Don't Miss!
- Finance
Budget 2023: ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?
- News
Budget 2023: 50 ಹೊಸ ವಿಮಾನ ನಿಲ್ದಾಣಗಳ ಘೋಷಣೆ
- Sports
ಅತಿರೇಕದ ಸಂಭ್ರಮಾಚರಣೆ: ಐಪಿಎಲ್ ದುಬಾರಿ ಆಟಗಾರನಿಗೆ ಬಿತ್ತು ದಂಡ
- Automobiles
ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Technology
ಅಬ್ಬಬ್ಬಾ... ಈ ಅಂಬ್ರೇನ್ ಪವರ್ ಬ್ಯಾಂಕ್ನ ಬ್ಯಾಕಪ್ ಎಷ್ಟಿದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪಠಾಣ್' ಚಿತ್ರಕ್ಕೆ ನೀವು ಪಡೆದ ಸಂಭಾವನೆ ಎಷ್ಟು? ಅಭಿಮಾನಿ ಪ್ರಶ್ನೆಗೆ ಶಾರುಕ್ ಉತ್ತರ ಏನು?
ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರಕ್ಕಾಗಿ ಕಿಂಗ್ ಖಾನ್ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನುವ ಚರ್ಚೆ ಇತ್ತೀಚೆಗೆ ನಡೆದಿತ್ತು. ಸಂಭಾವನೆ ಬಗ್ಗೆ ಅಭಿಮಾನಿಯೊಬ್ಬ ನೇರವಾಗಿ ಶಾರುಕ್ ಬಳಿ ಕೇಳಿದ್ದಾನೆ. ಇದನ್ನು ಬಾಲಿವುಡ್ ಬಾದ್‌ಶಾ ಉತ್ತರ ಕೂಡ ಕೊಟ್ಟಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಪಠಾಣ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. 'ಬೇಷರಂ ರಂಗ್' ಸಾಂಗ್ ವಿವಾದದಿಂದ 'ಪಠಾಣ್' ಸಿನಿಮಾ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ಚಿತ್ರದಲ್ಲಿ ಶಾರುಕ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಪವರ್‌ಫುಲ್ ರೋಲ್‌ನಲ್ಲಿ ಬಾಲಿವುಡ್ ಬಾದ್‌ಶಾಗೆ ಸಾಥ್ ಕೊಟ್ಟಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.
"ನಿಮ್ಮ
ಆಸ್ಕರ್
ಅವಾರ್ಡ್
ಮುಟ್ಟಲು
ಅವಕಾಶ
ಕೊಡ್ತೀರಾ?"
ಎಂದು
ಕೇಳಿದ
ಶಾರುಕ್:
ರಾಮ್
ಚರಣ್
ಏನಂದ್ರು?
'ಪಠಾಣ್' ಚಿತ್ರಕ್ಕಾಗಿ ಶಾರುಕ್ ಖಾನ್ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸು ಗುಸು ಕೇಳಿಬರ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬನ ಪ್ರಶ್ನೆಗೆ ಕಿಂಗ್ ಖಾನ್ ಉತ್ತರಿಸಿದ್ದಾರೆ.

