕ್ರಿಪ್ಟೊ ಕರೆನ್ಸಿ ಆಗಬಹುದು ಅಥವಾ ಆಗದೆಯೂ ಇರಬಹುದು. ಎರಡೂ ಸಾಧ್ಯತೆಗಳಿವೆ.

  English summary
  Salman Khan launched India's first crypto token GARI. This Crypto token started and launched by Chingari short video application.
  Tuesday, October 19, 2021, 9:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X