For Quick Alerts
  ALLOW NOTIFICATIONS  
  For Daily Alerts

  ಒಂದೇ ಸಿನಿಮಾ ಎಂಟು ದೇಶಗಳಲ್ಲಿ ಚಿತ್ರೀಕರಿಸಿದ ಶಾರುಖ್: ಟೀಸರ್ ಶೀಘ್ರದಲ್ಲೇ

  |

  ಶಾರುಖ್ ಖಾನ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯದ ಸಿನಿಮಾ ಒಂದು ಬಿಡುಗಡೆ ಆಗಿ ನಾಲ್ಕು ವರ್ಷಕ್ಕೂ ಹೆಚ್ಚಾಗಿದೆ. ಹಿಟ್ ಸಿನಿಮಾ ನೀಡಿ ಒಂಬತ್ತು ವರ್ಷವಾಗಿದೆ. ಆದರೂ ಶಾರುಖ್ ಮೇಲಿನ ನಿರೀಕ್ಷೆ ಕಡಿಯಾಗಿಲ್ಲ.

  ಇಷ್ಟು ದೊಡ್ಡ ಗ್ಯಾಪ್ ತೆಗೆದುಕೊಂಡಿರುವ ಶಾರುಖ್ ಖಾನ್ ಭರ್ಜರಿ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಒಂದರಲ್ಲಿ ಶಾರುಖ್ ನಟಿಸಿದ್ದು, ಆ ಸಿನಿಮಾವನ್ನು ಪ್ರತಿಷ್ಠಿತ ಯಶ್‌ರಾಜ್ ಫಿಲಮ್ಸ್‌ ನಿರ್ಮಾಣ ಮಾಡಿದ್ದಾರೆ.

  ಶಾರುಖ್ ಖಾನ್‌ರ 'ಪಠಾಣ್' ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಇದೊಂದು ಅದ್ಧೂರಿ ಆಕ್ಷನ್ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಎಂಟು ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ.

  'ಪಠಾಣ್' ಸಿನಿಮಾ ಶಾರುಖ್ ಖಾನ್‌ಗೆ ಒಂದು ರೀತಿಯ ಕಮ್‌ಬ್ಯಾಕ್ ಸಿನಿಮಾ ಆಗಿದ್ದು, ಶಾರುಖ್ ಜೊತೆಗೆ ಜಾನ್ ಅಬ್ರಹಾಮ್, ದೀಪಿಕಾ ಪಡುಕೋಣೆ ನಟಿಸಿರುವ ಈ ಸಿನಿಮಾ ಗೂಢಚಾರಿಯ ಕತೆಯನ್ನು ಹೊಂದಿರಲಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿರಲಿದ್ದು, ಸಿನಿಮಾದ ಕತೆಯು ಹಲವು ಬೇರೆ ಬೇರೆ ದೇಶಗಳಲ್ಲಿ ನಡೆಯಲಿದೆ. ಹಾಲಿವುಡ್‌ನ 'ಮಿಷನ್ ಇಂಪಾಸಿಬಲ್' ಮಾದರಿಯಲ್ಲಿಯೇ ಕತೆ ಹಾಗೂ ಸಾಹಸ ದೃಶ್ಯಗಳು ಈ ಸಿನಿಮಾದಲ್ಲಿರಲಿವೆ ಎನ್ನಲಾಗಿದೆ.

  'ಪಠಾಣ್' ಸಿನಿಮಾವನ್ನು ಭಾರತ, ಇಟಲಿ, ಯುಎಇ, ಫ್ರಾನ್ಸ್, ಟರ್ಕಿ, ಸ್ಪೇನ್, ರಷ್ಯಾ ಹಾಗೂ ಅಫ್ಘನಿಸ್ತಾನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಕೆಲವು ಸ್ಟಿಲ್‌ಗಳನ್ನು ನಿರ್ಮಾಪಕ ಆದಿತ್ಯ ಚೋಪ್ರಾ ಹಂಚಿಕೊಂಡಿದ್ದು, ಇದೊಂದು ಭರ್ಜರಿ ಆಕ್ಷನ್ ಸಿನಿಮಾ ಆಗಿದ್ದು, ಹಲವು ಮೈನವಿರೇಳಿಸುವ ದೃಶ್ಯಗಳು ಸಿನಿಮಾದಲ್ಲಿರಲಿವೆ ಎಂದಿದ್ದಾರೆ.

  'ಪಠಾಣ್' ಸಿನಿಮಾದ ಬಳಿಕ ಶಾರುಖ್ ಖಾನ್‌ರ 'ಡಂಕಿ' ಸಿನಿಮಾ ತೆರೆಗೆ ಬರಲಿದೆ. ಭಾರತದ ಅತ್ಯುತ್ತಮ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ. 'ಡಂಕಿ' ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ದುಬೈನಲ್ಲಿ ಪ್ಯಾಕ್‌ಅಪ್ ಆಗಿದೆ. ಮುಂದಿನ ಷೆಡ್ಯೂಲ್ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

  ಆ ಸಿನಿಮಾದ ಬಳಿಕ ಶಾರುಖ್ ಖಾನ್‌ ಮುಖ್ಯ ಪಾತ್ರದಲ್ಲಿರುವ 'ಬ್ರಹ್ಮಾಸ್ತ್ರ' ಸಿನಿಮಾ ಸಹ ಚಿತ್ರೀಕರಣಗೊಳ್ಳಲಿದೆ. ಈಗ ಬಿಡುಗಡೆ ಆಗಿರುವ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಶಾರುಖ್ ಖಾನ್‌ರ ಅತಿಥಿ ಪಾತ್ರಕ್ಕೆ ಬಹಳ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಕೆಲವು ಸಿನಿಮಾ ಹಾಗೂ ವೆಬ್ ಸರಣಿಗಳ ನಿರ್ಮಾಣ ಸಹ ಮಾಡುತ್ತಿದ್ದಾರೆ ಶಾರುಖ್ ಖಾನ್.

  English summary
  Shah Rukh Khan's Pathaan movie shot in eight different countries. John Abraham and Deepika Padukone acted along with SRK in Pathaan movie.
  Saturday, December 3, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X