For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ಇಬ್ಬರು ಸ್ಟಾರ್ ನಟಿಯರಿಗೆ ಶೀಘ್ರ ಎನ್‌ಸಿಬಿ ನೊಟೀಸ್

  |

  ಸುಶಾಂತ್ ಸಿಂಗ್ ಸಾವಿನ ತನಿಖೆಯಿಂದಾಗಿ ಹೊರಗೆ ಬಂದ ಸಿನಿಮಾ ರಂಗದ ಡ್ರಗ್ಸ್ ನಂಟು ಬಾಲಿವುಡ್‌ ನಂತರ ಸ್ಯಾಂಡಲ್‌ವುಡ್‌ಗೆ ವ್ಯಾಪಿಸಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ. ಇದೀಗ ನೆರೆಯ ಸಿನಿಮಾ ರಂಗಗಳಿಗೂ ವ್ಯಾಪಿಸುವ ಸ್ಪಷ್ಟ ಲಕ್ಷಣ ಗೋಚರವಾಗುತ್ತಿದೆ.

  ಡ್ರಗ್ಸ್ 'ವ್ಯಾಪಾರ' ನಿಂತಿರುವುದೇ ಜಾಲದ (ನೆಟ್‌ವರ್ಕ್‌) ಮೇಲೆ ಇಲ್ಲಿ ಒಬ್ಬರಿಗೊಬ್ಬರಿಗೆ ನಂಟು ಇದ್ದೇ ಇರುತ್ತದೆ. ಈ ನಂಟಿನ ಮೂಲಕವೇ ವ್ಯಾಪಾರ ನಡೆಯುತ್ತದೆ. ಹಾಗಾಗಿ ಸಿಕ್ಕಿಹಾಕಿಕೊಂಡಾಗ ಒಬ್ಬರೇ ಸಿಕ್ಕಿಹಾಕಿಕೊಳ್ಳುವುದಿಲ್ಲ, ಆ ಜಾಲದಲ್ಲಿರುವ ಬಹುತೇಕರು ಸಿಕ್ಕಿ ಬಿಳುತ್ತಾರೆ. ಈಗಲೂ ಹಾಗೆಯೇ ಆಗುತ್ತಿದೆ.

  ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!

  ಸುಶಾಂತ್ ಗೆ ಡ್ರಗ್ಸ್‌ ಖರೀದಿಸಿದ ಆರೋಪದಲ್ಲಿ ಆತನ ಪ್ರೇಯಸಿ ರಿಯಾ ಸಿಂಗ್ ಎನ್‌ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದಾರೆ, ಅವರು ಇನ್ನಿಬ್ಬರು ಸ್ಟಾರ್ ನಟಿಯರ ಹೆಸರು ಹೇಳಿದ್ದಾರೆಂಬ ಗಾಳಿ ಸುದ್ದಿ ಹರಿದಾಡಿತ್ತು, ಅದೀಗ ನಿಜವಾಗಿದೆ.

  ಇಬ್ಬರು ಖ್ಯಾತ ನಟಿಯರ ಹೆಸರು ಬಹಿರಂಗ

  ಇಬ್ಬರು ಖ್ಯಾತ ನಟಿಯರ ಹೆಸರು ಬಹಿರಂಗ

  ಎನ್‌ಸಿಬಿ ವಿಚಾರಣೆಯಲ್ಲಿ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಪುತ್ರಿಯೂ ಆಗಿರುವ ನಟಿ ಸಾರಾ ಅಲಿ ಖಾನ್ ಹೆಸರನ್ನು ಹೇಳಿದ್ದಾರೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ. ಈ ಇಬ್ಬರೂ ನಟಿಯರಿಗೆ ಈಗ ಪೀಕಲಾಟ ಪ್ರಾರಂಭವಾಗಿದೆ.

  ಡ್ರಗ್ಸ್‌ ಪ್ರಕರಣ: ಇಬ್ಬರು ಟಾಪ್ ನಟಿಯರ ಹೆಸರು ಹೇಳಿದ ರಿಯಾ ಚಕ್ರವರ್ತಿ?ಡ್ರಗ್ಸ್‌ ಪ್ರಕರಣ: ಇಬ್ಬರು ಟಾಪ್ ನಟಿಯರ ಹೆಸರು ಹೇಳಿದ ರಿಯಾ ಚಕ್ರವರ್ತಿ?

