»   » 100 ಕೋಟಿ ಕ್ಲಬ್ ಸೇರುವ ತವಕದಲ್ಲಿ 'ಸುಲ್ತಾನ್'

100 ಕೋಟಿ ಕ್ಲಬ್ ಸೇರುವ ತವಕದಲ್ಲಿ 'ಸುಲ್ತಾನ್'

By: Sonu Gowda
Subscribe to Filmibeat Kannada

ಅಬ್ಬಬ್ಬಾ.. ಸಲ್ಮಾನ್ ಖಾನ್ ಅವರ 'ಸುಲ್ತಾನ್' ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದ್ದು, ಇದೀಗ ಬರೀ ಮೂರೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುವತ್ತ ಚಿತ್ರ ಮುನ್ನುಗ್ಗುತ್ತಿದೆ. 'ಸುಲ್ತಾನ್' ಬಿಡುಗಡೆ ಆದ ಒಂದು ದಿನದಲ್ಲಿ ಬರೋಬ್ಬರಿ 36.54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎಲ್ಲಾ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿತ್ತು.

ಇದೀಗ ಮೂರೇ ದಿನದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಮೊದಲ ದಿನ 36.54 ಕೋಟಿ ಕಲೆಕ್ಷನ್ ಮಾಡಿದರೆ, ಎರಡನೇ ದಿನ ಸುಮಾರು 37.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಒಟ್ಟು 73.74 ಕೋಟಿ ರೂಪಾಯಿ ಕಮಾಯಿಸಿದೆ.[ಬಾಕ್ಸಾಫೀಸ್ ನಲ್ಲಿ ರುದ್ರತಾಂಡವ ಆಡುತ್ತಿರುವ 'ಸುಲ್ತಾನ್']

Salman Khan's 'Sultan' 2nd day Box Office Collection

ಒಟ್ನಲ್ಲಿ ಅಭಿಮಾನಿಗಳ ಹೃದಯಕ್ಕೆ ನೇರವಾಗಿ ಲಗ್ಗೆ ಇಟ್ಟಿರುವ ಸಲ್ಮಾನ್ ಖಾನ್ ಅವರು 'ಸುಲ್ತಾನ್' ಚಿತ್ರದ ಮೂಲಕ ಇನ್ನೂ ಹೆಚ್ಚಿನ ಅಭಿಮಾನವನ್ನು, ಅಭಿಮಾನಿಗಳಿಂದ ಗಳಿಸಿದ್ದಾರೆ.

ಭಾರತದಲ್ಲಿ ಸುಮಾರು 4000 ಸ್ಕ್ರೀನ್ ನಲ್ಲಿ ಹಾಗೂ ವಿದೇಶದಲ್ಲಿ ಸುಮಾರು 1100 ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದ್ದ 'ಸುಲ್ತಾನ್' ಈಗಲೂ ಬಹುತೇಕ ಎಲ್ಲಾ ಕಡೆ ಹೌಸ್ ಫುಲ್ ಶೋ ಪ್ರದರ್ಶನ ಕಾಣುತ್ತಿದೆ.[ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']

Salman Khan's 'Sultan' 2nd day Box Office Collection

'ಸುಲ್ತಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಕುಸ್ತಿಪಟು ಪಾತ್ರದಲ್ಲಿ ಮಿಂಚಿ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನ ಮಿಡಿಯುವಂತೆ ಮಾಡಿದ್ದರು. ಇವರ ಜೊತೆ ನಟಿ ಅನುಷ್ಕಾ ಶರ್ಮಾ ಅವರು ಡ್ಯುಯೆಟ್ ಹಾಡಿದ್ದರು.

ಯಶ್ ರಾಜ್ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಹೊರ ಬಂದಿರುವ 'ಸುಲ್ತಾನ್' ಚಿತ್ರಕ್ಕೆ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಅವರು ನಿರ್ದೇಶನ ಮಾಡಿದ್ದಾರೆ.

English summary
Salman Khan's 'Sultan' performed exceptionally well at the box office. The movie collected Rs 36.54 Crores on its very first day. Sultan collected Rs 37.20 Crores on the second day, which means the film will easily enter the prestigious 100 Crores club in just 3 days of its release. The movie is directed by Ali Abbas Zafar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada