For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗಾಗಿ ಒಂದುವರೆ ವರ್ಷದಿಂದ 'ಮಹಾಭಾರತ' ಓದುತ್ತಿದ್ದಾರಂತೆ ಶಾರೂಖ್.!

  By Naveen
  |

  ಬಾಲಿವುಡ್ ನಟ ಶಾರೂಖ್ ಖಾನ್ 'ಮಹಾಭಾರತ' ಸಿನಿಮಾವನ್ನು ಮಾಡುವ ತಮ್ಮ ಆಸೆಯನ್ನು ಈ ಹಿಂದೆಯೂ ವ್ಯಕ್ತ ಪಡಿಸಿದ್ದರು. ಇದೀಗ ಶಾರೂಖ್ ಖಾನ್ ಮಹಾಭಾರತದ ಅಧ್ಯಯನದಲ್ಲಿ ತೊಡಗಿದ್ದಾರಂತೆ. ನಿನ್ನೆ ರಂಜಾನ್ ಹಬ್ಬ ಆಚರಿಸಿದ ನಂತರ ಶಾರೂಖ್ ಖಾನ್ ಮಾಧ್ಯಮಗಳ ಜೊತೆ ಇದರ ಬಗ್ಗೆ ಮಾತನಾಡಿದ್ದಾರೆ.

  'ಮಹಾಭಾರತ'ದ ಬಗ್ಗೆ ದೊಡ್ಡ ಗೌರವ ಹೊಂದಿರುವ ಶಾರೂಖ್ ಖಾನ್ ಆ ಸಿನಿಮಾವನ್ನು ಮಾಡಬೇಕು ಅಂತ ಅನೇಕ ದಿನದಿಂದ ಪ್ರಯತ್ನ ಪಡುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿರುವ ಅವರು ಒಂದುವರೆ ವರ್ಷದಿಂದ 'ಮಹಾಭಾರತ' ಓದುತ್ತಿದ್ದಾರೆ.

  ಶಾರೂಖ್ ಪುತ್ರಿ ಧರಿಸಿದ್ದ ಬಟ್ಟೆಯ ಬೆಲೆಯಲ್ಲಿ ಯೂರೋಪ್ ಗೆ ಹೋಗಬಹುದಿತ್ತಂತೆ.!

  ಅಂದಹಾಗೆ, ಈಗ ಶಾರೂಖ್ ಖಾನ್ ಮಾತ್ರವಲ್ಲದೆ ಭಾರತ ಚಿತ್ರರಂಗದ ದಿಗ್ಗಜರ ಕಣ್ಣು ಈಗ ಮಹಾಭಾರತದ ಮೇಲೆ ಬಿದ್ದಿದೆ. ಮುಂದೆ ಓದಿ...

  'ಮಹಾಭಾರತ'ದ ಕನಸು

  'ಮಹಾಭಾರತ'ದ ಕನಸು

  ಶಾರೂಖ್ ಖಾನ್ 'ಮಹಾಭಾರತ' ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ. ಈಗಾಗಲೇ ಆ ಸಿನಿಮಾಗಾಗಿ ದೊಡ್ಡ ದೊಡ್ಡ ನಿರ್ಮಾಪಕರ ಜೊತೆ ಮಾತುಕತೆ ನಡೆಸಿದ್ದಾರಂತೆ. ಅಲ್ಲದೆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುವ ಯೋಚನೆ ಶಾರೂಖ್ ಖಾನ್ ಅವರದ್ದು.

  ಶಾರೂಖ್ ಖಾನ್ ಹೇಳಿದ್ದೇನು?

  ಶಾರೂಖ್ ಖಾನ್ ಹೇಳಿದ್ದೇನು?

  ''ನಾನು ಒಂದುವರೆ ವರ್ಷದಿಂದ 'ಮಹಾಭಾರತ'ವನ್ನು ಓದುತ್ತಿದ್ದೇನೆ. ಆ ಕಥೆ ನನಗೆ ತುಂಬ ಇಷ್ಟ. ಅದನ್ನು ನಾನು ನನ್ನ ಮಗ ಅಬ್ರಾಂ ಗೂ ಹೇಳುತ್ತಿದ್ದೇನೆ. 'ಮಹಾಭಾರತ' ಮತ್ತು 'ಇಸ್ಲಾಂ' ಎರಡನ್ನೂ ನಾನು ಓದಿ ನನ್ನ ಮಗನಿಗೆ ಹೇಳುತ್ತಿದ್ದೇನೆ. ಯಾಕಂದ್ರೆ, ಎಲ್ಲ ಧರ್ಮವನ್ನು ನಾನು ಪ್ರೀತಿಸಬೇಕು'' - ಶಾರೂಖ್ ಖಾನ್

  'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರೂಖ್ ಖಾನ್ ಗೆಟಪ್ ಲೀಕ್

  ಮೌಳಿ 'ಮಹಾಭಾರತ'

  ಮೌಳಿ 'ಮಹಾಭಾರತ'

  'ಬಾಹುಬಲಿ' ಯಶಸ್ಸಿನ ನಂತರ ನಿರ್ದೇಶಕ ರಾಜಮೌಳಿ 'ಮಹಾಭಾರತ' ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಶಾರೂಖ್ ಅವರ ಈ ಸಿನಿಮಾಗೂ ರಾಜಮೌಳಿ ಅವರಿಗೂ ಯಾವುದೇ ಸಂಬಂಧ ಇಲ್ಲ.

  ಬಿ.ಆರ್.ಶೆಟ್ಟಿ ಸಿನಿಮಾ

  ಬಿ.ಆರ್.ಶೆಟ್ಟಿ ಸಿನಿಮಾ

  ದುಬೈ ಮೂಲದ ಕನ್ನಡಿಗ ಬಿ.ಆರ್.ಶೆಟ್ಟಿ ಅವರು ಸಹ 'ಮಹಾಭಾರತ' ಸಿನಿಮಾ ಮಾಡುವ ಕನಸನ್ನು ಹೇಳಿಕೊಂಡಿದ್ದರು. ಆ ಸಿನಿಮಾ ಬರೋಬ್ಬರಿ 1000 ಕೋಟಿಯಲ್ಲಿ ನಿರ್ಮಾಣವಾಗಲಿದೆ.

  ಶಾರೂಖ್ ಖಾನ್ ಅಭಿಮಾನಿಗಳ ಬಾಯಿಗೆ ಲಡ್ಡು ಬಂದು ಬೀಳಲಿದೆ.!

  ಕನ್ನಡದ 'ಕುರುಕ್ಷೇತ್ರ'

  ಕನ್ನಡದ 'ಕುರುಕ್ಷೇತ್ರ'

  ಸ್ಯಾಂಡಲ್ ವುಡ್ ನಲ್ಲಿಯೂ ಮಹಾಭಾರತದ ಕಥೆ ಸಿನಿಮಾವಾಗುತ್ತಿದೆ. 'ಕುರುಕ್ಷೇತ್ರ' ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ದರ್ಶನ್ ಮತ್ತು ರವಿಚಂದ್ರನ್ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ.

  English summary
  Shah Rukh Khan has been reading 'Mahabharatha' for one-and-a-half years, and he said it is his dream project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X