For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್ 'ಇಂಗ್ಲೀಷ್ ಮಾರ್ಕ್ಸ್'ನ ಬಗ್ಗೆ ಬಿಸಿಬಿಸಿ ಚರ್ಚೆ

  By Bharath Kumar
  |

  ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ತಮ್ಮ ನಟನೆ ಮೂಲಕವೇ ಕಿಂಗ್ ಖಾನ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಸಂಪಾದಿಸಿಕೊಂಡಿರುವ ಕಿಂಗ್ ಖಾನ್ ಬಾಲಿವುಡ್ ಬಾದ್ ಶಾ, ಬಾಕ್ಸ್ ಆಫೀಸ್ ಸುಲ್ತಾನ್ ಕೂಡ ಹೌದು.

  ಹೀಗಿರುವಾಗ, ಶಾರೂಖ್ ಖಾನ್ ಓದಿನ ಬಗ್ಗೆ ಎಲ್ಲಿಯೂ ಚರ್ಚೆ ಆಗುತ್ತಿರಲಿಲ್ಲ. ಆದ್ರೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಶಾರೂಖ್ ಖಾನ್ ಅವರ ಶಿಕ್ಷಣವೇ ಹಾಟ್ ಟಾಪಿಕ್. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಬಿಸ್ ನೆಸ್ ಮ್ಯಾನ್ ಗಳು ಕೂಡ ಸದ್ಯ ಶಾರೂಖ್ ಓದಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಶಾರೂಖ್ ಖಾನ್ ಅವರ ಕಾಲೇಜ್ ಅಡ್ಮಿಷನ್ ಅರ್ಜಿ.[ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ.!]

  ಹೌದು, ಶಾರೂಖ್ ಖಾನ್ ಅವರ ಕಾಲೇಜ್ ದಾಖಲಾತಿ ಅರ್ಜಿ ವೈರಲ್ ಆಗಿದ್ದು, ಖಾನ್ ಪಡೆದಿರುವ ಇಂಗ್ಲೀಷ್ ಮಾರ್ಕ್ಸ್ ಬಗ್ಗೆ ಬಿಸಿ ಬಿಸಿ ಚರ್ಚೆ ಆಗ್ತಿದೆ. ಮುಂದೆ ಓದಿ.....

  ಶಾರೂಖ್ ಇಂಗ್ಲೀಷ್ ಮಾರ್ಕ್ಸ್ ಎಷ್ಟು?

  ಶಾರೂಖ್ ಇಂಗ್ಲೀಷ್ ಮಾರ್ಕ್ಸ್ ಎಷ್ಟು?

  ಸದ್ಯ ವೈರಲ್ ಆಗಿರುವ ಕಾಲೇಜ್ ಅಡ್ಮಿಷನ್ ಅರ್ಜಿಯಲ್ಲಿ ಶಾರೂಖ್ ಖಾನ್ ಇಂಗ್ಲೀಷ್ ನಲ್ಲಿ ಪಡೆದಿರುವ ಅಂಕ 100ಕ್ಕೆ 51. ಇದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಚರ್ಚೆಯ ಕೇಂದ್ರ ಬಿಂದು.[ಕಳೆದ ವರ್ಷ ಸಲ್ಲು ಆದಾಯ ಬರೋಬ್ಬರಿ 270 ಕೋಟಿ ರು. !]

  'ಹನ್ಸ್ ರಾಜ್ ಕಾಲೇಜ್'ನ ದಾಖಲಾತಿ ಅರ್ಜಿ

  'ಹನ್ಸ್ ರಾಜ್ ಕಾಲೇಜ್'ನ ದಾಖಲಾತಿ ಅರ್ಜಿ

  ಇದು ದೆಹಲಿ ವಿಶ್ವವಿದ್ಯಾಲಯದ ಹನ್ಸ್ ರಾಜ್ ಕಾಲೇಜ್ ನಲ್ಲಿ ಶಾರೂಖ್ ಖಾನ್ ಭರ್ತಿ ಮಾಡಿರುವ ದಾಖಲಾತಿ ಅರ್ಜಿ. 1983-1984 ರಲ್ಲಿ ಪಡೆದಿರುವ ಅಂಕವಿದು.[ಮೂರು ವರ್ಷದ ಪುತ್ರನಿಗೆ ಶಾರೂಖ್ ಕಟ್ಟಿಕೊಟ್ಟ ಪುಟಾಣಿ ಮನೆ!]

