For Quick Alerts
  ALLOW NOTIFICATIONS  
  For Daily Alerts

  ವೈರಲ್ ಫೋಟೋ: ಕಣ್ಣೀರಿಡುತ್ತಿದ್ದ ದಿಲೀಪ್ ಕುಮಾರ್ ಪತ್ನಿಗೆ ಶಾರುಖ್ ಸಾಂತ್ವನ

  |

  ಬಾಲಿವುಡ್‌ನ ಖ್ಯಾತ ನಟ, ಟ್ರ್ಯಾಜಿಡಿ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿದ್ದ ದಿಲೀಪ್ ಇನ್ನು ನೆನಪು ಮಾತ್ರ. ಇಂದು (ಜುಲೈ 7) ಬೆಳಗ್ಗೆ ಮುಂಬೈ ಹಿಂದೂಜಾ ಆಸ್ಪತ್ರೆಯಲ್ಲಿ ದಿಲೀಪ್ ಕುಮಾರ್ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ದಿಲೀಪ್ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದು. ಇಂದು ಚಿಕಿತ್ಸೆ ಫಲಕಾರಿಯಾಗದೆ ದಿಲೀಪ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

  ದಿಲೀಪ್ ಕುಮಾರ್ ನಿಧನದಿಂದ ಇಡೀ ಬಾಲಿವುಡ್ ಶೋಕಸಾಗರದಲ್ಲಿ ಮುಳುಗಿದೆ. ಲೆಜೆಂಡ್ ನಟನ ನಿಧನಕ್ಕೆ ಭಾರತೀಯ ಸಿನಿಮಾರಂಗದ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ನ ಅನೇಕ ಕಲಾವಿದರು ದಿಲೀಪ್ ಕುಮಾರ್ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ರಣಬೀರ್ ಕಪೂರ್, ವಿದ್ಯಾ ಬಾಲನ್ ದಂಪತಿ, ಧರ್ಮೇಂದ್ರ, ಅನಿಲ್ ಕಪೂರ್, ಶಾರುಖ್ ಖಾನ್ ಸೇರಿದಂತೆ ಅನೇಕರು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಮುಂದೆ ಓದಿ...

  ಸೈರಾ ಬಾನುರನ್ನು ಸಮಾಧಾನ ಪಡಿಸಿದ ಶಾರುಖ್

  ಸೈರಾ ಬಾನುರನ್ನು ಸಮಾಧಾನ ಪಡಿಸಿದ ಶಾರುಖ್

  ಪತಿಯನ್ನು ಕಳೆದುಕೊಂಡು ಸೈರಾ ಬಾನು ಕಣ್ಣೀರಿಡುತ್ತಿದ್ದಾರೆ. ಬಾಲಿವುಡ್ ನ ಅನೇಕರು ಸಬೈ ಬಾನುಗೆ ಸಾಂತ್ವನ ಹೇಳುತ್ತಿದ್ದಾರೆ. ಧೈರ್ಯ ತುಂಬುತ್ತಿದ್ದಾರೆ. ತನ್ನ ಮಗನಂತೆ ಇರುವ ಶಾರುಖ್ ಖಾನ್ ಸೈರಾ ಬಾನುರನ್ನು ಸಮಾಧಾನ ಪಡಿಸುತ್ತಿರುವ ಮನಮಿಡಿಯುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಪಕ್ಕದಲ್ಲೇ ಕುಳಿತು ಸಾಂತ್ವನ ಹೇಳಿದ ಫೋಟೋ ವೈರಲ್

  ಪಕ್ಕದಲ್ಲೇ ಕುಳಿತು ಸಾಂತ್ವನ ಹೇಳಿದ ಫೋಟೋ ವೈರಲ್

  ದಿಲೀಪ್ ಕುಮಾರ್ ಪಾರ್ಥಿವ ಶರೀರದ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪತ್ನಿ ಸೈರಾ ಬಾನ್ ಅವರನ್ನು ನಟ ಶಾರುಖ್ ಖಾನ್ ಸಮಾಧಾನ ಮಾಡಿದರು. ಸೈರಾ ಪಕ್ಕದಲ್ಲೇ ಕುಳಿತು ಶಾರುಖ್ ಸಾಂತ್ವನ ಹೇಳುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಶಾರುಖ್ ಖಾನ್, ದಿಲೀಪ್ ಕುಮಾರ್ ಕುಟುಂಬದ ಜೊತೆ ತುಂಬಾ ಆಪ್ತರಾಗಿದ್ದವರು. ದಿಲೀಪ್ ಮನೆಗೆ ತೆರಳಿ ಆಗಾಗ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಮನೆಗೆ ಹೋಗುತ್ತಿರಲಿಲ್ಲ.

  ಶಾರುಖ್ ತಮ್ಮ ಮಗ ಇದ್ದಂತೆ ಇನ್ನುತ್ತಿದ್ದರು ದಿಲೀಪ್ ದಂಪತಿ

  ಶಾರುಖ್ ತಮ್ಮ ಮಗ ಇದ್ದಂತೆ ಇನ್ನುತ್ತಿದ್ದರು ದಿಲೀಪ್ ದಂಪತಿ

  ದಿಲೀಪ್ ಕುಮಾರ್ ಮತ್ತು ಸೈರಾ ಬಾನು ಇಬ್ಬರೂ ಶಾರುಖ್ ಖಾನ್ ನನ್ನು ತಮ್ಮ ಮಗ ಎಂದೇ ಹೇಳುತ್ತಿದ್ದರು. ಶಾರುಖ್ ಕೂಡ ಮಗನಂತೆ ಇದ್ದರು. ಸಂದರ್ಶನ ವೊಂದರಲ್ಲಿ ಶಾರುಖ್ ಬಗ್ಗೆ ಮಾತನಾಡಿದ್ದ ಸೈರಾ ಬಾನು, "ನಮಗೆ ಒಬ್ಬ ಮಗನಿದ್ದಿದ್ದರೆ ಅವನು ಶಾರುಖ್ ನಂತೆ ಕಾಣಿಸುತ್ತಿರಬಹುದು ಎಂದು ನಾನು ಯಾವಾಗಲೂ ಹೇಳುತ್ತೇನೆ. ಅವನು ಮತ್ತು ಸಾಬ್ ಇಬ್ಬರೂ ಒಂದೇ ರೀತಿ. ಒಂದೇ ರೀತಿಯ ಕೂದಲನ್ನು ಹೊಂದಿದ್ದಾರೆ" ಎಂದಿದ್ದರು.

  Dr Shiva Rajkumar Biography | ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada
  ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

  ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

  ಶಾರುಖ್ ಕೂಡ ದಿಲೀಪ್ ಮತ್ತು ಸೈರಾ ಅವರನ್ನು ಹೆತ್ತವರಂತೆ ಕಾಣುತ್ತಿದ್ದರು. ಇದೀಗ ಮಗನ ಸ್ಥಾನದಲ್ಲಿ ನಿಂತು ತಾಯಿ ಸೈರಾ ಬಾನು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬಾಲಿವುಡ್ ನ ಬಹುತೇಕ ಮಂದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ದಿಲೀಪ್ ಕುಮಾರ್ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

  English summary
  Actor Shah Rukh Khan Emotional at Dilip Kumar's Funeral as he Consoles Grieving Saira Banu. See heartbreaking pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X