For Quick Alerts
  ALLOW NOTIFICATIONS  
  For Daily Alerts

  ಸಂಜಯ್ ದತ್‌ರ ಎಲ್ಲ ಕಾರಿಗೆ ಒಂದೇ ನಂಬರ್! ಆದರೆ ಈಗ ಬದಲಿಸಲು ನಿರ್ಧಾರ

  |

  'ಕೆಜಿಎಫ್ 2' ಸಿನಿಮಾದ ಅಧೀರನ ಪಾತ್ರದ ಮೂಲಕ ಕನ್ನಡ ಚಿತ್ರರಸಿಕರಿಗೆ ಹೆಚ್ಚು ಪರಿಚಿತವಾದ ಬಾಲಿವುಡ್ ನಟ ಸಂಜಯ್ ದತ್ ಅವರದ್ದು ವರ್ಣಮಯ ಬದುಕು. ಸಂಜಯ್ ದತ್ ಒಳ್ಳೆಯ ಐಶಾರಾಮಿ ಜೀವನ ನಡೆಸುತ್ತಾರೆ ಮುಂಬೈನಲ್ಲಿ.

  ಕಾರುಗಳ ಕಲೆಕ್ಷನ್‌ನ ಹವ್ಯಾಸವುಳ್ಳ ಸಂಜಯ್ ದತ್ ಹಲವು ವಿದೇಶಿ ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ. ಒಂದು ಸಮಯದಲ್ಲಿ ಅಶಿಸ್ತಿನ ಜೀವನ ನಡೆಸಿದ್ದ ಸಂಜಯ್ ದತ್, ಜೈಲು ವಾಸದ ಬಳಿಕ ತುಸು ದೇವರು, ಸಂಖ್ಯಾ ಶಾಸ್ತ್ರ ನಂಬಲು ಆರಂಭಿಸಿದರು.

  ಅದರಲ್ಲಿಯೂ ಸಂಖ್ಯಾ ಶಾಸ್ತ್ರ ಹೆಚ್ಚು ನಂಬಲು ಆರಂಭಿಸಿದ ಸಂಜಯ್ ದತ್, ತಮ್ಮ ಬಳಿ ಇರುವ ಎಲ್ಲ ವಾಹನಗಳಿಗೂ ಒಂದೇ ಸಂಖ್ಯೆಯಿಂದ ನೊಂದಣಿ ಮಾಡಿಸಿದ್ದಾರೆ. ಆದರೆ ಈಗ ಆ ನಂಬರ್ ಅನ್ನು ಬಿಟ್ಟು ಹೊಸ ನಂಬರ್‌ಗೆ ಬದಲಾಗುತ್ತಿದ್ದಾರೆ ಸಂಜಯ್ ದತ್.

  ಸಂಜಯ್ ದತ್ ಬಳಿ ಹಲವು ಕಾರುಗಳು

  ಸಂಜಯ್ ದತ್ ಬಳಿ ಹಲವು ಕಾರುಗಳು

  ಸಂಜಯ್ ದತ್ ಬಳಿ ಫೆರಾರಿ 599, ಎರಡೇ ಸೀಟು ಹೊಂದಿರುವ ಆಡಿ ಆರ್‌8, ಪೋರ್ಶೆ ಕಂಪೆನಿಯ ಎಸ್‌ಯುವಿ ಕಾರು, ರಾಲ್ಸ್ ರಾಯ್ಸ್ ಇವುಗಳು ಮಾತ್ರವೇ ಅಲ್ಲದೆ ಇನ್ನೂ ಹಲವು ಐಶಾರಾಮಿ ಕಾರುಗಳು ಸಂಜಯ್ ದತ್ ಬಳಿ ಇವೆ. ಇವೆಲ್ಲ ಕಾರುಗಳ ಸಂಖ್ಯೆ 4545 ಆಗಿದೆ. ಸಂಜಯ್ ದತ್‌ರಿಗೆ 9 ಲಕ್ಕಿ ನಂಬರ್ ಆಗಿರುವ ಕಾರಣ ಹೀಗೆ ಮಾಡಿದ್ದಾರೆ. ಬಹುತೇಕ ಎಲ್ಲ ವಾಹನಗಳನ್ನು 4545 ನಂಬರ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಆದರೆ ಆಂಗ್ಲದ ಇನ್ಶಿಯಲ್ ಅಷ್ಟೆ ಬದಲು.

  ಹೊಸ ಕಾರಿಗೆ ಹೊಸ ನಂಬರ್

  ಹೊಸ ಕಾರಿಗೆ ಹೊಸ ನಂಬರ್

  ಆದರೆ ಈಗ ಸಂಖ್ಯಾಶಾಸ್ತ್ರಜ್ಞರ ಸಲಹೆಯಂತೆ ಸಂಜಯ್ ದತ್ ಮತ್ತೆ ತಮ್ಮ ಸಂಖ್ಯೆ ಬದಲಾವಣೆ ಮಾಡಿದ್ದಾರೆ. ಇದೀಗ ಸಂಜಯ್ ದತ್ ಹೊಸದೊಂದು ಮರ್ಸಿಡೀಸ್ ಬೆಂಜ್ ಬುಕ್ ಮಾಡಿದ್ದು ಅದಕ್ಕೆ ಈ ಹಿಂದಿನ ಕಾರುಗಳಂತೆ 4545 ಸಂಖ್ಯೆಯ ಬದಲಿಗೆ 2999 ಸಂಖ್ಯೆಯಲ್ಲಿ ನೊಂದಣಿ ಮಾಡಿಸಲಿದ್ದಾರಂತೆ. ಸಂಜಯ್ ದತ್ ಹುಟ್ಟಿದ್ದು ಜೂನ್ 29 ಹಾಗಾಗಿ ಅದೇ ಸಂಖ್ಯೆಯ ಆಧಾರದಲ್ಲಿ ಈ ಕಾರಿಗೆ ನೊಂದಾವಣಿ ಮಾಡಿಸಲಿದ್ದಾರೆ. ಸಂಜಯ್ ದತ್‌ರ ಆರೋಗ್ಯ ಮತ್ತು ಜೀವನದ ದೃಷ್ಟಿಯಿಂದ ಈ ಸಂಖ್ಯೆ ಅವರಿಗೆ ಒಳ್ಳೆಯದಂತೆ.

  ಸಂಜಯ್ ದತ್‌ಗೆ ಈ ಎರಡು ಸಂಖ್ಯೆ ಮೇಲೆ ಪ್ರೀತಿ ಹೆಚ್ಚು

  ಸಂಜಯ್ ದತ್‌ಗೆ ಈ ಎರಡು ಸಂಖ್ಯೆ ಮೇಲೆ ಪ್ರೀತಿ ಹೆಚ್ಚು

  ಸಂಜಯ್‌ ದತ್‌ರಿಗೆ 9 ರ ಸಂಖ್ಯೆ ಮೇಲೆ ಬಹಳ ಪ್ರೀತಿ ಅದನ್ನು ಹೊರತುಪಡಿಸಿದರೆ 29 ಸಂಖ್ಯೆಯ ಮೇಲೂ ಪ್ರೀತಿ ಹೆಚ್ಚು ತಮ್ಮ ನಾಯಕತ್ವದ ಸಿನಿಮಾಗಳನ್ನು ಅಥವಾ ನಿರ್ಮಾಣದ ಸಿನಿಮಾಗಳನ್ನು 29 ರಂದು ಶುರು ಮಾಡುವುದು ಸಂಜಯ್ ದತ್ ವಾಡಿಕೆ. ಅಷ್ಟೇ ಅಲ್ಲದೆ, ಕೆಲವು ಮುಖ್ಯ ಕೆಲಸಗಳನ್ನು ಸಂಜಯ್ ದತ್ 9 ನೇ ತಾರೀಖು ಅಥವಾ 29ನೇ ತಾರೀಖಿನಂದು ಮಾತ್ರವೇ ಮಾಡುತ್ತಾರಂತೆ.

  ಸಂಜಯ್ ದತ್ ಕೈಯಲ್ಲಿ ಹಲವು ಸಿನಿಮಾಗಳು

  ಸಂಜಯ್ ದತ್ ಕೈಯಲ್ಲಿ ಹಲವು ಸಿನಿಮಾಗಳು

  'ಅಧೀರ' ಪಾತ್ರದ ಮೂಲಕ ಸಂಜಯ್ ದತ್ ತಮ್ಮ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆ ಆದ 'ಶಂಷೇರಾ' ಸಿನಿಮಾದಲ್ಲಿಯೂ ಪವರ್‌ಫುಲ್ ವಿಲನ್ ಪಾತ್ರದಲ್ಲಿ ಸಂಜಯ್ ದತ್ ಮಿಂಚಿದ್ದಾರೆ. ಅದರ ಹೊರತಾಗಿ 'ಮುನ್ನಾಭಾಯ್ 3' ಸಿನಿಮಾದಲ್ಲಿ ನಟಿಸಬೇಕಿದೆ. 'ದಿ ಗುಡ್ ಮಹಾರಾಜ', 'ಗುಡ್‌ಚಡಿ', 'ಬ್ಲಾಕ್‌ಬಸ್ಟರ್' ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸಲಿದ್ದಾರೆ. ಇವುಗಳ ಜೊತೆಗೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಕೆಲ ಸಿನಿಮಾಗಳ ಅವಕಾಶ ಸಂಜಯ್‌ಗೆ ಧಕ್ಕಿದೆಯಂತೆ.

  English summary
  Sanjay Dutt changing his new car's number to 2999 from 4545 as per numerologist suggestion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X