  ಮೂವರು ಹೆಸರು ಹೇಳಿರುವ ರಿಯಾ ಚಕ್ರವರ್ತಿ

  ಮೂವರು ಹೆಸರು ಹೇಳಿರುವ ರಿಯಾ ಚಕ್ರವರ್ತಿ

  ಎನ್‌ಸಿಬಿ ಅಧಿಕಾರಿಗಳು ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಹಾಗೂ ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಸಿಮೋನ್ ಕಂಬಾಟ ಅವರಿಗೆ ಸಮನ್ಸ್ ಜಾರಿ ಮಾಡಲಿದೆ. ಮಂಗಳವಾರ ಅಥವಾ ಬುಧವಾರ ಇವರಿಗೆ ಸಮನ್ಸ್ ನೀಡುವುದು ಪಕ್ಕಾ ಎಂದು ಅಧಿಕಾರಿಗಳು ಹೇಳಿರುವುದಾಗಿ ಕೆಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

  ಎನ್‌ಸಿಬಿ ಉಪನಿರ್ದೇಶಕ ಹೇಳಿಕೆ

  ಎನ್‌ಸಿಬಿ ಉಪನಿರ್ದೇಶಕ ಹೇಳಿಕೆ

  'ಫಿಲ್ಮೀಬೀಟ್‌' ಜೊತೆಗೆ ಮಾತನಾಡಿರುವ ಎನ್‌ಸಿಬಿಯ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ, ರಿಯಾ ಸಿಂಗ್, ರಾಕುಲ್ ಪ್ರೀತ್ ಹಾಗೂ ಸಾರಾ ಅಲಿ ಖಾನ್ ಹೆಸರು ಹೇಳಿರುವುದು ನಿಜವೆಂದು ಹೇಳಿದ್ದಾರೆ. ಆದರೆ ಈ ಇಬ್ಬರೂ ನಟಿಯರಿಗೆ ಸಮನ್ಸ್‌ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ ಮಲ್ಹೋತ್ರಾ.

  ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್ರಿಯಾ ಚಕ್ರವರ್ತಿ-ಸುಶಾಂತ್ 'ಧೂಮಲೀಲೆ' ವಿಡಿಯೋ ವೈರಲ್

  ಸುಶಾಂತ್ ಮಾಜಿ ಪ್ರೇಯಸಿ ಸಾರಾ ಅಲಿ ಖಾನ್

  ಸುಶಾಂತ್ ಮಾಜಿ ಪ್ರೇಯಸಿ ಸಾರಾ ಅಲಿ ಖಾನ್

  ಸಾರಾ ಅಲಿ ಖಾನ್, ಸುಶಾಂತ್‌ ಸಿಂಗ್‌ ನ ಮಾಜಿ ಪ್ರೇಯಸಿ ಆಗಿದ್ದರು. ಇಬ್ಬರೂ ಮಲೇಷ್ಯಾ ಸೇರಿದಂತೆ ಹಲವು ಕಡೆಗಳಿಗೆ ಪ್ರವಾಸ ಸಹ ಹೋಗಿದ್ದರು. ಈ ಪ್ರವಾಸಗಳ ಮುಖ್ಯ ಉದ್ದೇಶವೇ ಡ್ರಗ್ಸ್ ಆಗಿರುತ್ತಿತ್ತು ಎನ್ನಲಾಗುತ್ತಿದೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ತೆಲುಗು ಸಿನಿರಂಗಕ್ಕೆ ಆತಂಕ?

  ತೆಲುಗು ಸಿನಿರಂಗಕ್ಕೆ ಆತಂಕ?

  ಇನ್ನು ನಟಿ ರಾಕುಲ್ ಪ್ರೀತ್ ಸಿಂಗ್ ರ ವಿಚಾರಣೆ ನಡೆದರೆ, ಅವರು ಸಾಕಷ್ಟು ಸಕ್ರಿಯರಾಗಿರುವ ತೆಲುಗು ಸಿನಿಮಾ ರಂಗದ ಡ್ರಗ್ಸ್ ಕರ್ಮಕಾಂಡವೂ ಹೊರಗೆ ಬರಲಿದೆ ಎನ್ನಲಾಗುತ್ತಿದೆ. ಈಗಲಾಗೇ ಕೆಲವರು ರಾಕುಲ್ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ.

  ಡ್ರಗ್ಸ್ ಪ್ರಕರಣ: ನಟ ದಿಗಂತ್-ಐಂದ್ರಿತಾ ದಂಪತಿಗೆ ಸಿಸಿಬಿ ನೋಟಿಸ್ಡ್ರಗ್ಸ್ ಪ್ರಕರಣ: ನಟ ದಿಗಂತ್-ಐಂದ್ರಿತಾ ದಂಪತಿಗೆ ಸಿಸಿಬಿ ನೋಟಿಸ್

  English summary
  Sara Ali Khana and Rakul Preet Singh will get summons from NCB soon in Drugs case. Rhea Chakraborty told them names.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X