»   » ಪೆರೋಲ್ ಅಂತ್ಯ: ಮತ್ತೆ ಮಾವನ ಮನೆಗೆ ಸಂಜು

ಪೆರೋಲ್ ಅಂತ್ಯ: ಮತ್ತೆ ಮಾವನ ಮನೆಗೆ ಸಂಜು

Posted By:
Subscribe to Filmibeat Kannada

ಒಂಥರಾ ಈ ಜೈಲು ಅನ್ನೋದು ನಟ ಸಂಜಯ್ ದತ್ ಅವರ ಪಾಲಿಗೆ ಮಾವನ ಮನೆಯಂತಾಗಿದೆ. ಯಾವಾಗ ಬೇಕಾದರೂ ಹೋಗಬಹುದು ಯಾವಾಗ ಬೇಕಾದರೂ ಬರಬಹುದು. ಇದೀಗ ಅವರ ಪೆರೋಲ್ ಗಡುವು ಮುಗಿದಿದ್ದು (ಮಾರ್ಚ್ 21) ಮತ್ತೆ ಯರವಾಡ ಜೈಲಿಗೆ ಹೋಗುತ್ತಿದ್ದಾರೆ.

ಪುಣೆಯ ಯರವಾಡ ಜೈಲಿನಿಂದ ಸಂಜಯ್ ದತ್ ಅವರು ಒಂದು ತಿಂಗಳು ಪೆರೋಲ್ ಮೇಲೆ ಹೊರಬಂದಿದ್ದರು. ತಮ್ಮ ಪತ್ನಿ ಮಾನ್ಯತಾ ಅವರ ಆರೋಗ್ಯ ಸರಿಯಿಲ್ಲ ಎಂದು ನೆಪ ಹೇಳಿ ಅವರು ಕಳೆದ ವರ್ಷ ಡಿಸೆಂಬರ್ 21ರಂದು ಪೆರೋಲ್ ಮೇಲೆ ಹೊರಬಂದಿದ್ದರು. [ಜೈಲಿನಲ್ಲಿ ಸಂಜಯ್ ದತ್ ಲುಂಗಿ ಡಾನ್ಸ್]

Sanjay Dutt

ಬಳಿಕ ಅವರ ಪೆರೋಲ್ ಸಮಯವನ್ನು ಫೆಬ್ರವರಿ 21, 2014ರ ತನಕ ವಿಸ್ತರಿಸಲಾಗಿತ್ತು. ಅದಾದ ಬಳಿಕ ಮತ್ತೆ ಪೆರೋಲ್ ಸಮಯವನ್ನು ಮಾರ್ಚ್ 21ಕ್ಕೆ ವಿಸ್ತರಿಸಲಾಯಿತು. ತಮ್ಮ ಪತ್ನಿಯ ಆರೋಗ್ಯ ವಿಷಮಿಸಿರುವ ಕಾರಣ ಇನ್ನೂ ಒಂದು ತಿಂಗಳು ಪೆರೋಲ್ ವಿಸ್ತರಿಸುವಂತೆ ಅವರು ವಿನಂತಿಸಿದರು. [ಸೊಳ್ಳೆಬತ್ತಿ ಉಂಟು ಆದರೆ ಸಂಜುಗೆ ಹೊಗೆಬತ್ತಿ ಇಲ್ಲ]

ಮೂಲಗಳ ಪ್ರಕಾರ ಸಂಜು ಪತ್ನಿ ಮಾನ್ಯತಾ ಅವರ ಪಿತ್ತಜನಕಾಂಗದಲ್ಲಿ ಗಂತಿಯಾಗಿದೆಯಂತೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಪೆರೋಲ್ ಮೇಲೆ ಹೊರಬಂದಿದ್ದರು. 1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಅವರಿಗೆ ಜೈಲು ಶಿಕ್ಷೆಯಾಗಿತ್ತು. ಸಂಜು (53) ಇನ್ನೂ 42ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. (ಪಿಟಿಐ ಇನ್ ಪುಟ್ಸ್)

English summary
Bollywood superstar Sanjay Dutt’s parole will end today (March 21). Sanjay Dutt was released from Pune’s Yerwada jail on one-month parole on December 21 last year on the grounds of his wife Maanyata’s illness. The parole was later extended by a month, till February 21, 2014 and then again till March 21.
Please Wait while comments are loading...