Don't Miss!
- Automobiles
ಮಾಡಿಫೈಗೊಂಡು ರಗಡ್ ಲುಕ್ನಲ್ಲಿ ಮಿಂಚಿದ ಟೊಯೊಟಾ ಫಾರ್ಚೂನರ್ ಎಸ್ಯುವಿ
- News
ರಾಜ್ಯದಲ್ಲಿ ಕೊರೊನಾ ಏರಿಕೆ; ಏ.20ಕ್ಕೆ ರಾಜ್ಯಪಾಲರ ನೇತೃತ್ವದಲ್ಲಿ ಸಭೆ
- Sports
ಐಪಿಎಲ್ 2021: ಟಿ20 ಕ್ರಿಕೆಟ್ ವಿಶ್ವ ದಾಖಲೆ ಬರೆದ ಸಿಎಸ್ಕೆ ನಾಯಕ ಎಂಎಸ್ ಧೋನಿ
- Finance
ಚಿನ್ನದ ಬೆಲೆ ಏರಿಕೆ: ಏಪ್ರಿಲ್ 19ರ ಬೆಲೆ ಹೀಗಿದೆ
- Education
Vikas Bank Recruitment 2021: ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಾಯ್ ಫ್ರೆಂಡ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ರುತಿ ಹಾಸನ್?
ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರುತಿ ಹಾಸನ್ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಲವ್ ಬ್ರೇಕ್ ಅಪ್ ಆದ್ಮೇಲೆ ಒಂಟಿಯಾಗಿರುವ ಶ್ರುತಿ ಬೇಸರದಿಂದ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ, ಹೊಸ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡು ಎಲ್ಲರಿಗು ಅಚ್ಚರಿ ಉಂಟು ಮಾಡಿದ್ದಾರೆ.
ಶ್ರುತಿ ಹಾಸನ್ ಈ ಹಿಂದೆ ಸಂಗೀತಗಾರ ಮೈಕಲ್ ಕೋರ್ಸೆಲ್ ಜೊತೆ ಪ್ರೀತಿಯಲ್ಲಿದ್ದರು. ಇಬ್ಬರು ಮದುವೆ ಸಹ ಆಗುತ್ತಾರೆ ಎನ್ನುವಷ್ಟು ಸುದ್ದಿಯಾಗಿತ್ತು. ಶ್ರುತಿ ಹಾಸನ್ ಅವರ ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಮೈಕಲ್ ಭಾಗಿಯಾಗಿದ್ದರು. ಆದ್ರೆ, ಇದ್ದಕ್ಕಿದ್ದಂತೆ ಶ್ರುತಿ ಪ್ರೀತಿ ಬ್ರೇಕ್ ಅಪ್ ಆಯಿತು. ಪ್ರೀತಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಶ್ರುತಿ ಹಾಸನ್‌ಗೆ ಈಗ ಮತ್ತೆ ಲವ್ ಆಗಿದೆ. ಹೊಸ ಬಾಯ್ ಫ್ರೆಂಡ್ ಜೊತೆ ತಮ್ಮ ಬರ್ತಡೇ ಸೆಲೆಬ್ರೆಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ.....
ಬ್ರೇಕ್ ಅಪ್ ನೋವು ದೂರ ಮಾಡಿದ ಲಾಕ್ಡೌನ್: ಶೃತಿ ಹಾಸನ್

ಹಜಾರಿಕ ಜೊತೆ ಶ್ರುತಿ ಬರ್ತಡೇ
ಶ್ರುತಿ ಹಾಸನ್ 35ನೇ ವರ್ಷದ ಜನುಮದಿನವನ್ನು ತಮ್ಮ ಬಾಯ್ ಫ್ರೆಂಡ್ ಸಂತನು ಹಜಾರಿಕ (Santanu Hazarika) ಜೊತೆ ಆಚರಿಸಿಕೊಂಡಿದ್ದಾರೆ. ದೆಹಲಿ ಮೂಲದ ಡೂಡಲ್ ಕಲಾವಿದ ಮತ್ತು ಸಚಿತ್ರಕಾರ ಸಂತನು ಹಜಾರಿಕ ಜೊತೆ ಶ್ರುತಿ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಶ್ರುತಿ ಮಾತನಾಡಲು ನಿರಾಕರಿಸಿದ್ದರು.

ರೊಮ್ಯಾಂಟಿಕ್ ವಿಶ್ ಮಾಡಿದ ಹಜಾರಿಕ
ಸಂತನು ಹಜಾರಿಕ ಜೊತೆ ಹುಟ್ಟುಹಬ್ಬವನ್ನು ಆಚರಣೆ ಮಾಡಿರುವ ಫೋಟೋವನ್ನು ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಶ್ರುತಿ ಹಾಸನ್ ಅವರ ಫೋಟೋ ಹಂಚಿಕೊಂಡಿರುವ ಹಜಾರಿಕ ''ಹ್ಯಾಪಿ ಬರ್ತಡೇ ಪ್ರಿನ್ಸಸ್'' ಎಂದು ಪೋಸ್ಟ್ ಹಾಕಿದ್ದಾರೆ.
ಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿ

ಮುಂಬೈನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದ ಜೋಡಿ
ಎರಡ್ಮೂರು ದಿನದ ಹಿಂದೆಯಷ್ಟೇ ಶ್ರುತಿ ಹಾಸನ್ ಮತ್ತು ಹಜಾರಿಕ ಜೋಡಿ ಮುಂಬೈನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದರು. ಶ್ರುತಿ ಹಾಸನ್ ಮತ್ತೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಯಾರ ಜೊತೆ ಎಂದು ಖಚಿತವಾಗಿರಲಿಲ್ಲ. ಆದರೆ, ಹಜಾರಿಕ ಜೊತೆ ಮುಂಬೈನಲ್ಲಿ ಶ್ರುತಿ ಅವರನ್ನು ನೋಡಿದ್ಮೇಲೆ ಈ ಸುದ್ದಿ ನಿಜಾ ಎಂದು ನಂಬುವಂತಾಗಿತ್ತು.

ಶ್ರುತಿ ಹಾಸನ್ ಮಾಜಿ ಗೆಳೆಯ ಯಾರು?
ಇಟಲಿ ಮೂಲದ ಮೈಕಲ್ ಕೋರ್ಸೆಲ್ ಜೊತೆ ಶ್ರುತಿ ಲವ್ವಲ್ಲಿ ಇದ್ದರು. ಮೈಕಲ್‌ಗೋಸ್ಕರ್ ಶ್ರುತಿ ಆಗಾಗ ಇಟಲಿಗೆ ಸಹ ಹೋಗುತ್ತಿದ್ದರು. ಇಬ್ಬರು ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, 2019ರ ಕೊನೆಯಲ್ಲಿ ಶ್ರುತಿ ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದರು. ಮೈಕಲ್ ಸಹ ಬ್ರೇಕ್ ಅಪ್ ಪೋಸ್ಟ್ ಹಾಕಿದ್ದರು.