»   » ಅಮೀರ್ ಖಾನ್ ಮುಂದಿನ ಚಿತ್ರದ ಸ್ಪೆಷಲ್ 'ಟೀಸರ್'

ಅಮೀರ್ ಖಾನ್ ಮುಂದಿನ ಚಿತ್ರದ ಸ್ಪೆಷಲ್ 'ಟೀಸರ್'

Posted By:
Subscribe to Filmibeat Kannada

ಬಾಲಿವುಡ್ ನಟ ಅಮೀರ್ ಖಾನ್ ಎರಡು ವರ್ಷಕ್ಕೊಮ್ಮೆ ಮಾತ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರಾಸೆ ಇಂದ ಹೇಳುತ್ತಿದ್ದರು. ಈ ಹೇಳಿಕೆಗೆ ನಟ ಅಮೀರ್ ಖಾನ್ ಈಗ ಸ್ವತಃ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳ ಚಿತ್ರಮಂದಿಗಳಲ್ಲೂ 'ದಂಗಲ್' ಸಿನಿಮಾ ಭರ್ಜರಿ ಆಗಿ ಓಡುತ್ತಿರುವಾಗಲೇ, ಅಮೀರ್ ಖಾನ್‌ ತಮ್ಮ ಕಡೆಯಿಂದ ಸೂಫರ್ ಹಿಟ್ ಚಿತ್ರವೊಂದನ್ನು ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಅಂದಹಾಗೆ ಅವರ ಮುಂದಿನ ಚಿತ್ರ 'ಸೀಕ್ರೆಟ್ ಸೂಪರ್‌ಸ್ಟಾರ್'. ಈಗಾಗಲೇ ಈ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿದೆ.['ದಂಗಲ್‌' ಸಿನಿಮಾಗೆ ಅಮೀರ್ ಖಾನ್ ಪಡೆದ ಅತಿದೊಡ್ಡ ಪ್ರಶಂಸೆ ಇದು..]

 'Secret Superstar' is Aamir Khan upcoming movie

ಅಮೀರ್ ಖಾನ್ ," ನಾನು ಎರಡು ವರ್ಷಕ್ಕೆ ಒಮ್ಮೆ ಮಾತ್ರ ತೆರೆ ಮೇಲೆ ಬರುತ್ತೇನೆ ಎಂದು ದೂರು ಹೇಳುವ ಎಲ್ಲರಿಗಾಗಿ' ಎಂದು ತಮ್ಮ ಹೊಸ ಚಿತ್ರದ ಟೀಸರ್ ಅನ್ನು ಟ್ವೀಟ್ ಮಾಡಿದ್ದಾರೆ. 2016 ರಲ್ಲಿ ಕುಸ್ತಿ ಆಧಾರಿತ ದಂಗಲ್ ಸಿನಿಮಾ ನೀಡಿದ ಅಮೀರ್, 2017 ರ ತಮ್ಮ 'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರದಲ್ಲಿ ಭಾಗಶಃ ಹುಡುಗಿಯೊಬ್ಬಳ ಸಂಗೀತ ಸಾಧನೆಯ ಕನಸನ್ನು ಕುರಿತು ಹೇಳುವ ಮುನ್ಸೂಚನೆಗಳು ಕಂಡುಬರುತ್ತಿವೆ.

ಅಮೀರ್ ಖಾನ್ ಮುಂದಿನ ಚಿತ್ರ 'ಸೀಕ್ರೆಟ್ ಸೂಪರ್‌ಸ್ಟಾರ್' ಟೀಸರ್ 8.4 ದಶಲಕ್ಷ ವೀಕ್ಷಣೆ ಪಡೆದಿದ್ದು, ಉತ್ತಮ ಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳುತ್ತಿದ್ದು, ಅಮೀರ್ ಖಾನ್ ಮತ್ತು ಕಿರಣ್ ರಾವ್ ನಿರ್ಮಾಣ ಹೊಣೆ ಹೊತ್ತಿದ್ದಾರೆ.['ದಂಗಲ್' ಟ್ವಿಟರ್ ವಿಮರ್ಶೆ: ಸುಲ್ತಾನ್‌ ಗಿಂತ ಬೆಟರ್]

ಚಿತ್ರದಲ್ಲಿ ಮೆಹೆರ್ ವಿಜ್, ಅಮೀರ್ ಖಾನ್, ಝೈರಾ ವಾಸಿಂ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಅಮಿತ್ ತ್ರಿವೇದಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರ 2017 ಆಗಸ್ಟ್ 4 ರಂದು ಬಿಡುಗಡೆ ಆಗಲಿದೆ.

'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರದ ಟೀಸರ್ ನೋಡಿ

English summary
Secret Superstar is an upcoming Indian musical drama film, written and directed by Advait Chandan and produced by Aamir Khan and Kiran Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada