»   » ಸಂಜಯ್ ದತ್ 'ಭೂಮಿ'ಯ ರೋಚಕ ಫಸ್ಟ್ ಲುಕ್ ಬಿಡುಗಡೆ ಆಯ್ತು

ಸಂಜಯ್ ದತ್ 'ಭೂಮಿ'ಯ ರೋಚಕ ಫಸ್ಟ್ ಲುಕ್ ಬಿಡುಗಡೆ ಆಯ್ತು

Posted By:
Subscribe to Filmibeat Kannada

ಸಂಜಯ್ ದತ್ ಅಭಿನಯದ 'ಭೂಮಿ' ಚಿತ್ರತಂಡ ಇಂದು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಇದರಲ್ಲಿ ಬಾಯಿಂದ ರಕ್ತ ಸೋರುತ್ತಿರುವ ದೃಶ್ಯದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ರೋಚಕವಾದ ಪೋಸ್ಟರ್ ನೋಡಿರುವ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿದೆ.

'ಭೂಮಿ' ಚಿತ್ರದ ಫಸ್ಟ್‌ ಲುಕ್ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ನಿರ್ದೇಶಕ ಒಮಂಗ್ ಕುಮಾರ್, 'ಇದು ಪ್ರೇಕ್ಷಕರಿಗಾಗಿ ನೀಡಿರುವ ಚಿತ್ರದ ಟೀಸರ್ ಅಷ್ಟೆ. ಜಸ್ಟ್ ಕಾದು ನೋಡಿ' ಎಂದಿದ್ದಾರೆ.

Sanjay Dutt Starrer Most antisipated movie 'Bhomi' first look released

ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಭೂಮಿ' ಅನ್ನು ಭೂಷಣ್ ಕುಮಾರ್ ಮತ್ತು ಸಂದೀಪ್ ಸಿಂಗ್ ರವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ರವರು ಈ ಹಿಂದೆ ಎಂದು ಕಾಣದ ರೀತಿಯಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅದಿತಿ ರಾವ್ ಹೈದರಿ ರವರು ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಂಜಯ್ ದತ್ ರವರ ಅಭಿಮಾನಿಗಳು 'ಭೂಮಿ' ಚಿತ್ರಕ್ಕಾಗಿ ದೀರ್ಘಕಾಲದಿಂದಲೂ ಕಾಯುತ್ತಿದ್ದು, ಈ ಚಿತ್ರ ಯಾರಿಗೂ ನಿರಾಸೆ ಮಾಡುವುದಿಲ್ಲ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ. ಇನ್ನು ನಟ ಸಿಧಾಂತ್ ಗುಪ್ತಾ ಸಹ ತೆರೆ ಹಂಚಿಕೊಂಡಿದ್ದಾರೆ. 'ಭೂಮಿ' ಚಿತ್ರ ಸೆಪ್ಟೆಂಬರ್ 22 ರಂದು ಬಿಡುಗಡೆ ಆಗಲಿದೆ.

English summary
Bollywood Actor Sanjay Dutt Starrer Most antisipated movie 'Bhomi' first look released. This Movie directed by Omung Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada