»   » ಬಾಕ್ಸಾಫೀಸ್ ನಲ್ಲಿ ರುದ್ರತಾಂಡವ ಆಡುತ್ತಿರುವ 'ಸುಲ್ತಾನ್'

ಬಾಕ್ಸಾಫೀಸ್ ನಲ್ಲಿ ರುದ್ರತಾಂಡವ ಆಡುತ್ತಿರುವ 'ಸುಲ್ತಾನ್'

By: ಸೋನು ಗೌಡ
Subscribe to Filmibeat Kannada

ಈ ಬಾರಿ 'ಸುಲ್ತಾನ್ ಅಲಿ ಖಾನ್' ಅಲಿಯಾಸ್ ಸಲ್ಮಾನ್ ಖಾನ್ ಬಾಕ್ಸಾಫೀಸ್ ನಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಭಾಯ್ ಜಾನ್ ಅಭಿನಯದ 'ಸುಲ್ತಾನ್' ಸಿನಿಮಾ ಹಳೆಯ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದೆ.

ಅಂದಹಾಗೆ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಅವರು ಒಂದಾಗಿ ಕಾಣಿಸಿಕೊಂಡಿದ್ದ 'ಸುಲ್ತಾನ್' ಚಿತ್ರ ಬಿಡುಗಡೆ ಆದ ಕೇವಲ ಒಂದೇ ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?.[ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']

Salman's 'Sultan' First Day Opening Box Office Collection

ಬರೋಬ್ಬರಿ 36.54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಪೀಸ್ ನಲ್ಲಿ 'ಸುಲ್ತಾನ್' ರುದ್ರತಾಂಡವ ಆಡುತ್ತಿದೆ. ಒಟ್ನಲ್ಲಿ ಮತ್ತೆ ಸಲ್ಮಾನ್ ಖಾನ್ ಅವರು ಬಾಕ್ಸಾಫೀಸ್ ಸುಲ್ತಾನ್ ಅಂತ ಪ್ರೂವ್ ಆಗಿದೆ.

ರಂಜಾನ್ ಹಬ್ಬದ ಸ್ಪೆಷಲ್ ಅಂತ 'ಸುಲ್ತಾನ್' ಚಿತ್ರ ಬಿಡುಗಡೆ ಮಾಡಲಾಗಿದ್ದು, ಸುಮಾರು 4000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಇಡೀ ಭಾರತದಾದ್ಯಂತ ಏಕಕಾಲದಲ್ಲಿ ತೆರೆಕಂಡಿತ್ತು.['ಸುಲ್ತಾನ್' ಕೂಡ ಆನ್ ಲೈನ್ ನಲ್ಲಿ ಲೀಕ್ ಆಗಿತ್ತಾ?]

Salman's 'Sultan' First Day Opening Box Office Collection

ಬರೀ ಒಂದೇ ದಿನದಲ್ಲಿ ಇಷ್ಟು ಕಲೆಕ್ಷನ್ ಮಾಡಿದೆ ಅಂದ್ರೆ ಇನ್ನು ಒಂದೇ ವಾರದಲ್ಲಿ 'ಸುಲ್ತಾನ್' 100 ಕೋಟಿ ಕ್ಲಬ್ ಸೇರೋದು ಗ್ಯಾರೆಂಟಿ ಎಂದು ಟ್ರೇಡ್ ಎಕ್ಸ್ ಪರ್ಟ್ ಗಳು ಈಗಲೇ ಲೆಕ್ಕಾಚಾರ ಮಾಡುತ್ತಿವೆ.[ರಿಲೀಸ್ ಗೆ ಇನ್ನೂ 2 ದಿನ ಇದೆ, 'ಸುಲ್ತಾನ್' ಟಿಕೆಟ್ ಸೋಲ್ಡ್ ಔಟ್]

ಭಾರತದಲ್ಲಿ ಸುಮಾರು 4000 ಸ್ಕ್ರೀನ್ ನಲ್ಲಿ ಹಾಗೂ ವಿದೇಶದಲ್ಲಿ ಸುಮಾರು 1100 ಸ್ಕ್ರೀನ್ ಗಳಲ್ಲಿ 'ಸುಲ್ತಾನ್' ಗ್ರ್ಯಾಂಡ್ ಆಗಿ ಜುಲೈ 6ರಂದು ತೆರೆಕಂಡಿತ್ತು. ಚಿತ್ರಕ್ಕೆ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಅವರು ಆಕ್ಷನ್-ಕಟ್ ಹೇಳಿದ್ದರು.

English summary
Hindi movie 'Sultan' has managed to fulfill box office predictions. The Hindi Actor Salman Khan and Actress Anushka Sharma starrer 'Sultan' film got a massive response, becoming this year’s highest opener at the box office with Rs 36.54 crore business on first day of its release. The movie is directed by Ali Abbas Zafar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada