For Quick Alerts
  ALLOW NOTIFICATIONS  
  For Daily Alerts

  ಸಂಸತ್ ಭಾಷಣದ ಬೆನ್ನಲ್ಲೇ ಜಯಾ ಬಚ್ಚನ್ ನಿವಾಸಕ್ಕೆ ಪೊಲೀಸ್ ಭದ್ರತೆ

  |

  ಹಿರಿಯ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಕುಟುಂಬಕ್ಕೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ. ಸಂಸತ್ ನಲ್ಲಿ ಬಾಲಿವುಡ್ ಪರವಾಗಿ ಮಾತನಾಡಿದ ಬೆನ್ನಲ್ಲೇ ಜುಹದಲ್ಲಿರುವ ಬಚ್ಚನ್ ಅವರ ಜಲ್ಸಾ ಬಂಗಲೆಗೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ.

  ಸಂಸತ್ ಭಾಷಣದ ಬೆನ್ನಲ್ಲೇ ಜಯಾ ಬಚ್ಚನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ನೀಡಲಾಗಿದೆ ಎಂದು ವರದಿಯಾಗಿದೆ. ಸಂಸತ್ ನಲ್ಲಿ ಜಯಾ ಬಚ್ಚನ್ ನಟ ರವಿ ಕಿಶನ್ ಹೇಳಿಕೆ ಮತ್ತು ಕಂಗನಾ ರಣಾವತ್ ಹೇಳಿಕೆಯನ್ನು ಖಂಡಿಸಿ ಚಿತ್ರರಂಗದ ಪರ ಮಾತನಾಡಿದ್ದರು. ಚಿತ್ರೋದ್ಯಮದ ವಿರುದ್ಧ ನಿರಂತವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಮುಂದೆ ಓದಿ...

  ಅಭಿಷೇಕ್ ಬಚ್ಚನ್ ನೇಣು ಹಾಕಿಕೊಂಡರೆ: ಜಯಾ ಬಚ್ಚನ್‌ಗೆ ಕಂಗನಾ ಪ್ರಶ್ನೆ

  ಚಿತ್ರರಂಗದ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದ್ದ ರವಿ ಕಿಶನ್

  ಚಿತ್ರರಂಗದ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದ್ದ ರವಿ ಕಿಶನ್

  ಬಹುಭಾಷಾ ನಟ ಮತ್ತು ಬಿಜೆಪಿ ನಾಯಕ ರವಿ ಕಿಶನ್ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾದ ನಂಟಿನ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದರು. ಮಾದಕ ವಸ್ತು ನಿಯಂತ್ರಣ ಇಲಾಖೆಯನ್ನು ಹೊಗಳುವ ಮೂಲಕ ಚಿತ್ರರಂಗದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮತ್ತು ವ್ಯಸನದ ಸಮಸ್ಯೆ ಹೆಚ್ಚಾಗುತ್ತಿದೆ ಎಂದಿದ್ದರು.

  ಬಂಗಲೆ ಹಾನಿ: 2 ಕೋಟಿ ಪರಿಹಾರ ಕೇಳಿದ ನಟಿ ಕಂಗನಾ ರಣಾವತ್

  ಚಿತ್ರರಂಗದ ಪರ ಮಾತನಾಡಿದ್ದ ಜಯಾ ಬಚ್ಚನ್

  ಚಿತ್ರರಂಗದ ಪರ ಮಾತನಾಡಿದ್ದ ಜಯಾ ಬಚ್ಚನ್

  ಈ ಬಗ್ಗೆ ಸಂಸತ್ ನಲ್ಲಿ ಮಾತನಾಡಿದ್ದ ಜಯಾ ಬಚ್ಚನ್, "ಕೆಲವೇ ಜನರ ಕಾರಣದಿಂದ ಇಡೀ ಸಿನಿಮಾರಂಗವನ್ನು ದೂರುವುದು ಸರಿಯಲ್ಲ. ನಿನ್ನೆ ಲೋಕಸಭೆ ಸದಸ್ಯರರೊಬ್ಬರು, ಚಿತ್ರೋದ್ಯಮದ ವಿರುದ್ಧ ಮಾತನಾಡಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದು ಆಹಾರ ನೀಡಿದ ಕೈಯನ್ನೆ ಕಚ್ಚಿದಂತೆ" ಎಂದು ಖಡಕ್ ಉತ್ತರ ನೀಡಿದ್ದರು.

  ಕಂಗನಾ ಹೇಳಿಕೆಗೆ ಜಯಾ ಬಚ್ಚನ್ ಅಸಮಾಧಾನ

  ಕಂಗನಾ ಹೇಳಿಕೆಗೆ ಜಯಾ ಬಚ್ಚನ್ ಅಸಮಾಧಾನ

  ನಟಿ ಕಂಗನಾ ರಣಾವತ್ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡುತ್ತಾ, "ಈ ಬಗ್ಗೆ ತನಿಖೆ ನಡೆಸಿದರೆ, ಅನೇಕರು ಸ್ಟಾರ್ ನಟರು ಜೈಲಿಗೆ ಹೋಗುತ್ತಾರೆ. ಬಾಲಿವುಡ್ ಎಂಬ ಮೋರಿಯನ್ನು ಸ್ವಚ್ಛ ಮಾಡಬೇಕು" ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಯಾ ಬಚ್ಚನ್, "ಉದ್ಯಮದಲ್ಲಿ ಹೆಸರು ಮಾಡಿದ ಕೆಲವರು ಚಿತ್ರರಂಗವನ್ನು 'ಮೋರಿ' ಎಂದು ಕರೆಯುತ್ತಾರೆ. ನಾನು ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಈ ರೀತಿಯ ಭಾಷೆ ಬಳಸಬೇಡಿ ಎಂದು ಸರ್ಕಾರ ಅಂತವರಿಗೆ ಸೂಚಿಸುತ್ತದೆ ಎಂದು ಭಾವಿಸಿದ್ದೀನಿ" ಎಂದಿದ್ದಾರೆ.

  ಗೊತ್ತಾಗಿರೋದು ಎರಡೇ ಹೆಸ್ರು ...ತುಂಬಾ ಹೆಸ್ರು ಹೊರಬರಬೇಕಿದೆ | Shruti Krishna | Filmibeat Kannada
  ಜಯಾ ಬಚ್ಚನ್ ಬೆನ್ನಿಗೆ ನಿಂತ ಸೋನಂ, ತಾಪ್ಸಿ

  ಜಯಾ ಬಚ್ಚನ್ ಬೆನ್ನಿಗೆ ನಿಂತ ಸೋನಂ, ತಾಪ್ಸಿ

  ಜಯಾ ಬಚ್ಚನ್ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಬಾಲಿವುಡ್ ನ ಕೆಲವು ನಟಿಯರು ಜಯಾ ಬಚ್ಚನ್ ಬೆನ್ನಿಗೆ ನಿಂತಿದ್ದಾರೆ. ಸೋನಂ ಕಪೂರ್, ತಾಪ್ಸಿ ಪನ್ನು ಸೇರಿದಂತೆ ಅನೇಕರು ಜಯಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

  English summary
  After Jaya Bachchan Parliament speech Security for Bachchan's residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X