For Quick Alerts
  ALLOW NOTIFICATIONS  
  For Daily Alerts

  ಕೊಲೆ, ಕಳ್ಳಸಾಗಣೆ ಆರೋಪ ಹೊರಿಸಿದ್ದವನ ವಿರುದ್ಧ ಪ್ರಕರಣ: ಸಲ್ಮಾನ್ ಖಾನ್‌ಗೆ ನಿರಾಸೆ

  |

  ಸಲ್ಮಾನ್ ಖಾನ್‌ ಪನ್ವೇಲ್‌ನಲ್ಲಿ ದೊಡ್ಡ ಫಾರಂ ಹೌಸ್ ಹೊಂದಿರುವುದು ಗೊತ್ತಿರುವ ವಿಷಯವೇ. ಆದರೆ ಆ ಫಾರಂ ಹೌಸ್‌ನ ಪಕ್ಕದಲ್ಲೇ ಜಮೀನು ಹೊಂದಿರುವ ಕೇತನ್ ಕಕ್ಕಡ್, ಜಮೀನಿನ ವಿಷಯವಾಗಿ ಆಗಾಗ್ಗೆ ಸಲ್ಮಾನ್ ಖಾನ್ ವಿರುದ್ಧ ಆರೋಪ ಮಾಡುತ್ತಲೇ ಇರುತ್ತಾರೆ.

  ಕೆಲ ತಿಂಗಳ ಹಿಂದೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೇತನ್ ಕಕ್ಕಡ್, ಸಲ್ಮಾನ್ ಖಾನ್ ವಿರುದ್ಧ ಕೊಲೆ, ಮಕ್ಕಳ ಕಳ್ಳಸಾಗಣೆಯಂಥಹಾ ಗಂಭೀರ ಆರೋಪಗಳನ್ನು ಮಾಡಿದ್ದ ಜೊತೆಗೆ ಅವರ ಧರ್ಮವನ್ನು, ಕುಟುಂಬವನ್ನೂ ನಿಂದಿಸಿದ್ದರು. ಇದರ ವಿರುದ್ಧ ಸಲ್ಮಾನ್ ಖಾನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

  ಸಲ್ಮಾನ್ ಫಾರ್ಮ್ ಹೌಸ್‌ನಲ್ಲಿ ಸೆಲೆಬ್ರಿಟಿಗಳ ಶವ ಹೂಳಲಾಗುತ್ತಿದೆ ಎಂದ ಕಕ್ಕಡ್!ಸಲ್ಮಾನ್ ಫಾರ್ಮ್ ಹೌಸ್‌ನಲ್ಲಿ ಸೆಲೆಬ್ರಿಟಿಗಳ ಶವ ಹೂಳಲಾಗುತ್ತಿದೆ ಎಂದ ಕಕ್ಕಡ್!

  ಮುಂಬೈನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕೇತನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಜಮೀನಿನ ವಿಷಯಕ್ಕೆ ತನ್ನ ಕುಟುಂಬ ಹಾಗೂ ತಮ್ಮ ಧರ್ಮವನ್ನು ಎಳೆದು ತಂದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕೇತನ್‌ ಕಕ್ಕಡ್‌ಗೆ ಯಾವುದೇ ಸೂಚನೆ ನೀಡಲು, ಅವರು ಸಲ್ಮಾನ್ ಖಾನ್ ಬಗ್ಗೆ ಮಾತನಾಡದಂತೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

  ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

  ಹೈಕೋರ್ಟ್ ಮೊರೆ ಹೋದ ಸಲ್ಮಾನ್ ಖಾನ್

  ಬಳಿಕ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಸಲ್ಮಾನ್ ಖಾನ್, ಕೇತನ್ ಕಕ್ಕಡ್‌ ತಮ್ಮ ಬಗ್ಗೆ ಸುಳ್ಳು ಮಾಹಿತಿ ಹರಡಂತೆ ತಡೆಯಾಜ್ಞೆ ನೀಡಲು ಕೋರಿದ್ದಾರೆ. ಹಾಗೂ ಸಿಟಿ ಸಿವಿಲ್ ಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣ ಆಲಿಸಿದ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡುವುದನ್ನು ನಿರಾಕರಿಸಿದೆ. ಹಾಗೂ ಸಿಟಿ ಸಿವಿಲ್ ಕೋರ್ಟ್‌ನ ಆದೇಶದ ಮೇಲ್ಮನವಿಗೆ ನೀಡಬೇಕಿರುವ ಆದೇಶವನ್ನು ಕಾಯ್ದಿರಿಸಿದೆ.

  ಪನ್ವೇಲ್ ಪ್ರಕರಣ: ನೆರೆಯವನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ಪನ್ವೇಲ್ ಪ್ರಕರಣ: ನೆರೆಯವನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್

  ಕೊಲೆ, ಕಳ್ಳಸಾಗಣೆ ಆರೋಪ ಹೊರಿಸಿದ್ದ ಕೇತನ್

  ಕೊಲೆ, ಕಳ್ಳಸಾಗಣೆ ಆರೋಪ ಹೊರಿಸಿದ್ದ ಕೇತನ್

  ವಿಡಿಯೋ ಒಂದರಲ್ಲಿ ಸಲ್ಮಾನ್ ಖಾನ್‌ರ ಬಗ್ಗೆ ಮಾತನಾಡಿದ್ದ ಕೇತನ್ ಕಕ್ಕಡ್, 'ಸಲ್ಮಾನ್ ಖಾನ್‌ರ ವಿಶಾಲ ಪನ್ವೇಲ್ ಫಾರಂ ಹೌಸ್‌ನಲ್ಲಿ ಸಿನಿಮಾ ನಟ-ನಟಿಯರ ಶವಗಳನ್ನು ಹೂಳಲಾಗುತ್ತಿದೆ. ಸಲ್ಮಾನ್ ಖಾನ್‌ಗೆ ಎದುರು ತಿರುಗಿದವರ ಶವಗಳನ್ನು ಅಲ್ಲಿ ಹೂಳಲಾಗುತ್ತಿದೆ. ಅಲ್ಲದೆ, ಆ ಫಾರಂ ಹೌಸ್ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಅದು ಮಕ್ಕಳ ಕಳ್ಳ ಸಾಗಣೆಯ ತಾಣವೂ ಆಗಿದೆ'' ಎಂದಿದ್ದರು. ಸಲ್ಮಾನ್ ಖಾನ್‌ರ ಧರ್ಮದ ಬಗ್ಗೆ ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು.

