For Quick Alerts
  ALLOW NOTIFICATIONS  
  For Daily Alerts

  ತನ್ನ ಬದುಕಿನಲ್ಲಿ ದೀರ್ಘಕಾಲ ಉಳಿದ ಸಂಬಂಧದ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?

  |

  ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಸಿನಿಮಾಗಳ ಜೊತೆಗೆ ಆಗಾಗ ವೈಯಕ್ತಿಕ ಜೀವನದ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಯಲಾಗುವ ಸಲ್ಮಾನ್, ಇದೀಗ ತಮ್ಮ ಜೀವನದಲ್ಲಿ ದೀರ್ಘಕಾಲ ಉಳಿದ ಸಂಬಂಧದ ಕುರಿತು ಬಹಿರಂಗ ಪಡಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಸಂಗಾತಿಯ ಕುರಿತು ಮಾತನಾಡಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಸಲ್ಲು ಜೊತೆ ದೀರ್ಘಕಾಲ ಉಳಿದ ಸಂಬಂಧ ಯಾವುದು? ಮತ್ಯಾವುದು ಅಲ್ಲ ಬಿಗ್ ಬಾಸ್.

  ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್ ಈ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ತನ್ನ ಕುರಿತು ಜೋಕ್ ಮಾಡಿಕೊಂಡಿರುವ ಸಲ್ಮಾನ್, ತನ್ನೊಂದಿಗೆ ಹೆಚ್ಚು ಕಾಲ ಉಳಿದ ಸಂಬಂಧವೆಂದರೆ ಅದು ಬಿಗ್​ಬಾಸ್ ಎಂದಿದ್ದಾರೆ. ಸಲ್ಮಾನ್ ಅವರ ಈ ಮಾತು ಎಲ್ಲರನ್ನೂ ನಗೆಗಡಲಲ್ಲಿ ತೆಲುವಂತೆ ಮಾಡಿತ್ತು.

  ಸಲ್ಮಾನ್ ಹೀಗೆ ಹೇಳಲು ಕಾರಣ ಬಿಗ್​ ಬಾಸ್ ಅನ್ನು ಅನೇಕ ವರ್ಷಗಳಿಂದ ನಡೆಸಿಕೊಡುತ್ತಿದ್ದಾರೆ. 2010ರಿಂದ ಸಲ್ಮಾನ್ ಬಿಗ್ ಬಾಸ್ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಬಿಗ್​ಬಾಸ್ ಯಶಸ್ವಿಯಾಗಲು ಸಲ್ಮಾನ್ ಪಾಲು ಬಹಳ ದೊಡ್ಡದಿದೆ. ಅವರ ನಿರೂಪಣೆಯನ್ನು ವೀಕ್ಷಕರು ತುಂಬಾ ಇಷ್ಟ ಪಡುತ್ತಾರೆ. ಇತ್ತೀಚೆಗೆ ಬಿಗ್​ ಬಾಸ್ ಒಟಿಟಿ ನಡೆಯುವಾಗಲೂ ಸಲ್ಮಾನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹಲವು ಸ್ಪರ್ಧಿಗಳು, ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದಲ್ಲಿ ಏಕಾಂಗಿಯಾಗೆ ಉಳಿದ್ದಾರೆ. ಹಲವು ನಟಿಯರ ಜೊತೆ ಸಲ್ಮಾನ್ ಖಾನ್ ಹೆಸರು ತಳುಕುಹಾಕಿಕೊಂಡಿದ್ದರೂ ಯಾವ ನಟಿಯನ್ನು ಸಲ್ಮಾನ್ ಮದುವೆಯಾಗಿಲ್ಲ. ಇಂದಿಗೂ ಏಕಾಂಗಿಯಾಗಿ ಉಳಿದಿದ್ದಾರೆ. ''ನನ್ನ ಬದುಕಿನ ದೀರ್ಘಕಾಲಿಕ ಸಂಬಂಧವೆಂದರೆ ಅದು ಬಿಗ್​ಬಾಸ್. ಇದು ನನ್ನ ಜೀವನದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ನಾಲ್ಕು ತಿಂಗಳ ಸ್ಪರ್ಧೆಯ ನಂತರ ದೂರ ಆಗುವಾಗ ದುಃಖವಾಗುತ್ತದೆ. ಆದರೆ ಮತ್ತೆ ಹೊಸ ಸೀಸನ್​ ನಲ್ಲಿ ಜೊತೆಯಾಗಲು ಕಾತರದಿಂದ ಕಾಯುತ್ತೇವೆ'' ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.

  ಬಿಗ್ ​ಬಾಸ್​ನ ಹೊಸ ಸೀಸನ್ ಭಾರಿ ಕುತೂಹಲ ಮೂಡಿಸಿದೆ. ಅಂದಹಾಗೆ ಸದ್ಯ ಬಿಗ್ ಬಾಸ್ 15ನೇ ಸೀಸನ್ ನಡೆಯುತ್ತಿದೆ. ಈ ಬಾರಿ ಹಲವು ವಿಶೇಷತೆಗಳು ಇವೆ. "ಅರಣ್ಯ ಪರಿಕಲ್ಪನೆಯಲ್ಲಿ ಶೋ ಮೂಡಿಬರುತ್ತಿದ್ದು, ಹಿಂದಿನ ಬಾರಿಗಿಂತ ಬಹಳ ಭಿನ್ನವಾಗಿದೆ. ಬರೋಬ್ಬರಿ 250 ಕ್ಯಾಮರಾಗಳ ಮೂಲಕ ಈ ಬಾರಿ ಬಿಗ್​ಬಾಸ್ ಮನೆಯ ಕಣ್ಗಾವಲು ನಡೆಯಲಿದೆ. ಅಲ್ಲದೇ ಈ ಬಾರಿ ಸ್ಪರ್ಧೆ 5 ತಿಂಗಳ ಕಾಲ ನಡೆಯಲಿದೆ" ಎಂದಿದ್ದಾರೆ. ಸಲ್ಮಾನ್ ಮಾತು ಈ ಬಾರಿಯ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

  ಬಿಗ್ ಬಾಸ್ ಸೀಸನ್ 15 ಅಕ್ಟೋಬರ್ 2ರಿಂದ ಪ್ರಾರಂಭವಾಗಲಿದೆ. ಬಿಗ್ ಬಾಸ್ ಜೊತೆಗೆ ಸಲ್ಮಾನ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಟೈಗರ್ -3 ಚಿತ್ರದ ಚಿತ್ರೀಕರಣದಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಆಸ್ಟ್ರಿಯಾದಲ್ಲಿ ನಡೆಯುತ್ತಿದೆ. ಸಲ್ಮಾನ್ ಸೆಪ್ಟಂಬರ್ 27 ಅಥವಾ 28ರಂದು ಮುಂಬೈಗೆ ಮರಳುವ ಸಾಧ್ಯತೆ ಇದೆ. ಬಳಿಕ ಬಿಗ್ ಬಾಸ್ ಶೋನಲ್ಲಿ ಬ್ಯುಸಿಯಾಗಲಿದ್ದಾರೆ.

  English summary
  Bollywood Actor Salman Khan reveals his longest relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X