Don't Miss!
- News
ತವರು ಜಿಲ್ಲೆಯಲ್ಲಿ 335 ಕೋಟಿ ರೂ.ಗಳ ಯೋಜನೆಗಳಿಗೆ ಸಿಎಂ ಅಡಿಗಲ್ಲು
- Lifestyle
ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' ನಡುವೆ 'ಭಾಯಿಜಾನ್'! ಪವರ್‌ಫುಲ್ ಟೀಸರ್‌ನಲ್ಲಿ ದಕ್ಷಿಣದ ಇಬ್ಬರು ನಟರ ದರ್ಶನ
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ನೋಡಿದವರು ಫುಲ್ ಖುಷ್ ಆಗಿದ್ದಾರೆ. ಶಾರುಖ್ ಖಾನ್ ಅನ್ನು ಸುಮಾರು ಐದು ವರ್ಷಗಳ ಬಳಿಕ ಮಾಸ್ ಅವತಾರದಲ್ಲಿ ನೋಡಿದ್ದು ಒಂದು ಖುಷಿಯಾದರೆ ಅದೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಹ ಎಂಟ್ರಿ ಸಹ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿದೆ.
'ಪಠಾಣ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಭರ್ಜರಿ ಕ್ಯಾಮಿಯೋ ಇದೆ. ಸುಮಾರು 15 ನಿಮಿಷಗಳ ಕಾಲ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರಂತೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಇದೊಂದು ಹಬ್ಬವೆ. ಇದರ ಜೊತೆಗೆ ಇನ್ನೊಂದು ಖುಷಿಯ ಸುದ್ದಿಯಿದೆ. 'ಪಠಾಣ್' ಸಿನಿಮಾದ ನಡುವೆ ಸಲ್ಮಾನ್ ಖಾನ್ ರ ಹೊಸ ಸಿನಿಮಾ 'ಭಾಯಿಜಾನ್' ಟ್ರೈಲರ್ ಸಹ ಬಿಡುಗಡೆ ಆಗಿದೆ.
ಹೌದು, ಸಲ್ಮಾನ್ ಖಾನ್‌ರ ಹೊಸ ಆಕ್ಷನ್-ಕಾಮಿಡಿ ಸಿನಿಮಾ 'ಭಾಯಿ ಜಾನ್' ಟೀಸರ್ ಅನ್ನು ಇಂದು 'ಪಠಾಣ್' ಸಿನಿಮಾ ಸ್ಕ್ರೀನಿಂಗ್ ನಡುವೆ ಬಿಡುಗಡೆ ಮಾಡಲಾಗಿದೆ. 'ಪಠಾಣ್' ಸಿನಿಮಾ ನೋಡಲು ಹೋದವರಿಗೆ ಇದು ಢಬಲ್ ಧಮಾಕಾ.
ಯೂಟ್ಯೂಬ್‌ನಲ್ಲಿಯೂ ಸಹ 'ಕಿಸಿಕಿ ಭಾಯ್ ಕಿಸಿಕಿ ಜಾನ್' ಅಲಿಯಾಸ್ 'ಭಾಯಿಜಾನ್' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳ ಮೂಲಕ ಟೀಸರ್ ಗಮನ ಸೆಳೆಯುತ್ತಿದೆ.
ಉದ್ದ ಕೂದಲು ಬಿಟ್ಟು ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್ ಅದೇ ಸಿನಿಮಾದಲ್ಲಿ ಇನ್ನೊಂದು ತುಸು ಕಾಮನ್ ಆದ ಲುಕ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಆಕ್ಷನ್ ಕಾಮಿಡಿ ಸಿನಿಮಾ ಆಗಿರಲಿದೆ ಎಂಬ ಸುಳಿವನ್ನು ಟೀಸರ್ ನೀಡಿದೆ.
'ಭಾಯಿ ಜಾನ್' ಸಿನಿಮಾವು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕುಟುಂಬಗಳ ನಡುವೆ ನಡೆವ ಕತೆಯನ್ನು ಹೊಂದಿರುವ ಬಗ್ಗೆಯೂ ಟೀಸರ್‌ನಲ್ಲಿ ಸುಳಿವಿದೆ. ಸ್ವತಃ ಸಲ್ಮಾನ್ ಖಾನ್ ಲುಂಗಿ ಉಟ್ಟು ಡ್ಯಾನ್ಸ್ ಮಾಡುತ್ತಿರುವ ತುಣುಕೊಂದು ಟೀಸರ್‌ನಲ್ಲಿದೆ.
ಇದು ಮಾತ್ರವೇ ಅಲ್ಲದೆ ಟೀಸರ್‌ನ ಮತ್ತೊಂದು ವಿಶೇಷವೆಂದರೆ ದಕ್ಷಿಣ ಭಾರತದ ಅದರಲ್ಲಿಯೂ ತೆಲುಗು ಚಿತ್ರರಂಗದ ಇಬ್ಬರು ಪ್ರಮುಖ ನಟರು ಭಾಯಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ವಿಕ್ಟರಿ ಸ್ಟಾರ್ ವೆಂಕಟೇಶ್ ಹಾಗೂ ತೆಲುಗಿನ ಬಹುಬೇಡಿಕೆಯ ವಿಲನ್ ಜಗಪತಿ ಬಾಬು ಇಬ್ಬರೂ ಸಹ 'ಭಾಯಿಜಾನ್' ಸಿನಿಮಾದಲ್ಲಿ ನಟಿಸಿದ್ದಾರೆ.
ಆದರೆ ತೆಲುಗಿನ ಈ ಇಬ್ಬರೂ ನಟರಿಗೆ ಟೀಸರ್‌ನಲ್ಲಿ ಹೆಚ್ಚು ಸ್ಪೇಸ್ ನೀಡಲಾಗಿಲ್ಲ. ಕಣ್ಣರೆಪ್ಪೆ ಬಡಿಯುವಷ್ಟರಲ್ಲಿ ವೆಂಕಟೇಶ್ ಕಂಡು ಕಣ್ಮರೆಯಾಗಿಬಿಡುತ್ತಾರೆ. ಜಗಪತಿ ಬಾಬು ಮುಖವೇ ಕಾಣುವುದಿಲ್ಲ. ಇಬ್ಬರೂ ಸಹ ಹೀಗೆ ಬಂದು ಹಾಗೆ ಹೋಗಿಬಿಡುತ್ತಾರೆ.
ಸಿನಿಮಾದಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಸಲ್ಮಾನ್ ಖಾನ್ ಜೊತೆಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 'ಭಾಯಿಜಾನ್' ಸಿನಿಮಾವನ್ನು ಫರ್ಹಾದ್ ಸಮ್ಜಿ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್ ಹಾಗೂ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಿದ್ದಾರೆ.