»   » 'ಇಂದು ಸರ್ಕಾರ್' ಬಿಡುಗಡೆಗೆ ವಿಘ್ನ, ಕೋರ್ಟ್ ಮೊರೆ ಹೋದ ಸಂಜಯ್ 'ಪುತ್ರಿ'

'ಇಂದು ಸರ್ಕಾರ್' ಬಿಡುಗಡೆಗೆ ವಿಘ್ನ, ಕೋರ್ಟ್ ಮೊರೆ ಹೋದ ಸಂಜಯ್ 'ಪುತ್ರಿ'

Posted By:
Subscribe to Filmibeat Kannada

ಮಾಜಿ ಪ್ರಧಾನಿ ಇಂದಿರಾ ಗಾಂಧಿ ರವರ ಮಗ ಸಂಜಯ್ ಗಾಂಧಿ ರವರ 'ಮಗಳು' ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು 'ಇಂದು ಸರ್ಕಾರ್' ಬಿಡುಗಡೆಗೆ ತಡೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

'ಇಂದು ಸರ್ಕಾರ್' ವಿರುದ್ಧ ಪ್ರತಿಭಟನೆ; ನಿರ್ದೇಶಕರಿಗೆ ಭದ್ರತೆ

ಸಂಜಯ್ ಗಾಂಧಿ 'ಮಗಳು' ಎಂದು ಹೇಳಿಕೊಂಡಿರುವ ಪ್ರಿಯಾ ಪೌಲ್ 'ಇಂದು ಸರ್ಕಾರ್' ಬಿಡುಗಡೆ ನಿಲ್ಲಿಸಿ ಎಂದು ಬಾಂಬೆ ಹೈಕೋರ್ಟ್‌ ನಲ್ಲಿ ಮನವಿ ಮಾಡಿದ್ದು, ಚಿತ್ರದಲ್ಲಿ ಕಾಲ್ಪನಿಕವಾಗಿ ಹೇಳಲಾಗಿರುವುದು ಏನು ಮತ್ತು ಅಳವಡಿಸಿರುವ ನಿಜ ಘಟನೆಗಳ ಬಗ್ಗೆ ನಿರ್ದೇಶಕ ಮಧುರ್ ಭಂಡಾರ್ಕರ್ ವಿವರಿಸಬೇಕು ಎಂದು ತಾವು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

Sanjay Gandhi's 'daughter' moves HC seeking stay on 'Indu Sarkar'

ನಿರ್ದೇಶಕ ಮಧುರ್ ಭಂಡಾರ್ಕರ್ ಕೆಲ ದಿನಗಳ ಹಿಂದೆಯೇ ಶೇಕಡ 30 ರಷ್ಟನ್ನು ಮಾತ್ರ ತುರ್ತುಪರಿಸ್ಥಿತಿಗೆ ಸಂಬಂಧ ಪಟ್ಟ ಘಟನೆಗಳನ್ನು ಅಳವಡಿಸಿದ್ದು, ಉಳಿದ ಶೇಕಡ 70 ಭಾಗ ಕಾಲ್ಪನಿಕವಾಗಿದೆ ಎಂದು ಹೇಳಿದ್ದರು. ಆದರೂ ಸಹ ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಮತ್ತು ಬಿಡುಗಡೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಸಿಬಿಎಫ್‌ಸಿ, ಚಿತ್ರದಲ್ಲಿಯ 12 ದೃಶ್ಯಗಳಿಗೆ ಕತ್ತರಿ ಹಾಕಿ, U/A ಸರ್ಟಿಫಿಕೇಟ್ ನೀಡಿತ್ತು. ಆದರೆ ಈಗ ಹೈಕೋರ್ಟ್‌ನಲ್ಲಿ ಚಿತ್ರ ರಿಲೀಸ್‌ಗೆ ತಡೆಯೊಡ್ಡಿ ಸಲ್ಲಿಸಿರುವ ಮನವಿಯಲ್ಲಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಅಳವಡಿಸಲಾದ ಎಲ್ಲಾ ವಾಸ್ತವ ಘಟನೆಗಳನ್ನು ಡಿಲೀಟ್ ಮಾಡಬೇಕು ಎಂದು ಹೇಳಲಾಗಿದೆ. ಪ್ರಿಯಾ ಪಾಲ್ ರವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ನ ಅನೂಪ್ ಮೊಹ್ತಾ ರವರ ನ್ಯಾಯಪೀಠ ಜುಲೈ 24 ರಂದು ವಿಚಾರಣೆ ಮಾಡಲಿದೆ ಎಂದು ಮೂಲಗಳಿಂದ ತಿಳಿದಿದೆ. 'ಇಂದು ಸರ್ಕಾರ್' ಚಿತ್ರವನ್ನು ಜುಲೈ 28 ರಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.

English summary
A woman claiming to be the biological daughter of Sanjay Gandhi, son of former Prime Minister Indira Gandhi, has approached the Bombay High Court seeking a stay on filmmaker Madhur Bhandarkar's upcoming film 'Indu Sarkar'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada