»   » ಕಿಡ್ನಾಪ್ ಬಗ್ಗೆ ಬಾಯ್ಬಿಟ್ಟ ಸಲ್ಲೂ ಆಪ್ತೆ ಸನಾ

ಕಿಡ್ನಾಪ್ ಬಗ್ಗೆ ಬಾಯ್ಬಿಟ್ಟ ಸಲ್ಲೂ ಆಪ್ತೆ ಸನಾ

Posted By:
Subscribe to Filmibeat Kannada
Salman's girl Sana Khan finally spill the beans over kidnapping case
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರ ಇಷ್ಟದ ನಾಯಕಿ ಸನಾ ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ನಾನು ಯಾರನ್ನು ಕಿಡ್ನಾಪ್ ಮಾಡಿಸಿಲ್ಲ. ನಾನು ಯಾವುದೇ ಕ್ರೈಂ ನಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಸಲ್ಮಾನ್ ಖಾನ್ ಜೊತೆ ಅಭಿನಯಿಸುತ್ತ್ತಿರುವ 'ಮೆಂಟಲ್' ಶೂಟಿಂಗ್ ನಿಂತಿಲ್ಲ. ನನ್ನ ಭಾಗದ ಶೂಟಿಂಗ್ ಮುಗಿಸಿದ್ದೇನೆ. ನನ್ನಿಂದ ಶೂಟಿಂಗ್ ನಿಂತ್ತಿತ್ತು ಎಂಬುದು ಸುಳ್ಳು. ಇದರ ಜೊತೆಗೆ ನಾನು ಎಲ್ಲೂ ನಾಪತ್ತೆಯಾಗಿಲ್ಲ ಎಂದು ಸನಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.

ಸನಾ ಖಾನ್ ಅವರ ಕಸಿನ್ ನವೀದ್ ಜೊತೆ ಹುಡುಗಿಗೆ ಮದುವೆ ಗೊತ್ತು ಮಾಡಲು ಸನಾ ಯತ್ನಿಸಿದ್ದರು. ಆದರೆ, ನವೀದ್ ಮದುವೆ ಪ್ರಸ್ತಾಪವನ್ನು ಹುಡುಗಿ ತಳ್ಳಿ ಹಾಕಿದ್ದಳು. ಇದರಿಂದ ಕೋಪಗೊಂಡ ಸನಾ, ಅವಳಿಗೆ ತಕ್ಕ ಪಾಠ ಕಲಿಸುತ್ತೇನೆ ಇರು ಎಂದು ಹೇಳಿ ಕಿಡ್ನಾಪ್ ಮಾಡಿಸಿದ್ದರು ಎಂದು ವರದಿಯಾಗಿತ್ತು.

ಸದ್ಯಕ್ಕೆ ಸನಾ ಅವರ ಮೇಲೆ ಮುಂಬೈ ಪೊಲೀಸರು ಕೇಸು ದಾಖಲಿಸಿಕೊಂಡು ಹುಡುಕುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಮೆಂಟಲ್ ಚಿತ್ರದ ಶೂಟಿಂಗ್ ಗೆ ಬರಬೇಕಿದ್ದ ಸನಾ ಇದ್ದಕ್ಕಿದ್ದಂತೆ ಮಾಯವಾಗಿದ್ದಾಳೆ ಎನ್ನಲಾಗಿತ್ತು. ಆದರೆ, ಎಲ್ಲವನ್ನು ಶುದ್ಧ ಸುಳ್ಳು ಎಂದು ಸನಾ ಅಲ್ಲಗೆಳೆದಿದ್ದಾಳೆ.

ನಿಮಗೆ ಅಷ್ಟಕ್ಕೂ ಅನುಮಾನವಿದ್ದರೆ, ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ಆ ಹುಡುಗಿ ಮನೆಯಿರುವ ಕಟ್ಟಡದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ನಾನು ಅಂದು ಭೇಟಿ ಮಾಡಿದ್ದು ರೆಕಾರ್ಡ್ ಆಗಿರುತ್ತೆ. ಬೇಕಾದವರು ಚೆಕ್ ಮಾಡಿಕೊಳ್ಳಿ ಎಂದು ಹೇಳಿದ್ದಾಳೆ.

ಸಲ್ಮಾನ್ ಖಾನ್ ತುಂಬಾ ಇಷ್ಟಪಡುವ ಯುವನಟಿಯರ ಪೈಕಿ ಸನಾ ಖಾನ್ ಕೂಡಾ ಒಬ್ಬರು. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೂಲ್ ಸಖತ್ ಹಾಟ್ ಮಗ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕುಣಿದಿದ್ದಳು.

ನಂತರ ಬಿಗ್ ಬಾಸ್ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಹಲವು ವಾರಗಳ ಕಾಲ ಸಲ್ಮಾನ್ ಕೃಪೆಯಿಂದ ಮನೆಯಲ್ಲಿ ಉಳಿದು ಮೂರನೇ ಸ್ಥಾನ ವಿಜೇತೆಯಾಗಿದ್ದು ಸನಾ ಸಾಧನೆ. 25 ವರ್ಷ ವಯಸ್ಸಿನ ಸನಾ ಐದು ಭಾಷೆಗಳಲ್ಲಿ 14ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾಳೆ. 50ಕ್ಕೂ ಅಧಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ.

English summary
Superstar Salman Khan's heroine Sana Khan has finally come out in the public and denied all the alleged accusations of kidnapping a minor girl. Sana, who will be soon seen in Salman's upcoming movie Mental, has been accused of abducting a 15-year-old girl, in association with Sana's cousin.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada