ಮುತ್ತಿಗಾಗಿ ನಿರ್ಮಾಪಕ ಮಾಡಿದ್ದ ರಂಪಾಟ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

ಕನ್ನಡದ ವರದನಾಯಕ ಸೇರಿ ಹಲವು ಪಂಚಭಾಷಾ ಸಿನಿಮಾಗಳಲ್ಲಿ ನಟಿಸಿರುವ ಸಮೀರಾ ರೆಡ್ಡಿ, ತಾವು ಸಿನಿಮಾ ರಂಗದಲ್ಲಿ ಎದುರಿಸಿದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

Recommended Video

Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಸಮೀರಾ ರೆಡ್ಡಿ, ನಿರ್ಮಾಪಕನೊಬ್ಬ 'ಕಿಸ್ಸಿಂಗ್ ಸೀನ್' ಗಾಗಿ ಸಮೀರಾಗೆ ಪೀಡಿಸಿದ್ದ ಘಟನೆಯನ್ನು ಸಹ ನೆನಪಿಸಿಕೊಂಡಿದ್ದಾರೆ.

ಅದರ ಜೊತೆಗೆ ಸಿನಿಮಾದ ನಾಯಕ ನಟನೊಬ್ಬ, 'ಈ ನಟಿ 'ಕೈಗೆ ಎಟುಕುವುದಿಲ್ಲ', ಆಕೆಯೊಂದಿಗೆ ಮುಂದೆ ಸಿನಿಮಾ ಮಾಡುವುದಿಲ್ಲವೆಂದು' ಹೇಳಿದ್ದನ್ನು ಸಹ ಬಹಿರಂಗ ಪಡಿಸಿದ್ದಾರೆ ಸಮೀರಾ.

ಗೊತ್ತಿಲ್ಲದೇ ಕಿಸ್ಸಿಂಗ್ ದೃಶ್ಯ ಸೇರಿಸಲಾಗಿತ್ತು

ಗೊತ್ತಿಲ್ಲದೇ ಕಿಸ್ಸಿಂಗ್ ದೃಶ್ಯ ಸೇರಿಸಲಾಗಿತ್ತು

ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾಗ. ನನಗೆ ಗೊತ್ತಿಲ್ಲದೇ ಸಿನಿಮಾದಲ್ಲಿ 'ಕಿಸ್ಸಿಂಗ್ ದೃಶ್ಯ' ಸೇರಿಸಲಾಗಿತ್ತು. ಇದನ್ನು ನಾನು ಖಂಡಿಸಿದ್ದೆ. ಆದರೆ ಇದನ್ನು ಒಪ್ಪದ ಆ ಸಿನಿಮಾದ ನಿರ್ಮಾಪಕ, ಮುತ್ತಿನ ದೃಶ್ಯದಲ್ಲಿ ನಟಿಸಲೇ ಬೇಕು ಎಂದು ಹಠ ಹಿಡಿದ ಎಂದು ಘಟನೆ ನೆನಪಿಸಿಕೊಂಡಿದ್ದಾರೆ ಸಮೀರಾ.

'ಕಿಸ್ಸಿಂಗ್ ದೃಶ್ಯದಲ್ಲಿ ನಟಿಸದಿದ್ದರೆ ಸಿನಿಮಾದಿಂದ ತೆಗೆದುಹಾಕುತ್ತೇನೆ'

'ಕಿಸ್ಸಿಂಗ್ ದೃಶ್ಯದಲ್ಲಿ ನಟಿಸದಿದ್ದರೆ ಸಿನಿಮಾದಿಂದ ತೆಗೆದುಹಾಕುತ್ತೇನೆ'

'ಮುಸಾಫಿರ್ ಸಿನಿಮಾದಲ್ಲಿ ಚುಂಬನ ದೃಶ್ಯದಲ್ಲಿ ನಟಿಸಿದ್ದೀಯಾ, ಈ ಸಿನಿಮಾದಲ್ಲೂ ನಟಿಸು, ನಟಿಸದೇ ಇದ್ದರೆ ನಿನ್ನನ್ನು ಸಿನಿಮಾದಿಂದ ತೆಗೆದುಹಾಕಿ ಬೇರೆಯವರನ್ನು ಹಾಕಿಕೊಳ್ಳುತ್ತೇನೆ' ಎಂದು ಬೆದರಿಸಿದ್ದರಂತೆ. ಆದರೆ ಆ ಸಿನಿಮಾ ಯಾವುದು, ನಿರ್ಮಾಪಕ ಯಾರು ಎಂಬುದನ್ನು ಹೇಳಿಲ್ಲ ಸಮೀರಾ ರೆಡ್ಡಿ.

'ಕೈಗೆ ಎಟುಕುವುದಿಲ್ಲ' ಎಂದಿದ್ದ ನಟ

'ಕೈಗೆ ಎಟುಕುವುದಿಲ್ಲ' ಎಂದಿದ್ದ ನಟ

ಮತ್ತೊಂದು ಸಿನಿಮಾದಲ್ಲಿ ನಾಯಕ ನಟನೇ, 'ಈಕೆ ಕೈಗೆ ಎಟುಕುವುದಿಲ್ಲ, ಈಕೆ ಬಹಳಾ ಬೋರಿಂಗ್, ಈಕೆಯೊಂದಿಗೆ ಮುಂದೆ ನಾನು ನಟಿಸುವುದಿಲ್ಲ' ಎಂದು ಹೇಳಿದ್ದನಂತೆ. ಹಾಗೆಯೇ ಮುಂದೆ ಆತನ ಸಿನಿಮಾಗಳಲ್ಲಿ ಸಮೀರಾ ಗೆ ಅವಕಾಶವೇ ಸಿಗಲಿಲ್ಲವಂತೆ.

ಬಾಡಿ ಶೇಮ್ ವಿರುದ್ಧ ಸಮೀರಾ ವಿಡಿಯೋ

ಬಾಡಿ ಶೇಮ್ ವಿರುದ್ಧ ಸಮೀರಾ ವಿಡಿಯೋ

ಮದುವೆಯಾಗಿ, ತಾಯಿಯಾಗಿರುವ ಸಮೀರಾ ರೆಡ್ಡಿ, ಸಿನಿಮಾದಿಂದ ಬಹುತೇಕ ದೂರವೇ ಉಳಿದಿದ್ದಾರೆ. ಮೇಕಪ್ ಇಲ್ಲದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದ ಸಮೀರಾ, ಬಾಡಿ ಶೇಮ್ ಮಾಡುವವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

More from Filmibeat

English summary
Actress Sameera Reddy shares her casting couch experience and said movie industry is like snake and ladder game.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X