  ಭೂಮಾಫಿಯಾ ಮಾಡುತ್ತಿದ್ದಾರೆಂದು ಆರೋಪ

  ಭೂಮಾಫಿಯಾ ಮಾಡುತ್ತಿದ್ದಾರೆಂದು ಆರೋಪ

  ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೇತನ್ ಕಕ್ಕಡ್, ''ಸಲ್ಮಾನ್ ಖಾನ್ ನನ್ನ ಜಮೀನು ಕಿತ್ತುಕೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಅರಣ್ಯ ಇಲಾಖೆ ನನ್ನ ಜಮೀನನ್ನು ರದ್ದು ಮಾಡಿದೆ. ಅಲ್ಲದೆ ನನ್ನ ಜಮೀನಿಗೆ ಓಡಾಡಲು ಇರುವ ಏಕೈಕ ದಾರಿಯನ್ನು ಗೇಟ್‌ ಇಟ್ಟು ಬಂದ್ ಮಾಡಿದ್ದಾರೆ ಸಲ್ಮಾನ್. ಅಲ್ಲಿ ಸಲ್ಮಾನ್ ಒಂದು ದೇವಸ್ಥಾನ ನಿರ್ಮಿಸಿದ್ದು ಅದರ ಗೇಟ್‌ ಅನ್ನು ಬಂದ್ ಮಾಡಿದ್ದಾರೆ. ಪನ್ವೆಲಾದಲ್ಲಿ ಸಲ್ಮಾನ್ ಖಾನ್ ಭೂ ಮಾಫಿಯಾ ನಡೆಸುತ್ತಿದ್ದಾರೆ. ನನ್ನ ಜಮೀನು ಮಾತ್ರವಲ್ಲ ಇನ್ನೂ ಕೆಲವರ ಜಮೀನನ್ನು ಅವರು ವಶಪಡಿಸಿಕೊಂಡಿದ್ದಾರೆ'' ಎಂದಿದ್ದರು. ಅದೇ ಸಂದರ್ಶನದಲ್ಲಿ ಇದ್ದ ಇಬ್ಬರು ಯುವತಿಯರು ಸಹ ಸಲ್ಮಾನ್ ಖಾನ್ ಅನ್ನು ನಿಂದಿಸಿದ್ದರು. ಅವರ ವಿರುದ್ಧವೂ ದೂರು ದಾಖಲಿಸಲಾಗಿತ್ತು.

  ಸಲ್ಮಾನ್ ಖಾನ್‌ರ ಫಾರಂ ಹೌಸ್‌ನ ವಿಶೇಷತೆ

  ಸಲ್ಮಾನ್ ಖಾನ್‌ರ ಫಾರಂ ಹೌಸ್‌ನ ವಿಶೇಷತೆ

  ಸಲ್ಮಾನ್‌ ಖಾನ್‌ ಅವರು ಪನ್ವೆಲ್ ನಲ್ಲಿ ಐಶಾರಾಮಿ ಫಾರ್ಮ್‌ ಹೌಸ್‌ ಹೊಂದಿದ್ದಾರೆ. ಇದರ ಒಟ್ಟು ವಿಸ್ತೀರ್ಣ 150 ಎಕರೆ. ಈ ವಿಶಾಲ ಜಾಗದಲ್ಲಿ ಮನೆ, ತೋಟ, ಈಜುಕೊಳ, ಜಿಮ್, ಅತಿಥಿ ಗೃಹ ಸೇರಿದಂತೆ ಅಗತ್ಯ ಇರುವ ಎಲ್ಲವನ್ನು ಸಲ್ಲು ನಿರ್ಮಾಣ ಮಾಡಿಕೊಂಡಿದ್ದಾರೆ. 150 ಎಕರೆ ಜಾಗದಲ್ಲಿ ನಿರ್ಮಾಣ ಆಗಿರುವ ಈ ಫಾರ್ಮ್‌ ಹೌಸ್‌ ಬೆಲೆ 80 ಕೋಟಿ ಎನ್ನಲಾಗುತ್ತದೆ. ಫಾರಂ ಹೌಸ್‌ನಲ್ಲಿ ಕುದುರೆ ಲಾಯ, ಕೃಷಿ ಭೂಮಿ, ಮನೊರಂಜನಾ ಸ್ಥಳ ಇತರೆಗಳನ್ನು ವಿಂಗಡಿಸಲಾಗಿದೆ. ಲಾಕ್‌ಡೌನ್ ಸಮಯವನ್ನು ಸಲ್ಮಾನ್ ಖಾನ್ ಇಲ್ಲಿಯೇ ಕಳೆದಿದ್ದರು. ಫಾರಂ ಹೌಸ್‌ನಲ್ಲಿ ತಿಂಗಳುಗಟ್ಟಲೆ ಸಮಯ ಕಳೆಯುತ್ತಾರೆ ಸಲ್ಮಾನ್.

  English summary
  Salman Khan's Defamation Case: HC Reserves Order On Actor's Plea Against Civil Court's Refusal For Relief. Know more about it.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X