For Quick Alerts
  ALLOW NOTIFICATIONS  
  For Daily Alerts

  ತಿಂಗಳ ಬಳಿಕ ಮಕ್ಕಳನ್ನು ಭೇಟಿಯಾದ ಸಂತಸದಲ್ಲಿ ನಟ ಸಂಜಯ್ ದತ್

  |

  ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಇತ್ತೀಚಿಗೆ ಪತ್ನಿ ಮಾನ್ಯತಾ ದತ್ ಜೊತೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಸಂಜಯ್ ದತ್ ಚಿಕಿತ್ಸೆಯ ನಡುವೆಯೂ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಸಣ್ಣ ಬ್ರೇಕ್ ಪಡೆದು ಮಕ್ಕಳಿಗಾಗಿ ದುಬೈಗೆ ಹಾರಿದ್ದರು.

  ಇದೀಗ ಸಂಜಯ್ ದತ್ ತಿಂಗಳುಗಳ ಬಳಿಕ ಇಬ್ಬರು ಮುದ್ದು ಮಕ್ಕಳನ್ನು ನೋಡಿ ಮುದ್ದಾಡಿದ್ದಾರೆ. ಸಂಜಯ್ ದತ್ ಇಬ್ಬರು ಮಕ್ಕಳು ದುಬೈನಲ್ಲಿಯೇ ಇದ್ದಾರೆ. ಷಹ್ರಾನ್ ಮತ್ತು ಇಖ್ರಾ ಇಬ್ಬರು ಅವಳಿ ಮಕ್ಕಳು ಕೊರೊನಾ ಲಾಕ್ ಡೌನ್ ಗೂ ಮುಂಚೆ ತಾಯಿ ಮಾನ್ಯತಾ ಜೊತೆ ದುಬೈಗೆ ತೆರಳಿದ್ದರು. ಬಳಿಕ ಲಾಕ್ ಡೌನ್ ಆದ ಕಾರಣ ಅಲ್ಲಿಯೇ ಇರಬೇಕಾಗಿದೆ. ಮುಂದೆ ಓದಿ..

  ಮಕ್ಕಳನ್ನು ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದ ಮಾನ್ಯತಾ

  ಮಕ್ಕಳನ್ನು ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದ ಮಾನ್ಯತಾ

  ಮಾನ್ಯತಾ ದತ್, ಸಂಜಯ್ ದತ್ ಗೆ ಕ್ಯಾನ್ಸರ್ ಇರುವುದು ಗೊತ್ತಾದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದರು. ಆದರೆ ಮಕ್ಕಳು ದುಬೈನಲ್ಲಿಯೇ ಉಳಿದು ಕೊಳ್ಳುವಂತಾಗಿತ್ತು. ಇಬ್ಬರು ಮಕ್ಕಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಸಂಜಯ್ ದತ್, ಮಕ್ಕಳ ನೋಡುವ ಸಲುವಾಗಿ ವಿಶೇಷ ವಿಮಾನದ ಮೂಲಕ ದುಬೈಗೆ ಹೋಗಿದ್ದಾರೆ.

  ಕ್ಯಾನ್ಸರ್ ಬಳಿಕ ಮೊದಲ ಬಾರಿಗೆ ಅಪ್ಪನನ್ನು ನೋಡಿದ ಮಕ್ಕಳು

  ಕ್ಯಾನ್ಸರ್ ಬಳಿಕ ಮೊದಲ ಬಾರಿಗೆ ಅಪ್ಪನನ್ನು ನೋಡಿದ ಮಕ್ಕಳು

  ಸಂಜಯ್ ದತ್ ಗೆ ಕ್ಯಾನ್ಸರ್ ಇರುವ ವಿಚಾರ ಬಹಿರಂಗವಾದ ಮೇಲೆ ಮೊದಲ ಬಾರಿಗೆ ಮಕ್ಕಳು ಅಪ್ಪನನ್ನು ನೋಡುತ್ತಿದ್ದಾರೆ. ಸದ್ಯ ಸಂಜಯ್ ದತ್, ಪತ್ನಿ ಮತ್ತು ಮಕ್ಕಳ ಜೊತೆ ದುಬೈನಲ್ಲಿ ಕಾಲಕಳೆಯುತ್ತಿದ್ದಾರೆ. ಮಕ್ಕಳ ಜೊತೆ ಇರುವ ಫೋಟೋವನ್ನು ಮಾನ್ಯತಾ ದತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ದೇವರಿಗೆ ಧನ್ಯವಾದ ತಿಳಿಸಿದ ಮಾನ್ಯತಾ

  ದೇವರಿಗೆ ಧನ್ಯವಾದ ತಿಳಿಸಿದ ಮಾನ್ಯತಾ

  ಫೋಟೋ ಶೇರ್ ಮಾಡಿ ಮಾನ್ಯತಾ "ಸುಂದರ ಕುಟುಂಬದ ಉಡುಗೊರೆಗಾಗಿ ನಾನು ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೇವರ ಬಳಿ ಯಾವುದೇ ದೂರಾಗಳಾಗಲಿ, ಮನವಿಗಳಾಗಲಿ ಇಲ್ಲ. ಯಾವಾಗಲು ಒಟ್ಟಿಗೆ ಇರುತ್ತೇವೆ" ಎಂದು ಬರೆದುಕೊಂಡಿದ್ದಾರೆ.

  ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
  ಮೊದಲ ಹಂತದ ಚಿಕಿತ್ಸೆ ಮುಗಿಸಿರುವ ಸಂಜಯ್ ದತ್

  ಮೊದಲ ಹಂತದ ಚಿಕಿತ್ಸೆ ಮುಗಿಸಿರುವ ಸಂಜಯ್ ದತ್

  ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಿರುವ ಸಂಜಯ್ ದತ್ ಇದೀಗ ಚಿತ್ರೀಕಣದಲ್ಲಿ ಭಾಗಿಯಾಗಿದ್ದಾರೆ. 'ಶಂಶೇರಾ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಈಗಾಗಲೇ ದತ್ ಹಾಜರಾಗಿದ್ದಾರೆ. ಸದ್ಯ ಬ್ರೇಕ್ ಪಡೆದು ಮಕ್ಕಳನ್ನು ನೋಡಲು ದುಬೈಗೆ ಹೊರಟಿದ್ದಾರೆ.

  English summary
  Actor Sanjay Dutt meets his kids in Dubai after a months. Maanayata Dutt shares a Photo and She says Thank God for gift of Family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X