»   » ಇದು ಬಾಲಿವುಡ್ ಖಾನ್ ಗಳಿಂದ ನಮ್ಮವರು ಕಲಿಬೇಕಾಗಿರೋ ಪಾಠ

ಇದು ಬಾಲಿವುಡ್ ಖಾನ್ ಗಳಿಂದ ನಮ್ಮವರು ಕಲಿಬೇಕಾಗಿರೋ ಪಾಠ

Posted By:
Subscribe to Filmibeat Kannada

ಹೆಚ್ಚುಕಮ್ಮಿ ಬಾಲಿವುಡ್ ಚಿತ್ರೋದ್ಯಮವನ್ನು ಆಳುತ್ತಿರುವ ಮೂವರು ಖಾನ್ ಗಳು ಕೆಲವು ವರ್ಷಗಳ ಹಿಂದೆ ಹೇಗಿದ್ದರು ಎಂದರೆ ಒಬ್ಬರನೂಬ್ಬರು ಲೇವಡಿ ಮಾಡಿಕೊಂಡು ತಾವೂ ಮಜಾ ತೆಗೆದುಕೊಂಡು, ಅಭಿಮಾನಿಗಳಿಗೂ ಪುಕ್ಸಟೆ ಮಜಾ ನೀಡುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ. ತಮ್ಮೊಳಗಿನ ವೈಮನಸ್ಸನ್ನು ಕೊನೇ ಪಕ್ಷ ತೋರಿಕೆಗಾದರೂ ಕಮ್ಮಿ ಮಾಡಿಕೊಂಡು, ಅಭಿಮಾನಿಗಳ ಮತ್ತು ಮಾಧ್ಯಮಗಳ ಮುಂದೆ 'ಹಮ್ ಸಬ್ ಏಕ್ ಹೇ' ಎನ್ನುತ್ತಿದ್ದಾರೆ.

ಸಲ್ಮಾನ್ ತಂಗಿ ಅರ್ಪಿತಾಳ ಮದುವೆಗೆ ಶಾರೂಖ್ ಖುದ್ದು ಹಾಜರಾಗಿ ನವದಂಪತಿಗಳಿಗೆ ನಗುತಾ ನಗುತಾ ಬಾಳಿ ನೀವು ಎಂದು ಹರಸಿದ್ದೂ ಆಗಿದೆ.

ಇದಾದ ನಂತರ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ತಪ್ಪಿತಸ್ಥ ಎಂದು ಸೆಷನ್ ಕೋರ್ಟ್ ತೀರ್ಪು ನೀಡಿ, ಇನ್ನೇನು ಸಲ್ಲು ಮಿಯಾ ಅಂದರ್ ಆಗಬೇಕಿತ್ತು ಆಗಲೂ ಖಾನ್ ಭಾಯ್ ಗಳು ಸಲ್ಮಾನಿಗೆ ಸ್ವಾಂತ್ವನ ನೀಡಲು ಅವರ ನಿವಾಸಕ್ಕೆ ತೆರಳಿದ್ದರು.

ಈಗ ಅಮೀರ್ ಖಾನ್ ಮತ್ತು ಶಾರೂಖ್ ಖಾನ್ ಮತ್ತೊಮ್ಮೆ ಸಲ್ಮಾನ್ ಖಾನ್ ಮುಂದಿನ ಚಿತ್ರದ ಪರವಾಗಿ ನಿಂತು ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ.

ಸ್ಯಾಂಡಲ್ ವುಡ್ ನ ಇಬ್ಬರು ಟಾಪ್ ಸ್ಟಾರುಗಳಾದ ಶಿವಣ್ಣ ಮತ್ತು ಸುದೀಪ್ ಅಭಿನಯದ ರನ್ನ ಮತ್ತು ವಜ್ರಕಾಯ ಬಿಡುಗಡೆಗೆ ರೆಡಿಯಾಗಿದೆ, ನಮ್ಮ ಚಿತ್ರೋದ್ಯಮದಲ್ಲೂ ಈ ರೀತಿಯ ಉತ್ತಮ ಬೆಳವಣಿಗೆ ಮುಂದೆ ಎಂದಾದರೂ ಬರಬಹುದಾ?

ಸಲ್ಮಾನ್ ಹೊಸ ಚಿತ್ರ

ಬಾಲಿವುಡ್ ಬಾಕ್ಸಾಫೀಸ್ ಕಿಂಗ್ ಎಂದೇ ಹೆಸರಾಗಿರುವ ಸಲ್ಮಾನ್ ಖಾನ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ 'ಭಜ್ರಂಗಿ ಭೈಜಾನ್'. ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಸಲ್ಲು, ಕರೀನಾ, ನಾಶಿರುದ್ದೀನ್ ಶಾ, ನಜೀಂ ಖಾನ್ ಮುಂತಾದವರಿದ್ದಾರೆ.

