Don't Miss!
- News
ಕೊರೊನಾ ಸಂಕಷ್ಟ; ಜನರಿಗೆ ನೆರವಾಗುವಂತೆ ಸ್ವಪಕ್ಷದವರಿಗೆ ಸಿದ್ದರಾಮಯ್ಯ ಮನವಿ
- Lifestyle
ಹನುಮಾನ್ ಜಯಂತಿಗೆ ಶುಭ ಕೋರಲು ಇಲ್ಲಿದೆ ನೋಡಿ ಶುಭಾಶಯಗಳು
- Sports
ಕೊರೊನಾ ವೈರಸ್ನಿಂದ ಚೇತರಿಸಿದ ಅಕ್ಷರ್ ಪಟೇಲ್ ಡೆಲ್ಲಿ ಸ್ಕ್ವಾಡ್ಗೆ ಸೇರ್ಪೆಡೆ
- Finance
ಟಾಟಾದ ವಾಹನಗಳಿಗೆ ಬಂಪರ್ ರಿಯಾಯಿತಿ: ಪ್ರತಿ ತಿಂಗಳು ಕಡಿಮೆ ಇಎಂಐ
- Automobiles
ಹೊಸ ಫೀಚರ್ಸ್ ಒಳಗೊಂಡ ಸೊನೆಟ್ ಹೆಚ್ಟಿಎಕ್ಸ್ ಪರಿಚಯಿಸಲಿದೆ ಕಿಯಾ ಮೋಟಾರ್ಸ್
- Education
English Language Day 2021: ಇಂಗ್ಲೀಷ್ ಭಾಷೆ ಕಲಿಯೋದು ಏಕೆ ಮುಖ್ಯ ? ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಂಜಯ್ ದತ್ ದಂಪತಿ
ಬಾಲಿವುಡ್ ನ ಪವರ್ ಫುಲ್ ಮತ್ತು ಸುಂದರ ಜೋಡಿಗಳಲ್ಲಿ ಸಂಜಯ್ ದತ್ ಮತ್ತು ಮಾನ್ಯತಾ ದತ್ ಜೋಡಿ ಕೂಡ ಒಂದು. ಸಂಜಯ್ ದತ್ ಕಷ್ಟದ ಸಮಯದಲ್ಲಿ ಜೊತೆಯಲ್ಲಿ ಇದ್ದು ಧೈರ್ಯ ತುಂಬಿದ ಪತ್ನಿ ಮಾನ್ಯತಾ ಎಂದರೆ ಸಂಜುಬಾಬಾಗೆ ಅಪಾರ ಪ್ರೀತಿ. ಪತ್ನಿಯ ಪ್ರೀತಿ, ಕಾಳಜಿ ಬಗ್ಗೆ ಸಂಜಯ್ ದತ್ ಆಗಾಗ ಹೇಳಿಕೊಳ್ಳುತ್ತಾರೆ.
ಅಂದಹಾಗೆ ಇಂದು ಸಂಜಯ್ ದತ್ ಮತ್ತು ಮಾನ್ಯತಾ ದತ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 13 ವರ್ಷಗಳು ಕಳೆದಿವೆ. ಇಂದು ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂಜಯ್ ದತ್ ದಂಪತಿಗೆ ಅಭಿಮಾನಿಗಳಿಂದ, ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಮುನ್ನಾಭಾಯಿ 3 ಸಿನಿಮಾ ಯಾವಾಗ? ಬಾಯ್ಬಿಟ್ಟ ನಿರ್ಮಾಪಕ

