Don't Miss!
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- News
ಹರಿಯಾಣ ಘಟಕ ವಿಸರ್ಜಿಸಿದ ಆಮ್ ಆದ್ಮಿ ಪಕ್ಷ
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾಜಿ ಪ್ರೇಯಸಿಗೆ ಮುತ್ತಿಟ್ಟು ಸಲ್ಮಾನ್ ಖಾನ್ ಹೇಳಿದ್ದೇನು? 10 ವರ್ಷ ಪ್ರೀತಿ ಮುರಿದುಬಿದ್ದಿದ್ದೇಕೆ?
ಸಲ್ಮಾನ್ ಖಾನ್ ಬಾಲಿವುಡ್ ಬಾಕ್ಸಾಫೀಸ್‌ನ ಸುಲ್ತಾನ್. ಸೂಪರ್ ಹಿಟ್ ಸಿನಿಮಾಗಳ ಸರದಾರ. ಹಾಗೇ ಬಾಲಿವುಡ್‌ನ ಸೂಪರ್‌ಸ್ಟಾರ್ ಬ್ಯಾಚುಲರ್. ಇಂದು ( ಡಿಸೆಂಬರ್ 27) ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಪ್ರತಿ ವರ್ಷ ತನ್ನ ಹುಟ್ಟುಹಬ್ಬದ ವೇಳೆ ಸಲ್ಮಾನ್ ಖಾನ್ ಆಪ್ತರು ಹಾಗೂ ಗೆಳೆಯರಿಗಾಗಿ ದೊಡ್ಡ ಪಾರ್ಟಿಯನ್ನು ಆಯೋಜಿಸುತ್ತಾರೆ. ನಿನ್ನೆ(ಡಿಸೆಂಬರ್ 28) ರಾತ್ರಿ ಕೂಡ ಸಲ್ಮಾನ್ ಖಾನ್ ಅದ್ಧೂರಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಆಪ್ತರು, ಚಿತ್ರರಂಗದ ಗಣ್ಯರು ಆಗಮಿಸಿ ಬಾಕ್ಸಾಫೀಸ್ ಸುಲ್ತಾನ್‌ಗೆ ಶುಭಾಶಯವನ್ನು ತಿಳಿಸಿದ್ದಾರೆ.
ನಿನ್ನೆ(ಡಿಸೆಂಬರ್ 27) ಪಾರ್ಟಿ ಸಲ್ಮಾನ್ ಖಾನ್‌ಗೆ ಸ್ಪೆಷಲ್ ಆಗಿತ್ತು. ಪಾರ್ಟಿಗೆ ಬಂದ ಕೆಲ ಗಣ್ಯರನ್ನು ಸ್ವತ: ಸಲ್ಮಾನ್ ಖಾನ್ ಬೀಳ್ಕೊಡಲು ಬಂದಿದ್ದರು. ಅದರಲ್ಲಿ ಒಬ್ಬರು ಮಾಜಿ ಪ್ರೇಯಸಿ ಸಂಗೀತ ಬಿಜ್ಲಾನಿ. ಪಾರ್ಟಿಗೆ ಬಂದಿದ್ದ ಮಾಜಿ ಪ್ರೇಯಸಿಯನ್ನು ಬಿಡಲು ಸ್ವತ: ಸಲ್ಮಾನ್ ಖಾನ್ ಅವರೇ ಮುಂದೆ ಬಂದಿದ್ದರು.

ಸಲ್ಮಾನ್ ಖಾನ್‌ರಿಂದ ಮಸ್ತ್ ಪಾರ್ಟಿ
ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಸಲ್ಮಾನ್ ಖಾನ್ ಮುಂಬೈನಲ್ಲಿ ಐಶಾರಾಮಿ ಪಾರ್ಟಿ ಆಯೋಜನೆ ಮಾಡಿದ್ದರು. ಬಾಲಿವುಡ್‌ನ ಸ್ನೇಹಿತರನ್ನು ಈ ಪಾರ್ಟಿಗೆ ಆಹ್ವಾನ ನೀಡಿದ್ದರು. ಗೆಳೆಯ ಶಾರುಖ್ ಖಾನ್, ಅರ್ಬಾಜ್ ಖಾನ್, ಸೊಹೇಲ್ ಖಾನ್, ಸುನಿಲ್ ಶೆಟ್ಟಿ, ಸೋನಾಕ್ಷಿ ಸಿನ್ಹಾ, ಪೂಜಾ ಹೆಗ್ಡೆ, ಜೆನಿಯಾ ಡಿಸೋಜಾ, ರಿತೇಶ್ ದೇಶ್‌ಮುಖ್, ಕಾರ್ತಿಕ್ ಆರ್ಯನ್ ಸೇರಿದಂತೆ ಮಾಜಿ ಗೆಳೆತಿ ಸಂಗೀತ ಬಿಜ್ಲಾನಿ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ಶಾರುಖ್ ಖಾನ್ ಹಾಗೂ ಸಂಗೀತ ಬಿಜ್ಲಾನಿಯನ್ನು ಬೀಳ್ಕೊಡಲು ಸ್ವತ: ಸಲ್ಮಾನ್ ಖಾನ್ ಕಾರಿನವರೆಗೂ ಬಂದಿದ್ದರು.

