»   » ಜಿಯಾ- ಸೂರಜ್ ವಿರಸಕ್ಕೂ ಸಲ್ಮಾನ್ ಕಾರಣವಲ್ಲ

ಜಿಯಾ- ಸೂರಜ್ ವಿರಸಕ್ಕೂ ಸಲ್ಮಾನ್ ಕಾರಣವಲ್ಲ

Posted By:
Subscribe to Filmibeat Kannada

ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಮತ್ತು ಸೂರಜ್ ಪಂಚೋಲಿಗೆ ನಾನು ಯಾವುದೇ ಬುದ್ಧಿವಾದ ಹೇಳಿಲ್ಲ. ಅವರಿಬ್ಬರ ಲವ್ ಗೆ ನಾನು 'ಲವ್ ಗುರು' ಆಗಿರಲಿಲ್ಲ ಎಂದು ನಟ ಸಲ್ಮಾನ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಜಿಯಾಖಾನ್ ಮತ್ತು ಸೂರಜ್ ಪಾಂಚೋಲಿ ಪ್ರೇಮ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರ ಹೆಸರು ತಳುಕುಹಾಕಿಕೊಂಡಿರುವ ಕುರಿತು ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ನನಗೂ ಜಿಯಾಖಾನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ಪ್ರಕರಣದಲ್ಲಿ ನನ್ನನ್ನು ಸೇರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

25 ವರ್ಷದ ಹರೆಯ. ಬ್ರಿಟಿಷ್ ಮೂಲದ ಬಾಲಿವುಡ್ ತಾರೆ ನಫೀಸಾ ಅಲಿಯಾಸ್ ಜಿಯಾ ಖಾನ್ ಆತ್ಮಹತ್ಯೆ ಕಾರಣ ಬಹುತೇಕ ಸ್ಪಷ್ಟವಾಗುತ್ತಿದೆ. ಜಿಯಾ ಖಾನ್ ಗೆಳೆಯ ಸೂರಜ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್ ನಟ ಆದಿತ್ಯ ಪಂಚೋಲಿ ಪುತ್ರ ಸೂರಜ್ ಹಾಗೂ ಜಿಯಾ ಖಾನ್ ನಡುವೆ ಬರೀ ಗೆಳೆತನ ಇತ್ತು ಎನ್ನಲಾಗಿತ್ತು.

ಆದರೆ, ಜಿಯಾಖಾನ್ ಬರೆದಿರುವ ಸುದೀರ್ಘ ಪತ್ರದಲ್ಲಿ ಆಕೆ ಹಾಗೂ ಸೂರಜ್ ನಡುವಿನ ಸಂಬಂಧದ ಬಗ್ಗೆ ಸವಿಸ್ತಾರ ಮಾಹಿತಿ ಇದೆ. ಸೂಸೈಡ್ ನೋಟ್ ನಲ್ಲಿ ಹೇಳಿರುವಂತೆ ಜಿಯಾಖಾನ್ ಮೇಲೆ ಹಲ್ಲೆ, ಅತ್ಯಾಚಾರ ಎಸಗಿರುವ ಸೂರಜ್ ಅವರು ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕಾರಣರಾಗಿದ್ದಾರೆ.

ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಆತನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಸೂರಜ್ ತಾಯಿ ಸ್ಪಷ್ಟನೆ, ಸಲ್ಮಾನ್ ಹೆಸರು ಹೊರಬಂದಿದ್ದು ಹೇಗೆ?, ಸಲ್ಮಾನ್ ಉತ್ತರ ಮುಂದಿದೆ ಚಿತ್ರ ಸರಣಿ..

ಸೂರಜ್ ತಾಯಿ ಸ್ಪಷ್ಟನೆ

ಸೂರಜ್ ಹಾಗೂ ಜಿಯಾ ಖಾನ್ ಅವರ ಪ್ರೇಮ ಪ್ರಕರಣದಲ್ಲಿ ಸಲ್ಮಾನ್ ಖಾನ್ ಸಹಾಯ ಬೇಡುವಂತೆ ಆದಿತ್ಯ ಪಂಚೋಲಿ ಎಂದೂ ಕೇಳಿರಲಿಲ್ಲ.

ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಗೆ ಇನ್ನೊಬ್ಬರ ಖಾಸಗಿ ಬದುಕು ಸರಿ ಮಾಡುವಷ್ಟು ಪುರುಸೊತ್ತು ಇದೆ ಎಂದು ನಿಮಗೆ ಅನ್ನಿಸುತ್ತದೆಯೇ? ಎಂದು ಪತ್ರಕರ್ತರಿಗೆ ಸೂರಜ್ ತಾಯಿ ವಹಾಬ್ ಪ್ರಶ್ನಿಸಿದ್ದಾರೆ.

ಸಲ್ಮಾನ್ ಹೆಸರು ಬಂದಿದ್ದು ಹೇಗೆ?

ಜಿಯಾಖಾನ್ ತಾಯಿ ರಬಿಯಾ ಅಮಿನ್ ಖಾನ್ ಅವರು ಮಾಧ್ಯಮಗಳ ಮುಂದೆ ಗೋಳು ತೋಡಿಕೊಳ್ಳುವಾಗ ಆದಿತ್ಯ ಪಂಚೋಲಿ(ಸೂರಜ್ ಅಪ್ಪ) ಅವರು ಸಲ್ಮಾನ್ ಖಾನ್ ಸಹಾಯ ಬಯಸಿ ಸೂರಜ್ ಗೆ ಬುದ್ಧಿವಾದ ಹೇಳುವಂತೆ ಕೇಳಿದ್ದ.