ಭಜ್ರಂಗಿ ಫಸ್ಟ್ ಲುಕ್

ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆಯೇ ಆಮೀರ್ ಮತ್ತು ಶಾರೂಖ್ ತಮ್ಮ ಕೋಟ್ಯಾಂತರ ಫಾಲೋವರ್ಸ್ ಗಳಿಗೆ ಚಿತ್ರದ ಫಸ್ಟ್ ಲುಕ್ ಟ್ವೀಟ್ ಮಾಡಿ, ಹೊಸ ಬೆಳವಣಿಗೆಗೆ ಮುಂದಾಗಿದ್ದಾರೆ. ಶಾರೂಖ್ ಟ್ವೀಟ್ 15,000ಕ್ಕೂ ಹೆಚ್ಚು ಮತ್ತು ಅಮಿರ್ ಟ್ವೀಟ್ 8,300ಕ್ಕೂ ಹೆಚ್ಚು ರಿಟ್ವೀಟ್ ಆಗಿದ್ದು ವಿಶೇಷ.

ಸಲ್ಮಾನ್ ಥ್ಯಾಂಕ್ಸ್

ಶಾರೂಖ್ ಮತ್ತು ಅಮೀರ್ ಖಾನ್ ಅವರು ತನ್ನ ಚಿತ್ರದ ಫಸ್ಟ್ ಲುಕ್ ಟ್ವೀಟ್ ಮಾಡುತ್ತಿದ್ದಂತೇ, ಸಲ್ಮಾನ್ ಅವರಿಬ್ಬರಿಗೂ ಥಾಂಕ್ಸ್ ಹೇಳೋದನ್ನು ಮರೆಯಲಿಲ್ಲ.

ರನ್ನ ಚಿತ್ರ ಬಿಡುಗಡೆ

ವರ್ಷದ ಬಹು ನಿರೀಕ್ಷಿತ ಸುದೀಪ್ ಅಭಿನಯದ ರಿಮೇಕ್ ಚಿತ್ರ ರನ್ನ ಬಿಡುಗಡೆಗೆ ಸಜ್ಜಾಗಿದೆ. ಇಂದು, ನಾಳೆ ಎಂದು ಏಪ್ರಿಲ್ ತಿಂಗಳಿಂದ ಮುಂದೂಡಲ್ಪಡುತ್ತಿದ್ದ ಚಿತ್ರ ಬರುವ ವಾರ (ಜೂನ್ 4) ಬಿಡುಗಡೆಯಾಗುತ್ತಿದೆ.

ವಜ್ರಕಾಯ ಕೂಡಾ ರೆಡಿ

ವರ್ಷದ ಮತ್ತೊಂದು ಬಹು ನಿರೀಕ್ಷಿತ ಶಿವಣ್ಣ ಅಭಿನಯದ, ಹರ್ಷ ನಿರ್ದೇಶನದ ಸ್ವಮೇಕ್ ಚಿತ್ರ ವಜ್ರಕಾಯ ಕೂಡಾ ಬಿಡುಗಡೆಗೆ ರೆಡಿಯಾಗಿ ಕೂತಿದೆ. ಚಿತ್ರ ಬಿಡುಗಡೆಯ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲಾವಾದರೂ, ರನ್ನ ಚಿತ್ರಕ್ಕೆ ಒಂದು ವಾರದ ಅಂತರದಲ್ಲಿ (ಜೂನ್ 12) ಪೈಪೋಟಿ ನೀಡಿದರೂ ನೀಡಬಹುದು.

ನಮ್ಮಲ್ಲೂ ಈ ರೀತಿಯ ಬೆಳವಣೆಗೆ ಬರುವುದು ಯಾವಾಗ?

ಖಾನ್ ಗಳಂತೆ ನಮ್ಮಲ್ಲೂ ಈ ರೀತಿಯ ಬೆಳವಣಿಗೆ ಕಂಡು ಬಂದರೆ ಚಿತ್ರೋದ್ಯಮದ ಹಿತದೃಷ್ಟಿಯಲ್ಲಿ ಒಳ್ಳೇದಲ್ವೇ? ಮುಂದೆ ಎಂದಾದರೂ ಒಂದು ದಿನ ಒಬ್ಬರ ಚಿತ್ರಕ್ಕೆ ಇನ್ನೊಬ್ಬರು ಪ್ರೋತ್ಸಾಹಿಸುವ ಉತ್ತಮ ಬೆಳವಣಿಗೆ ನಮ್ಮಲ್ಲೂ ಬರಲಿ ಎನ್ನುವುದೇ ಎಲ್ಲರ ಆಶಯ.

English summary
Salman Khan tweet-thanked Shah Rukh Khan and Aamir Khan for revealing the semi-first look of his new film Bajrangi Bhaijaan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada