»   » ಟ್ವಿಟ್ಟರಲ್ಲಿ ಬಿಗ್ ಬಿ ನಂತರ ಶಾರುಖ್ ಇಸ್ ಕಿಂಗ್

ಟ್ವಿಟ್ಟರಲ್ಲಿ ಬಿಗ್ ಬಿ ನಂತರ ಶಾರುಖ್ ಇಸ್ ಕಿಂಗ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಾಮಾಜಿಕ ಜಾಲ ತಾಣಗಳ ಮೂಲಕ ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿರುವುದು ಸುಳ್ಳಲ್ಲ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ವಿಷಯಕ್ಕೆ ಬಂದರೆ ಅಮಿತಾಬ್ ಬಚ್ಚನ್ ಈಗಲೂ ಬಾಲಿವುಡ್ ನ ಬಾದ್ ಷಾ ಆಗಿ ಮೆರೆಯುತ್ತಿದ್ದಾರೆ.

ಬಿಗ್ ಬಿ ನಂತರದ ಸ್ಥಾನದಲ್ಲಿ ಶಾರುಖ್ ಖಾನ್ ಇದ್ದು, 15 ಮಿಲಿಯನ್ ಹಿಂಬಾಲಕರ ಗಡಿ ದಾಟಿದ ಎರಡನೇ ಭಾರತೀಯ ನಟ ಎನಿಸಿಕೊಂಡಿದ್ದಾರೆ.

Shahrukh Khan

ಚೆನ್ನೈ ಎಕ್ಸ್ ಪ್ರೆಸ್ ನ ಸ್ಟಾರ್ 49 ವರ್ಷ ವಯಸ್ಸಿನ ಶಾರುಖ್ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ. ನಿಮ್ಮನ್ನೆಲ್ಲ ಮುನ್ನಡೆಸುತ್ತೇನೆ ಎಂಬುದಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತಿಲ್ಲ. ನನ್ನ ಇರುವಿಕೆಯನ್ನು ಗುರುತಿಸಲು ನೀವೆಲ್ಲ ಜೊತೆಗಿದ್ದೀರಿ ಎಂಬುದು ಮುಖ್ಯ ಎಂದು ಕಿಂಗ್ ಖಾನ್ ಟ್ವೀಟ್ ಮಾಡಿದ್ದಾರೆ.

ಶಾರುಖ್ ಖಾನ್ ಅವರ ನಂತರ ಅಮೀರ್ ಖಾನ್ 14.4 ಮಿಲಿಯನ್ ಹಾಗೂ ಸಲ್ಮಾನ್ ಖಾನ್ 13.7 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಚಿತ್ರೀಕರಣದ ಮಾಹಿತಿ, ಚಿತ್ರಗಳು, ವಿಡಿಯೋಗಳು, ಡಬ್ ಸ್ಮಾಶ್ ತುಣುಕು, ವೈಯಕ್ತಿಕ ಚಿತ್ರಗಳು, ಹಬ್ಬ ಹರಿದಿನ, ಈದ್ ಮಿಲಾದ್, ಕ್ರಿಸ್ ಮಸ್ ಶುಭ ಹಾರೈಕೆಗಳು, ಫ್ಯಾನ್ಸ್ ಜೊತೆ ಪ್ರಶ್ನೋತ್ತರ, ಆಗಾಗ ಕಿತ್ತಾಟ, ಕಾಲೆಳೆಯುವುದು, ಸೆಲ್ಫಿಗಳು ಎಲ್ಲವೂ ಟ್ವಿಟ್ಟರ್ ಸೆಲೆಬ್ರಿಟಿಗಳಿಂದ ನಡೆಯುತ್ತಿರುತ್ತದೆ.

ಶಾರುಖ್ ಖಾನ್ ಅವರು ಯಶ್ ರಾಜ್ ಬ್ಯಾನರ್ ನಲ್ಲಿ 'ಫ್ಯಾನ್' ಹಾಗೂ ರೋಹಿತ್ ಶೆಟ್ಟಿ ಅವರ 'ದಿಲ್ವಾಲೆ' ಯಲ್ಲಿ ನಟಿಸುತ್ತಿದ್ದಾರೆ.

English summary
Superstar Shah Rukh Khan reached a milestone of 15 million fan following on Twitter, becoming the second Indian actor to have the maximum admirers on the micro-blogging site, after megastar Amitabh Bachchan.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X