ಇಬ್ಬರ ನಡುವೆ 19 ವರ್ಷ ವಯಸ್ಸಿನ ಅಂತರ
ಸಂಜಯ್ ಮತ್ತು ಮಾನ್ಯತಾ ಅವರದ್ದು ಲವ್ ಮ್ಯಾರೇಜ್. ಇಬ್ಬರ ನಡುವೆ 19 ವರ್ಷಗಳ ವಯಸ್ಸಿನ ಅಂತರವಿದೆ. ವಯಸ್ಸಿನ ಅಂತರ ಸಂಬಂಧ ಮೇಲೆ ಪರಿಣಾಮ ಬೀರದು ಎನ್ನುವುದನ್ನು ಈ ಜೋಡಿ ಸಾಭೀತು ಪಡಿಸಿದೆ. ವಯಸ್ಸು ಕೇವಲ ಸಂಖ್ಯೆ ಅಷ್ಟೆ ಎಂದು ನಂಬಿರುವ ಈ ಜೋಡಿ 13 ವರ್ಷಗಳ ಸುಖಕರ ದಾಂಪತ್ಯ ಜೀವನ ನಡೆಸಿಕೊಂಡು ಬಂದಿದ್ದಾರೆ. ಬಾಲಿವುಡ್ ನ ಪ್ರೀತಿಪಾತ್ರ ಜೋಡಿಗಳಲ್ಲಿ ಒಂದಾಗಿದೆ.

2006ರಲ್ಲಿ ಇಬ್ಬರ ಪರಿಚಯ
2006ರಲ್ಲಿ ಒಬ್ಬರಿಗೊಬ್ಬರು ಪರಿಚಿತರಾದ ಸಂಜಯ ದತ್ ಮತ್ತ ಮಾನ್ಯತಾ ಇಬ್ಬರು ಸ್ನೇಹಿತರಾಗುತ್ತಾರೆ. ನಿರ್ಮಾಪಕ ನಿತಿನ್ ಮನಮೋಹನ್ ಅವರಿಂದ ಇಬ್ಬರು ಒಬ್ಬರಿಗೊಬ್ಬರು ಪರಿಚಿತರಾಗುತ್ತಾರೆ. ಸ್ನೇಹಿತರಾಗಿದ್ದ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗುತ್ತೆ. 2007ರಲ್ಲಿ ಈ ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳಲು ಪ್ರಾರಂಭಮಾಡಿದರು. ಅಲ್ಲಿಂದ ಇಬ್ಬರ ನಡುವೆ ಸ್ನೇಹಿಕ್ಕಿಂತ ಮಿಗಿಲಾದ ಬಂಧ ವಿದೆ ಎನ್ನುವ ಅನುಮಾನ ಬಾಲಿವುಡ್ ಅಂಗಳಲ್ಲಿ ಕೇಳಿಬರಲು ಪ್ರಾರಂಭವಾಗಿತು.

2008ರಲ್ಲಿ ಮದುವೆ
ಇಬ್ಬರ ಪ್ರೀತಿ, ಪ್ರೇಮದ ವಿಚಾರ ಸುದ್ದಿಯಾಗುತ್ತಿದ್ದಂತೆ ಎರಡು ವರ್ಷದ ಬಳಿಕ ಅಂದರೆ 2008 ಫೆಬ್ರವರಿ 7ರಂದು ಸಂಜಯ್ ಮತ್ತು ಮಾನ್ಯತಾ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾನ್ಯತಾ ಸದಾ ಸಂಜಯ್ ದತ್ ಬೆಂಬಲಕ್ಕೆ ನಿಂತಿದ್ದಾರೆ. ಸಂಜಯ್ ದತ್ ಜೈಲಿಗೆ ಹೋದ ಸಮಯದಿಂದ ಹಿಡಿದು, ಕಳೆದ ವರ್ಷ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುವವರೆಗೂ ಮಾನ್ಯತಾ ಪತಿಯ ಜೊತೆಯಲ್ಲೇ, ಆಧಾರಸ್ಥಂಬವಾಗಿ ನಿಂತಿದ್ದಾರೆ. ಮಾನ್ಯತಾ ಅಂತ ಹೆಂಡತಿ ಪಡೆಯಲು ಅದೃಷ್ಟ ಮಾಡಿಬರಬೇಕು ಮತ್ತು ಹೆಮ್ಮೆಯಾಗುತ್ತೆ ಎಂದು ಸಂಜಯ್ ದತ್ ಹೇಳುತ್ತಿರುತ್ತಾರೆ.
ಬಾಲಿವುಡ್ ನಟ ಸಂಜಯ್ ದತ್ ಮಾದಕ ವಸ್ತು ವ್ಯಸನದ ಬಗ್ಗೆ ಪುತ್ರಿ ತ್ರಿಶಾಲಾ ದತ್ ಹೇಳಿದ್ದೇನು?

ಪತ್ನಿ ಬಗ್ಗೆ ಸಂಜಯ್ ದತ್ ಮಾತು
2019ರ ಸಂದರ್ಶನವೊಂದರಲ್ಲಿ ಸಂಜಯ್ ದತ್, ಜೈಲು ಶಿಕ್ಷೆಯ ಬಳಿಕ ಜೀವನದ ಬಗ್ಗೆ ಬಹಿರಂಗ ಪಡಿಸಿದ್ದರು. 'ನಾನು ಅವಳಂತ ಪತ್ನಿ ಹೊಂದಿರುವುದು ಹೆಮ್ಮೆಯಾಗುತ್ತೆ. ಅವಳ ಗಮನ ಯಾವಾಗಲು ಮನೆ, ಗಂಡ, ಮಕ್ಕಳು ಮತ್ತು ಅವಳ ಕೆಲಸ ಕಡೆ ಇರುತ್ತೆ. ನಾನು ಅವಳ ವ್ಯವಹಾರದಲ್ಲಿ ಯಾವತ್ತು ಹಸ್ತಕ್ಷೇಪ ಮಾಡಿಲ್ಲ. ನನ್ನ ತಂದೆ ತೀರಿಕೊಂಡ ಬಳಿಕ ಮಾನ್ಯತಾ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವಳು ಎಂದಿಗೂ ನನ್ನನ್ನೂ ಬೀಳಲು ಬಿಡುವುದಿಲ್ಲ. ನನ್ನನ್ನು ಮೇಲೆತ್ತಲು ಸದಾ ಜೊತೆಯಲ್ಲಿ ಇರುತ್ತಾರೆ' ಎಂದು ಹೇಳಿದ್ದಾರೆ.
ಸಂಜಯ್ ದತ್ ಕೊಟ್ಟಿದ್ದ 100 ಕೋಟಿ ಮೌಲ್ಯದ ಆಸ್ತಿ ಹಿಂದಿರುಗಿಸಿದ ಪತ್ನಿ

ಸಂಜಯ್ ದತ್ ಮಾನ್ಯತಾ ದಂಪತಿಗೆ ಇಬ್ಬರು ಮಕ್ಕಳು
ಸಂಜಯ್ ದತ್ ಮತ್ತು ಮಾನ್ಯತಾ ದತ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಷಹ್ರಾನ್ ಮತ್ತು ಇಖ್ರಾ ಎಂದು ಹೆಸರಿಟ್ಟಿದ್ದಾರೆ. ಇಬ್ಬರು ಮಕ್ಕಳು ಕಳೆದ ಕೆಲವು ತಿಂಗಳಿಂದ ದುಬೈನಲ್ಲಿ ವಾಸಮಾಡುತ್ತಿದ್ದರು. ಇಬ್ಬರು ಮಕ್ಕಳೆಂದರೆ ಸಂಜಯ್ ದತ್ ಗೆ ಪ್ರಾಣ. ಮಕ್ಕಳನ್ನು ನೋಡಲು ಸಂಜಯ್ ದತ್ ದುಬೈಗೆ ಹೋಗುತ್ತಿರುತ್ತಾರೆ. ಕ್ಯಾನ್ಸರ್ ನಿಂದ ಗುಣಮುಖರಾದ ಬಳಿಕ ಸಂಜಯ್ ದತ್ ಮೊದಲು ಹೊರಟಿದ್ದು, ಮಕ್ಕಳನ್ನು ನೋಡಲು ದುಬೈಗೆ.