»   » ಸೈಫ್ ಪುತ್ರಿಗೆ ಒಲಿದು ಬಂತು ಅದೃಷ್ಟ: ರಣ್ವೀರ್ ಸಿಂಗ್ ಜೊತೆ ಸಾರಾ ಅಭಿನಯ!

ಸೈಫ್ ಪುತ್ರಿಗೆ ಒಲಿದು ಬಂತು ಅದೃಷ್ಟ: ರಣ್ವೀರ್ ಸಿಂಗ್ ಜೊತೆ ಸಾರಾ ಅಭಿನಯ!

Posted By:
Subscribe to Filmibeat Kannada

ಅಂತೂ ಇಂತೂ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಗೆ ಅದೃಷ್ಟ ಖುಲಾಯಿಸಿದೆ. ಚೊಚ್ಚಲ ಸಿನಿಮಾ 'ಕೇದಾರನಾಥ್' ಇನ್ನೂ ಬಿಡುಗಡೆ ಆಗುವ ಮುನ್ನವೇ ಎರಡನೇ ಚಿತ್ರಕ್ಕಾಗಿ ನಟಿ ಸಾರಾ ಅಲಿ ಖಾನ್ ಬುಕ್ ಆಗಿದ್ದಾರೆ.

ಕರಣ್ ಜೋಹರ್ ಹಾಗೂ ರೋಹಿತ್ ಶೆಟ್ಟಿ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ, ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ 'ಸಿಂಬಾ' ಚಿತ್ರಕ್ಕೆ ನಾಯಕಿ ಅಗಿ ಸಾರಾ ಅಲಿ ಖಾನ್ ಆಯ್ಕೆ ಆಗಿದ್ದಾರೆ.

'ಸಿಂಬಾ' ಚಿತ್ರದಲ್ಲಿ ಖಾಕಿ ತೊಟ್ಟು ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ರಣ್ವೀರ್ ಸಿಂಗ್. ಖಾಕಿ ಖದರ್ ನಲ್ಲಿರುವ ರಣ್ವೀರ್ ಸಿಂಗ್ ಜೊತೆ ರೋಮ್ಯಾನ್ಸ್ ಮಾಡುವುದು ಸಾರಾ ಅಲಿ ಖಾನ್.

Sara Ali Khan to play lead in Ranveer Singh starrer Simmba

ಅಷ್ಟಕ್ಕೂ, ಈ 'ಸಿಂಬಾ' ಸಿನಿಮಾ ತೆಲುಗಿನ 'ಟೆಂಪರ್' ಚಿತ್ರದ ರೀಮೇಕ್ ಎನ್ನಲಾಗಿದೆ. ಆದ್ರೆ, ''ಇದು ರೀಮೇಕ್ ಅಲ್ಲ. 'ಟೆಂಪರ್' ಚಿತ್ರದಿಂದ ನಾಲ್ಕೈದು ಸನ್ನಿವೇಶಗಳು ನಮಗೆ ಬೇಕಾಗಿತ್ತು. ಹೀಗಾಗಿ ರೀಮೇಕ್ ರೈಟ್ಸ್ ಖರೀದಿ ಮಾಡಿದ್ದೇವೆ ಅಷ್ಟೆ'' ಎನ್ನುತ್ತಾರೆ ನಿರ್ದೇಶಕ ರೋಹಿತ್ ಶೆಟ್ಟಿ.

Sara Ali Khan to play lead in Ranveer Singh starrer Simmba

ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ ಹಬ್ಬಿರುವ ಹೊಸ ಸುದ್ದಿ ನಿಜವೇ.?

ಅಂದ್ಹಾಗೆ, ಇದೇ 'ಸಿಂಬಾ' ಚಿತ್ರದಲ್ಲಿ ರಣ್ವೀರ್ ಸಿಂಗ್ ಜೊತೆಗೆ ಕೆಣಕುವ ಕಣ್ಣೋಟದ ಬೆಡಗಿ ಪ್ರಿಯಾ ವಾರಿಯರ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಆಗಿತ್ತು. ಈ ವಿಚಾರ ಇನ್ನೂ ಚಿತ್ರತಂಡದಿಂದ ಕನ್ ಫರ್ಮ್ ಆಗಿಲ್ಲ. ರಣ್ವೀರ್ ಸಿಂಗ್ ಜೊತೆ ಸಾರಾ ಇರುವುದಂತೂ ಪಕ್ಕಾ ಆಗಿದೆ. ಪ್ರಿಯಾ ವಾರಿಯರ್ ಬಂದ್ರೆ, ಹರೆಯದ ಹುಡುಗರಿಗೆ ಬೋನಸ್.!

English summary
Saif Ali Khan's daughter Sara Ali Khan to play lead in Ranveer Singh starrer 'Simmba'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X