'ಆಸ್ಕ್ ಎಸ್‌ಆರ್‌ಕೆ' ಸೆಷನ್
ಶಾರುಕ್ ಖಾನ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿರುತ್ತಾರೆ. 'ಆಸ್ಕ್ ಎಸ್‌ಆರ್‌ಕೆ' ಹ್ಯಾಷ್‌ಟ್ಯಾಗ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇದೇ ರೀತಿ ಪ್ರಶ್ನೋತ್ತರ ನಡೆದಿತ್ತು. ಆದ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಂಗ ಇಂಟ್ರೆಸ್ಟಿಂಗ್ ಉತ್ತರ ಕೊಟ್ಟಿದ್ದರು. ಕೆಲ ಫನ್ನಿ ಉತ್ತರಗಳು ಸಖತ್ ವೈರಲ್ ಆಗಿತ್ತು.
|
'ಪಠಾಣ್'ಗೆ ನಿಮ್ಮ ಸಂಭಾವನೆ ಎಷ್ಟು?
ಬಾಲಿವುಡ್ ಕಿಂಗ್ ಖಾನ್ ಮತ್ತೊಮ್ಮೆ 'ಆಸ್ಕ್ ಎಸ್‌ಆರ್‌ಕೆ' ಸೆಷನ್ ನಡೆಸಿದ್ದಾರೆ. ಈ ಬಾರಿ ಕೂಡ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳು ಎದುರಾಗಿತ್ತು. ಅಭಿಮಾನಿಯೊಬ್ಬ 'ಪಠಾಣ್' ಚಿತ್ರಕ್ಕೆ ನಿಮ್ಮ ಸಂಭಾವನೆ ಎಷ್ಟು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ಶಾರುಕ್ "ಯಾಕೆ ನಿಮ್ಮ ಮುಂದಿನ ಸಿನಿಮಾದಲ್ಲಿ ಸಹಿ ಮಾಡಬೇಕೆ?" ಎಂದು ಫನ್ನಿಯಾಹಿ ಕೌಂಟರ್ ಕೊಟ್ಟಿದ್ದಾರೆ. "ನಿಮ್ಮ ಮೊದಲ ಗರ್ಲ್ ಫ್ರೆಂಡ್ ಯಾರು?" ಎನ್ನುವ ಮತ್ತೊಂದು ಪ್ರಶ್ನೆಗೆ "ನನ್ನ ಪತ್ನಿ ಗೌರಿ" ಎಂದು ಉತ್ತರಿಸಿದ್ದಾರೆ.

ಆಕ್ಷನ್ ಥ್ರಿಲ್ಲರ್ 'ಪಠಾಣ್'
'ಜೀರೊ' ಸಿನಿಮಾ ಸೋಲಿನ ನಂತರ ಬಾಲಿವುಡ್ ಕಿಂಗ್ ಖಾನ್ ಸೈಲೆಂಟ್ ಆಗಿಬಿಟ್ಟಿದ್ದರು. ಬರೋಬ್ಬರಿ 4 ವರ್ಷಗಳ ನಂತರ 'ಪಠಾಣ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಒಂದ್ಕಾಲದಲ್ಲಿ ಬಾಲಿವುಡ್ ಬಾದ್‌ಶಾ ಆಗಿ ಮೆರೆದ ಶಾರುಕ್ 4 ವರ್ಷ ಸಿನಿಮಾ ಮಾಡದೇ ಇರೋದು ಅಂದರೆ ತಮಾಷೆಯ ಮಾತಲ್ಲ. ಚಿತ್ರದ ಟ್ರೈಲರ್‌ನಲ್ಲಿ ಒಂದು ಡೈಲಾಗ್ ಇದೆ. 'ಪಠಾಣ್' ವನವಾಸ ಮುಗೀತು ಅಂತ. ಆ ಡೈಲಾಗ್ ಅನ್ನು ಫ್ಯಾನ್ಸ್ ಶಾರುಕ್‌ಗೆ ಹೋಲಿಸಿ ನೋಡುತ್ತಿದ್ದಾರೆ.

ಕಂಬ್ಯಾಕ್ ಮಾಡ್ತಾರಾ ಶಾರುಕ್?
ಶಾರುಕ್ ಖಾನ್ ಫಿನಿಕ್ಸ್ ರೀತಿ ಎದ್ದು ಬರಬೇಕಿದೆ. ಸೋತು ಸುಣ್ಣವಾಗಿರುವ ಬಾಲಿವುಡ್ 'ಪಠಾಣ್' ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಚಿತ್ರದ ಟ್ರೈಲರ್‌ಗೆ ಭರ್ರರಿ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಭಾರತದ ಮೇಲೆ ಉಗ್ರದ ದಾಳಿ ತಡೆಯುವ ವೀರ ಸೈನಿಕ 'ಪಠಾಣ್' ಆಗಿ ಶಾರುಕ್ ಖಾನ್ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿದೆ. ಎಲ್ಲಾ ವಿವಾದಗಳನ್ನು ಮರೆಸುವಂತೆ ಸಿನಿಮಾ ಗೆಲ್ಲುವ ಸುಳಿವು ಸಿಗುತ್ತಿದೆ.