ಮಾಜಿ ಪ್ರೇಯಸಿಗೆ ಸಲ್ಮಾನ್ ಖಾನ್ ಮುತ್ತು
ಸಲ್ಮಾನ್ ಖಾನ್ ಮೊದಲ ಪ್ರೇಯಸಿ ನಟಿ ಸಂಗೀತ ಬಿಜ್ಲಾನಿ. ಮದುವೆ ಆಗಬೇಕಿದ್ದ ಈ ಜೋಡಿ ಕೊನೆಯ ಕ್ಷಣದಲ್ಲಿ ಬೇರೆಯಾದರು. ಆದರೆ, ಇಂದಿಗೂ ಸಲ್ಮಾನ್ ಖಾನ್ ಹಾಗೂ ಸಂಗೀತ ಬಿಜ್ಲಾನಿ ಇಬ್ಬರೂ ಆತ್ಮೀಯತೆಯಿಂದಲೇ ಇದ್ದಾರೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತ ಬಿಜ್ಲಾನಿಗೆ ಬರ್ತ್‌ಡೇ ಪಾರ್ಟಿಗೆ ಆಹ್ವಾನ ನೀಡಿದ್ದರು. ಅಲ್ಲದೆ, ಪಾರ್ಟಿಯಿಂದ ನಿರ್ಗಮಿಸುತ್ತಿದ್ದ ಮಾಜಿ ಗೆಳತಿಯನ್ನು ಕಾರಿನವರೆಗೂ ಹೋಗಿ ಸ್ವತ: ತಾವೇ ಬಿಟ್ಟು ಬಂದಿದ್ದಾರೆ. ಅಲ್ಲದೆ, ಕ್ಯಾಮರಾ ಮುಂದೆನೇ ಹಣೆಗೆ ಮುತ್ತಿಟ್ಟು "ಐ ಲವ್ ಯು" ಎಂದು ಹೇಳಿದ್ದಾರೆ.

10 ವರ್ಷದ ಸಂಬಂಧಕ್ಕೆ ಬ್ರೇಕ್ ಹಾಕಿದ್ದ ಜೋಡಿ
ಸಲ್ಮಾನ್ ಖಾನ್ ಹಾಗೂ ಸಂಗೀತ ಬಿಜ್ಲಾನಿ ತಮ್ಮ ಆರಂಭದ ದಿನಗಳಲ್ಲಿ ಟಿವಿ ಜಾಹೀರಾತಿನ ಸೆಟ್ ಒಂದರಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರ ಸ್ನೇಹ ಬೆಳೆದಿತ್ತು. ಅದೇ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಹೆಚ್ಚು ಕಡಿಮೆ 10 ವರ್ಷಗಳ ಕಾಲ ಈಸ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. ಇನ್ನೇನು ಮದುವೆ ಆಗೇ ಬಿಡೋಣ ಅಂತ ಈ ಜೋಡಿ ನಿರ್ಧಾರನೂ ಮಾಡಿತ್ತು. ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಆಗಿತ್ತು. ಆಗ ಇಬ್ಬರೂ ಈ ಸಂಬಂಧವನ್ನು ಮುರಿದುಕೊಂಡಿದ್ದರು.

ನನ್ನನ್ನು ಸಹಿಸಿಕೊಳ್ಳುವುದು ಕಷ್ಟ
"ಒಂದು ಕಾಲದಲ್ಲಿ ನನಗೆ ನಿಜಕ್ಕೂ ಮದುವೆ ಆಗಬೇಕು ಅಂತ ಆಸೆಯಿತ್ತು. ಆದರೆ, ಇದು ವರ್ಕ್‌ಔಟ್ ಆಗಲಿಲ್ಲ. ತುಂಬಾನೇ ಹತ್ತಿರದಲ್ಲಿದ್ದೆ. ಆದರೆ, ಆಗಲಿಲ್ಲ. ಅವರು ನಾನೊಬ್ಬ ಒಳ್ಳೆಯ ಬಾಯ್‌ಫ್ರೆಂಡ್ ಎಂದು ತಿಳಿದುಕೊಂಡಿದ್ದಾರೆ. ಆದರೆ, ನನ್ನನ್ನು ಸಹಿಸಿಕೊಂಡು ಜೀವನ ನಡೆ ನಡೆಸೋದು ತುಂಬಾನೇ ಕಷ್ಟ." ಎಂದು ಸಲ್ಮಾನ್ ಖಾನ್ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್' ಶೋನಲ್ಲಿ ಹೇಳಿದ್ದರು.