  ಶಾರೂಖ್ ಮಾರ್ಕ್ಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ!

  ಶಾರೂಖ್ ಮಾರ್ಕ್ಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ!

  ಶಾರೂಖ್ ಖಾನ್ ಇಂಗ್ಲಿಷ್ ನಲ್ಲಿ 51 ಅಂಕ ಗಳಿಸಿರುವುದು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ನಟನೆಯಲ್ಲಿ ಮುಂದಿರುವ ಶಾರೂಖ್ ಓದಿನಲ್ಲಿ ಹಿಂದಿದ್ದರು ಎಂಬ ವಾದ ಕೇಳಿಬರುತ್ತಿದೆ. ಇದು ಕಡಿಮೆ ಅಂಕ ಎಂದು ಕೆಲವರು ಹೇಳುತ್ತಿದ್ದರೇ, ಇನ್ನು ಕೆಲವರು ಶಾರುಖ್ ಒಟ್ಟು ಶೇ. 74.25 ರಷ್ಟು ಅಂಕಗಳಿಸಿರುವುದು ಆಗಿನ ಕಾಲಕ್ಕೆ ಅದೇ ಉತ್ತಮವಾದ ಅಂಕ ಎಂದು ಮೆಚ್ಚುಗೆಯ ವ್ಯಕ್ತಪಡಿಸುತ್ತಿದ್ದಾರೆ.[ಅಂಕ ಎಷ್ಟು ಬಂತೆಂದು ಬೀಗದೆ, ಬಾಗದೆ ಮುನ್ನಡೆಯಿರಿ]

  ಶಾರೂಖ್ ವಿದ್ಯಾಭ್ಯಾಸವೇನು?

  ಶಾರೂಖ್ ವಿದ್ಯಾಭ್ಯಾಸವೇನು?

  ಶಾರೂಖ್ ದೆಹಲಿ ಕೊಲಿಂಬಿಯಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ದೆಹಲಿಯ ಹನ್ಸ್ ರಾಜ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿದ್ದ ಶಾರೂಖ್ (1985-88) ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ 'ಮಾಸ್ ಕಮ್ಯುನಿಕೇಷನ್ಸ್'ನಲ್ಲಿ ಉನ್ನತ ಶಿಕ್ಷಣ ಮಾಡಲು ಮುಂದಾದರು. ಆದ್ರೆ, ಅರ್ಧದಲ್ಲಿ ನಿಲ್ಲಿಸಿ ಬಣ್ಣದ ಜಗತ್ತಿಗೆ ಕಾಲಿಟ್ಟರು.

  ಸಾಧನೆಗೆ ಅಂಕ ಮಾನದಂಡವಲ್ಲ!

  ಸಾಧನೆಗೆ ಅಂಕ ಮಾನದಂಡವಲ್ಲ!

  ಶಾರೂಖ್ ಖಾನ್ ತಮ್ಮ ನಟನಾ ಕೌಶಲ್ಯದಿಂದಲೇ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದಾರೆ. ಯಶಸ್ಸಿಗೆ ಅಂಕ ಗಳಿಕೆ ಮಾನದಂಡವಲ್ಲ ಎಂಬ ಮಾತು ಕಿಂಗ್ ಖಾನ್ ವಿಚಾರದಲ್ಲಿ ನಿಜವಾಗಿದೆ.

  English summary
  Bollywood Actor Shah Rukh Khan's Admission form has gone viral and students have interesting responses, particularly, to his English marks.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X