ಆದರೆ, ಜಿಯಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಸೂರಜ್ ಹೇಳಿದ ಮೇಲೆ ಸಲ್ಮಾನ್ ಆ ಸಂಗತಿ ಬಗ್ಗೆ ಮಾತನಾಡುವುದನ್ನು ಬಿಟ್ಟ. ಇಬ್ಬರ ಸಾಂಗತ್ಯದ ಬಗ್ಗೆ ಸಲ್ಮಾನ್ ಗೆ ಸಂಪೂರ್ಣ ಗೊತ್ತಿದೆ ಎಂದು ರಬಿಯಾ ಹೇಳಿದ್ದರು.

ಸಲ್ಮಾನ್ ಉತ್ತರ

'ಕಳೆದ ಹಲವು ದಿನಗಳಿಂದ ಜಿಯಾ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬರುತ್ತಿದೆ. ಆದರೆ ನಾನು ಈ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ. ಸೂರಜ್ ಪಾಂಚೋಲಿ ತಂದೆ ಆದಿತ್ಯ ಪಾಂಚೋಲಿ ಅವರು ಸೂರಜ್ ಮತ್ತು ಜಿಯಾ ಸಂಬಂಧದ ಕುರಿತು ನನ್ನೊಂದಿಗೆ ಮಾತನಾಡಿರಲಿಲ್ಲ.

ಪ್ರಕರಣದಲ್ಲಿ ನನ್ನ ಹೆಸರು ಅನಗತ್ಯವಾಗಿ ತಳುಕು ಹಾಕಿಕೊಂಡಿದೆ. ನಟಿ ಜಿಯಾಖಾನ್ ಸಾವು ನನಗೂ ನೋವು ತಂದಿದೆ. ಆದರೆ ಜಿಯಾ ತಾಯಿ ರಬಿಯಾ ಖಾನ್ ಅವರು ಪ್ರಕರಣದಲ್ಲಿ ನನ್ನ ಹೆಸರು ತಂದಿರುವುದು ಸರಿಯಲ್ಲ

ಸಲ್ಮಾನ್ ಖಾನ್ ಬೇಸರ

ಜಿಯಾ ಒಬ್ಬ ನಟಿಯಾಗಿ ಮಾತ್ರ ನನಗೆ ಗೊತ್ತು. ಆದರೆ ಆಕೆ ಖಾಸಗಿ ಜೀವನದ ಕುರಿತು ನನಗೆ ತಿಳಿದಿಲ್ಲ. ನನ್ನ ಜೀವನದ ಕುರಿತು ಯೋಚಿಸಲು ನನಗೆ ಸಮಯವಿಲ್ಲ. ಹೀಗಿರುವಾಗ ನಾನೇಕೆ ಬೇರೆಯವರ ಜೀವನದಲ್ಲಿ ಮಧ್ಯ ಪ್ರವೇಶ ಮಾಡಲಿ ಎಂದು ಸಲ್ಮಾನ್ ಹೇಳಿದ್ದಾರೆ.

ಸೂರಜ್ ಕಥೆಯೇನು?

ಸೂರಜ್ ಹಾಗೂ ಜಿಯಾ ನಡುವೆ ಮೊಬೈಲ್ ಸಂದೇಶ ಹರಿದಾಡಿದೆ. ಎಸ್ ಎಂಎಸ್, ಎಂಎಂಎಸ್ ಗಳಲ್ಲಿ ಏನಿತ್ತು ಎಂಬುದರ ಮಾಹಿತಿ ಸಿಕ್ಕಿದೆ. ಜೊತೆಗೆ ಜಿಯಾ ಬರೆದಿರುವ ಸೂಸೈಡ್ ನೋಟ್ ಪೊಲೀಸರಿಗೆ ಮಹತ್ವದ ದಾಖಲೆ ಒದಗಿಸಿದೆ.

ಇಬ್ಬರ ನಡುವೆ ದೈಹಿಕ ಸಂಪರ್ಕ ಇದ್ದಿದ್ದು, ಜಿಯಾಖಾನ್ ಗೆ ಅಬಾರ್ಷನ್ ಆಗಿದ್ದು ಎಲ್ಲವೂ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಲಿವ್ ಇನ್ ಸಂಬಂಧ ಮುಳುವಾಗಿದ್ದು ಹೇಗೆ ಎಂಬುದರ ಬಗ್ಗೆ ಸೂರಜ್ ಬಾಯ್ಬಿಡಬೇಕಿದೆ.

ಸಾಯುವ ಮುನ್ನ ಕೊನೆಯದಾಗಿ ಸಂಪರ್ಕಿಸಿದ್ದು ಸೂರಜ್ ರನ್ನು ಸಂಪರ್ಕಿಸಿದ್ದಲ್ಲದೆ ಆತನ ಜೊತೆ ಜೋರು ಜಗಳ ಮಾಡಿದ್ದರು ಎಂಬುದು ಜಗಜ್ಜಾಹೀರಾಗಿದೆ. ಸೂರಜ್ ಏನು ಹೇಳುತ್ತಾನೆ ಎಂಬುದು ಕುತೂಹಲಕಾರಿಯಾಗಿದೆ.

English summary
Suraj Pancholi's mother has claimed that her husband Aditya Pancholi never asked superstar Salman Khan to intervene in Jiah Khan and Suraj's relationship. Salman also clarified he never talked about Jiah-Suraj love.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada