»   » ಸಲ್ಮಾನ್ ಮತ್ತು ಶಾರೂಖ್ ಫ್ಯಾನ್ಸ್ ಗೆ ಇದು ಖುಷಿಯ ಜೊತೆ ಅಚ್ಚರಿ.!

ಸಲ್ಮಾನ್ ಮತ್ತು ಶಾರೂಖ್ ಫ್ಯಾನ್ಸ್ ಗೆ ಇದು ಖುಷಿಯ ಜೊತೆ ಅಚ್ಚರಿ.!

Posted By:
Subscribe to Filmibeat Kannada

ಬಾಲಿವುಡ್ ಖಾನ್ ಗಳು ಹೊರ ಪ್ರಪಂಚಕ್ಕೆ ಸ್ನೇಹಿತರಂತೆ ಬಿಂಬಿತರಾಗಿದ್ದರು, ಬಾಕ್ಸ್ ಆಫೀಸ್ ವಿಚಾರಕ್ಕೆ ಬಂದ್ರೆ ಅವರೆಲ್ಲರೂ ಕಾಂಪಿಟೇಟರ್ ಗಳೇ. ಹೀಗಾಗಿ, ಕಳೆದ ಕೆಲ ವರ್ಷಗಳಿಂದ ಸಲ್ಮಾನ್ ಮತ್ತು ಶಾರೂಖ್ ಒಟ್ಟಿಗೆ ಯಾವ ಸಿನಿಮಾನೂ ಮಾಡಿರಲಿಲ್ಲ. ಆದ್ರೀಗ, ಖಾನ್ ಗಳು ಬಾಲಿವುಡ್ ಮಂದಿಗೆ ಖುಷಿಯ ಜೊತೆಗೆ ಅಚ್ಚರಿ ಕೂಡ ನೀಡಿದ್ದಾರೆ.

ಒಂದು ಕಾಲದಲ್ಲಿ ಒಟ್ಟಾಗಿ ಸಾಲು ಸಾಲು ಸಿನಿಮಾ ಮಾಡಿದ್ದ ಇವರು ಇತ್ತೀಚಿನ ವರ್ಷಗಳಲ್ಲಿ ಒಂದೇ ಒಂದು ಸಿನಿಮಾದಲ್ಲೂ ಒಟ್ಟಾಗಿ ಕಾಣಿಸಿಕೊಂಡೇ ಇಲ್ಲ. ಹಲವು ನಿರ್ಮಾಪಕರು, ನಿರ್ದೇಶಕರು ಇವರಿಬ್ಬರನ್ನ ಒಟ್ಟಾಗಿಸಲು ಪ್ರಯತ್ನ ಪಟ್ಟರು ಇದು ಸಾಧ್ಯವಾಗಿರಲಿಲ್ಲ. ಆದ್ರೀಗ, ಈ ಕನಸು ನನಸಾಗಿದೆ. ಇಬ್ಬರನ್ನ ಮತ್ತೆ ಒಂದೇ ಚಿತ್ರದಲ್ಲಿ, ಒಂದೇ ತೆರೆಯಲ್ಲಿ ನೋಡುವ ಅವಕಾಶ ಸಿಕ್ಕಿದೆ.['ಟ್ಯೂಬ್ ಲೈಟ್' ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ ಸಲ್ಮಾನ್ ಖಾನ್]

Shah Rukh Khan sharing screen space With Salman Khan

ಹೌದು, ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರದಲ್ಲಿ ಶಾರೂಖ್ ಖಾನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಬಣ್ಣ ಹಚ್ಚುವ ಮೂಲಕ ಸಲ್ಲು ಜೊತೆ ಮತ್ತೆ ತೆರೆ ಹಂಚಿಕೊಂಡಿದ್ದಾರೆ. ಶಾರೂಖ್ ಖಾನ್ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಚಿತ್ರದ ಬಹುಮುಖ್ಯ ಸನ್ನಿವೇಶದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.[ಬಾಹುಬಲಿ ದಾಖಲೆಯನ್ನ ಬ್ರೇಕ್ ಮಾಡುವುದು ಇವರಿಂದ ಸಾಧ್ಯವಂತೆ!]

ಇದಕ್ಕೂ ಮುಂಚೆ, 'ಕರಣ್ ಅರ್ಜುನ್', 'ದುಶ್ಮನ್ ದುನಿಯಾ ಕ', 'ಕುಚ್ ಕುಚ್ ಹೋತಾ ಹೈ', 'ಹಮ್ ತುಮಾರೇ ಹೈನೇ ಸನಮ್', 'ಹರ್ ದಿಲ್ ಜೋ ಪ್ಯಾರ್ ಕರೆಗೇ' ಚಿತ್ರಗಳಲ್ಲಿ ಸಲ್ಲು ಮತ್ತು ಶಾರೂಖ್ ಒಟ್ಟಾಗಿ ಅಭಿನಯಿಸಿದ್ದರು. ಇದೀಗ, 'ಟ್ಯೂಬ್ ಲೈಟ್' ಚಿತ್ರದ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ.['ಬಾಹುಬಲಿ' ಮುಂದೆ ಬಹಿರಂಗವಾಗಿ ಸೋಲು ಒಪ್ಪಿಕೊಂಡ ಸಲ್ಮಾನ್ ಖಾನ್.!]

ಅಂದ್ಹಾಗೆ, ಕಬೀರ್ ಖಾನ್ ನಿರ್ದೇಶನ ಮಾಡಿರುವ 'ಟ್ಯೂಬ್ ಲೈಟ್' ಚಿತ್ರ ಇದೇ ತಿಂಗಳು ಈದ್ ಹಬ್ಬಕ್ಕೆ ತೆರೆಕಾಣಲಿದೆ. ಜೂನ್ 23ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರ ಚೀನಾ-ಭಾರತ ಯುದ್ಧದ ಕುರಿತು ಮಾಡಿರುವ ಸಿನಿಮಾ. ಮುಖ್ಯಪಾತ್ರದಲ್ಲಿ ಶೋಹಿಲ್ ಖಾನ್ ಕಾಣಿಸಿಕೊಂಡಿದ್ರೆ, ಚೈನಿಸ್ ನಟಿ ಜುಜು ನಾಯಕಿ ಆಗಿದ್ದಾರೆ.

English summary
Shah Rukh Khan and Salman Khan are sharing screen space after a DECADE, through of Salman Starrer TubeLight Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada