For Quick Alerts
  ALLOW NOTIFICATIONS  
  For Daily Alerts

  ನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸ

  |

  ಬಾಲಿವುಡ್ ನ ಖ್ಯಾತ ನಟ ಸಂಜಯ್ ಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕ್ಯಾನ್ಸರ್ 3ನೇ ಹಂತದಲ್ಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ದತ್ ಯುಎಸ್ ಗೆ ತೆರಳಿದ್ದಾರೆ.

  ನಿನ್ನೆ (ಆಗಸ್ಟ್ 11) ಸಂಜೆ ಈ ಆಘಾತಕಾರಿ ಸುದ್ದಿ ಹೊರಬಿದ್ದು ಸಂಜಯ್ ದತ್ ಅಭಿಮಾನಿಗಳು ಆತಂಕಗೊಂಡಿದ್ದಾರೆ. 61 ವರ್ಷದ ನಟ ಸಂಜಯ್ ದತ್ ಈ ಸುದ್ದಿ ಕೇಳಿ ಕುಸಿದುಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಜಯ್ ದತ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ. ದತ್ ಕುಟುಂಬದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವುದು ಸಂಜಯ್ ದತ್ ಮೊದಲಿಗರಲ್ಲ. ಮಾರಕ ಕ್ಯಾನ್ಸರ್ ಸಂಜಯ್ ದತ್ ಕುಟುಂಬದಲ್ಲಿ ಇಬ್ಬರನ್ನು ಬಲಿ ಪಡೆದಿದೆ. ಮುಂದೆ ಓದಿ...

  ನಟ ಸಂಜಯ್ ದತ್ ಗೆ ಕ್ಯಾನ್ಸರ್: ಹೆಚ್ಚಿನ ಚಿಕಿತ್ಸೆಗೆ USಗೆ ತೆರಳುತ್ತಿರುವ ದತ್ನಟ ಸಂಜಯ್ ದತ್ ಗೆ ಕ್ಯಾನ್ಸರ್: ಹೆಚ್ಚಿನ ಚಿಕಿತ್ಸೆಗೆ USಗೆ ತೆರಳುತ್ತಿರುವ ದತ್

  ಸಂಜಯ್ ದತ್ ಕುಟುಂಬದ ಕ್ಯಾನ್ಸರ್ ಇತಿಹಾಸ

  ಸಂಜಯ್ ದತ್ ಕುಟುಂಬದ ಕ್ಯಾನ್ಸರ್ ಇತಿಹಾಸ

  ಸಂಜಯ್ ದತ್ ಅವರ ಕುಟುಂಬದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವರು ಮೊದಲಿಗರಲ್ಲ. ದತ್ ಕುಟುಂಬ ಕ್ಯಾನ್ಯರ್ ನೊಂದಿಗೆ ಇತಿಹಾಸವನ್ನೆ ಹೊಂದಿದೆ. ಸಂಜಯ್ ದತ್ ತಾಯಿ ಮತ್ತು ಮೊದಲ ಪತ್ನಿ ರಿಚಾ ಶರ್ಮಾ ಕೂ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು.

  1981ರಲ್ಲಿ ತಾಯಿಯನ್ನು ಕಳೆದುಕೊಂಡ ಸಂಜಯ್

  1981ರಲ್ಲಿ ತಾಯಿಯನ್ನು ಕಳೆದುಕೊಂಡ ಸಂಜಯ್

  ಸಂಜಯ್ ದತ್ ತಾಯಿ ನರ್ಗೀಸ್ ದತ್ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 1981 ಮೇ 3ರಂದು ನರ್ಗೀಸ್ ದತ್ ನಿಧನ ಹೊಂದುತ್ತಾರೆ. ದುರದೃಷ್ಟ ಅಂದರೆ ಸಂಜಯ್ ದತ್ ಅಭಿನಯದ ಮೊದಲ ಸಿನಿಮಾ 'ರಾಕಿ' ರಿಲೀಸ್ ಆಗುವ ನಾಲ್ಕು ದಿನ ಮೊದಲು ತಾಯಿಯನ್ನು ಕಳೆದುಕೊಳ್ಳುತ್ತಾರೆ. ಸಂಜಯ್ ದತ್ ಅಭಿನಯದ ಚೊಚ್ಚಲ ಸಿನಿಮಾ ಮೇ 7ರಂದು ರಿಲೀಸ್ ಆಗಿದೆ.

  ಅನಾರೋಗ್ಯ ಹಿನ್ನಲೆ ನಟನೆಗೆ ಸಂಜಯ್ ದತ್ ಬ್ರೇಕ್: ಹಾಗಾದರೆ 'KGF-2' ಕಥೆ ಏನು?ಅನಾರೋಗ್ಯ ಹಿನ್ನಲೆ ನಟನೆಗೆ ಸಂಜಯ್ ದತ್ ಬ್ರೇಕ್: ಹಾಗಾದರೆ 'KGF-2' ಕಥೆ ಏನು?

  ಕ್ಯಾನ್ಸರ್ ನಿಂದ ಮೊದಲ ಪತ್ನಿ ನಿಧನ

  ಕ್ಯಾನ್ಸರ್ ನಿಂದ ಮೊದಲ ಪತ್ನಿ ನಿಧನ

  ತಾಯಿಯ ಸಾವಿನ ನೋವು ಹಸಿಯಾಗಿರುವಾಗಲೆ ಸಂಜಯ್ ದತ್ ಮೊದಲ ಪತ್ನಿಯನ್ನು ಕಳೆದುಕೊಳ್ಳುತ್ತಾರೆ. 1996 ಡಿಸೆಂಬರ್ 10 ರಂದು ಮೊದಲ ಪತ್ನಿ ರಿಚಾ ಶರ್ಮಾ ಕ್ಯಾನ್ಸರ್ ನಿಂದ ನಿಧರಾಗುತ್ತಾರೆ. ಕೇವಲ 32 ವರ್ಷದಲ್ಲಿಯೇ ರಿಚಾ ಬಾರದ ಲೋಕಕ್ಕೆ ಹೊರಟೋಗಿದ್ದಾರೆ.

  ಮೊದಲ ಪತ್ನಿ- ತಾಯಿ ಸಾವಿನ ಬಗ್ಗೆ ಸಂಜಯ್ ಮಾತು

  ಮೊದಲ ಪತ್ನಿ- ತಾಯಿ ಸಾವಿನ ಬಗ್ಗೆ ಸಂಜಯ್ ಮಾತು

  ಈ ಹಿಂದೆ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸಂಜಯ್ ದತ್ ಸಂದರ್ಶನವೊಂದರಲ್ಲಿ "ನಾನು ತಾಯಿ ಮತ್ತು ಮೊದಲ ಪತ್ನಿ ರಿಚಾ ಅವರನ್ನು ಕ್ಯಾನ್ಸರ್ ನಿಂದ ಕಳೆದುಕೊಂಡೆ. ಸ್ವಾಭಾವಿಕವಾಗಿ ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ಕೇಳಿದರೆ ನನಗೆ ತುಂಬಾ ಚಿಂತೆಯಾಗುತ್ತೆ" ಎಂದು ಹೇಳಿದ್ದರು.

  ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದತ್

  ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದತ್

  ಇದೀಗ ಸಂಜಯ್ ದತ್ ಸಹ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕಳೆದ ಎರಡು ವಾರದ ಹಿಂದೆಯಷ್ಟೆ 61ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಕಿಲ್ಲಿಂಗ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ನೀಡಲಾಗಿತ್ತು. ಆದರೀಗ ದತ್ ಅನಾರೋಗ್ಯದ ಸುದ್ದಿ ಅಭಿಮಾನಿಗಳಿಗೆ ಆತಂಕಕ್ಕೀಡುಮಾಡಿದೆ. ಸಂಜಯ್ ದತ್ ಬಹುಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

  English summary
  Actor Sanjay Dutt Mother Nargis dutt and First wife Richa also suffered from cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X