For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು: ಸ್ಪಷ್ಟನೆ ನೀಡಿದ ಸಲ್ಮಾನ್ ಪರ ವಕೀಲರು

  |

  ಬಾಲಿವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸಂಚಲನ ಸೃಷ್ಟಿ ಮಾಡಿದೆ. ಈ ದಂಧೆಯಲ್ಲಿ ಘಟಾನುಘಟಿಗಳ ಹೆಸರು ಕೇಳಿಬರುತ್ತಿದ್ದು, ಬಹುತೇಕ ಸ್ಟಾರ್ ನಟರಿಗೆ ಮುಳುವಾಗುವ ಸಾಧ್ಯತೆ ಇದೆ. ಡ್ರಗ್ಸ್ ವಿಚಾರವಾಗಿ ನಟಿ ದೀಪಿಕಾ ಪಡುಕೋಣೆ ವಾಟ್ಸಪ್ ಚಾಟ್ ಬಹಿರಂಗವಾದ ಬಳಿಕ ಅನೇಕರಿಗೆ ಆತಂಕ ಶುರುವಾಗಿದೆ.

  ಈ ಪ್ರಕರಣದಲ್ಲಿ ಈಗ ಪ್ರಮುಖವಾಗಿ KWAN ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಈ ನಡುವೆ KWAN ಸಂಸ್ಥೆಯಲ್ಲಿ ನಟ ಸಲ್ಮಾನ್ ಖಾನ್ ಅವರ ಪಾಲುದಾರಿಕೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

  ಡ್ರಗ್ಸ್ ಪ್ರಕರಣ: ದೀಪಿಕಾ ಪಡುಕೋಣೆ ಮ್ಯಾನೇಜರ್‌ ಗೆ ಎನ್‌ಸಿಬಿ ನೊಟೀಸ್

  ಈ ಬಗ್ಗೆ ತಮ್ಮ ಪರ ವಕೀಲರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಕ್ಲೈಂಟ್ ಭಾರತದ ಖ್ಯಾತ ನಟರಾದ ಸಲ್ಮಾನ್ ಖಾನ್ KWAN ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂದು ಕೆಲವು ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ. ಸಲ್ಮಾನ್ ಖಾನ್ KWAN ಅಥವಾ ಬೇರೆ ಸಂಸ್ಥೆಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಯಾವುದೇ ಪಾಲುದಾರಿಕೆ ಹೊಂದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ." ಎಂದು ಹೇಳಿದ್ದಾರೆ.

  ನಿನ್ನೆ ಮಂಗಳವಾರ (ಸೆಪ್ಟಂಬರ್ 22) KWAN ಸಂಸ್ಥೆಯ ಸಿಇಒ ಧ್ರುವ ಚಿಟ್ಗೋಪೇಕರ್ ಮತ್ತು ಈ ಸಂಸ್ಥೆಯ ಉದ್ಯೋಗಿ ಮತ್ತು ಸುಶಾಂತ್ ಸಿಂಗ್ ಅವರ ವ್ಯವಸ್ಥಾಪಕಿ ಜಯ ಸಹಾ ಅವರನ್ನು ಎನ್ ಸಿ ಬಿ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಇನ್ನು ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಷ್ಮಾ ಸಹ KWAN ಸಂಸ್ಥೆಯ ಉದ್ಯೋಗಿಯಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

  ಡಾಲಿ ಕೊಟ್ಟ ಲಿಪ್ ಕಿಸ್ ಗೆ ಥ್ಯಾಂಕ್ಸ್ ಹೇಳಿದ ತೆಲುಗು ನಟಿ ಇರಾ | Oneindia Kannada

  ಈ ಸಂಸ್ಥೆ ಬಾಲಿವುಡ್ ನ ಸ್ಟಾರ್ ಕಲಾವಿದರಾದ ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಶ್ರದ್ಧಾ ಕಪೂರ್, ಜಾಕ್ವೇಲಿನ್ ಫರ್ನಾಂಡಿಸ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದೆ.

  English summary
  Salman Khan lawyer clarifies about KWAN link, says he has no stake in KWAN.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X